ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ ಕಳೆದ ವರ್ಷದಿಂದ ಡಾ. ವಿಷ್ಣುವರ್ಧನ ಅವರ ನೆನಪಿನಲ್ಲಿ ಐಎಎಸ್ ಮತ್ತು ಕೆಎಎಸ್ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಾ ಬಂದಿದ್ದಾರೆ. ಮೊದಲನೇ ಬ್ಯಾಚ್ ಅತ್ಯಂತ ಯಶಸ್ವಿಯಾಗಿ ಮುಗಿದಿದ್ದು, ವಿದ್ಯಾರ್ಥಿಗಳು ಉನ್ನತ ಪರೀಕ್ಷೆಯನ್ನು ಎದುರಿಸಲು ಸಿದ್ದರಾಗಿದ್ದಾರೆ.
ವೀರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ವಿಷ್ಣು ಸೇನಾ ಸಮಿತಿ ಒಂದಲ್ಲ ಒಂದು ಸಮಾಜಸ್ನೇಹಿ ಕಾರ್ಯಗಳನ್ನು ನಡೆಸುತ್ತಲೇ ಬರುತ್ತಿದೆ. ಸಾಹಸಿಂಹ ವಿಷ್ಣುವರ್ಧನ್ ಅಭಿಮಾನಿಗಳನ್ನು ಒಗ್ಗೂಡಿಸಿ ವಿಷ್ಣು ಹೆಸರನ್ನು ಸಾರ್ಥಕಗೊಳಿಸುವ ಕೆಲಸ ಕಾರ್ಯಗಳನ್ನು ವಿಷ್ಣು ಸೇನೆ ನಡೆಸುತ್ತಿದೆ. ಅತ್ಯಂತ ಪಾರದರ್ಶಕವಾಗಿ ಮುಂದಡಿ ಇಡುತ್ತಿರುವ ವಿಷ್ಣು ಸೇನೆ ರಾಜ್ಯಾದಂತ ಮೂವತೈದು ವಿಷ್ಣು ಪ್ರತಿಮೆಗಳನ್ನು ಸ್ಥಾಪನೆ ಮಾಡಿಸಿದೆ. ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದಾರೆ, ಅಭಿಮಾನಿಗಳೆಲ್ಲ ಇದಕ್ಕೆ ಒತ್ತಾಸೆಯಾಗಿದ್ದಾರೆ. ಇನ್ನುಳಿದಂತೆ ಪ್ರಕೃತಿ ವಿಕೋಪದಿಂದ ತತ್ತರಿಸಿದ ಸಂದರ್ಭದಲ್ಲೂ ಅಲ್ಲಿನ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಯಾರದ್ದೋ ಸಂಕಟಕ್ಕೆ ವಿಷ್ಣು ಹೆಸರಲ್ಲಿ ಮಿಡಿಯುವ ಈ ಮಾನವೀಯ ಕಾರ್ಯಗಳು ದಾದಾ ಹೆಸರನ್ನು ಯಾವತ್ತಿಗೂ ಜೀವಂತವಾಗಿಡುವಂಥದ್ದು.
ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ ಕಳೆದ ವರ್ಷದಿಂದ ಡಾ. ವಿಷ್ಣುವರ್ಧನ ಅವರ ನೆನಪಿನಲ್ಲಿ ಐಎಎಸ್ ಮತ್ತು ಕೆಎಎಸ್ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಾ ಬಂದಿದ್ದಾರೆ. ಮೊದಲನೇ ಬ್ಯಾಚ್ ಅತ್ಯಂತ ಯಶಸ್ವಿಯಾಗಿ ಮುಗಿದಿದ್ದು, ವಿದ್ಯಾರ್ಥಿಗಳು ಉನ್ನತ ಪರೀಕ್ಷೆಯನ್ನು ಎದುರಿಸಲು ಸಿದ್ದರಾಗಿದ್ದಾರೆ. ಅದೇ ವಿಶ್ವಾಸದಲ್ಲಿ ಈಗ ೨ನೇ ಬ್ಯಾಚ್ ಆರಂಭಗೊಂಡಿದೆ. ಡಾ. ಜ್ಯೋತಿ ಅವರ ನೇತೃತ್ವದ ಬೆಂಗಳೂರಿನ ಸಧನಾ ಕೋಚಿಂಗ್ ಸೆಂಟರ್ ಈ ‘ಹೊಂಬಿಸಿಲು ಯೋಜನೆಗೆ ಸಹಕಾರ ನೀಡಿದೆ. ಒಟ್ಟು ಮುನ್ನೂರು ಜನ ವಿದ್ಯಾರ್ಥಿಗಳು ಅದಾಗಲೇ ಪ್ರವೇಶಪರೀಕ್ಷೆ ಬರೆದ್ದಾರೆ. ಯಾವುದೇ ಜಾತಿ, ಧರ್ಮ, ಶಿಫಾರಸ್ಸುಗಳಿಲ್ಲದೆ ಅಭ್ಯರ್ಥಿಗಳ ಅಂಕಗಳನ್ನಷ್ಟೇ ಗಮನದಲ್ಲಿಟ್ಟುಕೊಂಡು ಆಯ್ಕೆ ಮಾಡಲಾಗುತ್ತದೆ. ಅಕ್ಟೋಬರ್ ೨೧ರಿಂದ ತರಗತಿಗಳು ಆರಂಭವಾಗುತ್ತಿವೆ. ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬಹುದು.
No Comment! Be the first one.