ಕಳೆದ ವರ್ಷವಷ್ಟೇ ಸಂಯುಕ್ತ ೨ ಎಂಬ ಥ್ರಿಲ್ಲರ್ ಚಿತ್ರವನ್ನು ನಿರ್ಮಿಸಿದ್ದ ನಿರ್ಮಾಪಕ ಡಾ.ಮಂಜುನಾಥ್ ಡಿ.ಎಸ್. ಅವರು ಈಗ ಪಕ್ಕಾ ಕಾಮಿಡಿ ಚಿತ್ರವನ್ನು ನಿರ್ಮಿಸಿ ಪ್ರೇಕ್ಷಕರನ್ನು ರಂಜಿಸಲು ಹೊರಟಿದ್ದಾರೆ. ೧೪ ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿರುವ ನಿರ್ದೇಶಕ ಕುಮಾರ್ ಅವರ ನಿರ್ದೇಶನದಲ್ಲಿ
ಕಳೆದ ವರ್ಷವಷ್ಟೇ ಸಂಯುಕ್ತ ೨ ಎಂಬ ಥ್ರಿಲ್ಲರ್ ಚಿತ್ರವನ್ನು ನಿರ್ಮಿಸಿದ್ದ ನಿರ್ಮಾಪಕ ಡಾ.ಮಂಜುನಾಥ್ ಡಿ.ಎಸ್. ಅವರು ಈಗ ಪಕ್ಕಾ ಕಾಮಿಡಿ ಚಿತ್ರವನ್ನು ನಿರ್ಮಿಸಿ ಪ್ರೇಕ್ಷಕರನ್ನು ರಂಜಿಸಲು ಹೊರಟಿದ್ದಾರೆ. ೧೪ ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿರುವ ನಿರ್ದೇಶಕ ಕುಮಾರ್ ಅವರ ನಿರ್ದೇಶನದಲ್ಲಿ
ತಯಾರಾಗಿರುವ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಟ್ರೈಲರ್ ಹಾಗೂ ಹಾಡುಗಳ ಸಿಡಿ ಬಿಡುಗಡೆ ಸಮಾರಂಭ ಕಲಾವಿದರ ಸಂಘದ ಆವರಣದಲ್ಲಿ ನಡೆಯಿತು. ಎಂಸಿರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಡಾ.ಮಂಜುನಾಥ್ ಡಿ.ಎಸ್. ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ನಿರ್ಮಾಪಕರ ತಾಯಿ ಮಹದೇವಮ್ಮ ಅವರು ಚಿತ್ರದ ಟ್ರೈಲರ್ ಲಾಂಚ್ ಮಾಡಿ ಪುತ್ರನಿಗೆ ಶುಭ ಹಾರೈಸಿದರು.
ಈ ಚಿತ್ರದ ಪ್ರಮುಖ ಪಾತ್ರದಲ್ಲಿ ’ಕಿರಿಕ್ಪಾರ್ಟಿ’ ಖ್ಯಾತಿಯ ಚಂದನ್ ಆಚಾರ್ ಹಾಗೂ ನವನಾಯಕಿ ಸಂಜನಾ ಆನಂದ್ ನಟಿಸಿದ್ದಾರೆ. ನಾಯಕನ ತಂದೆ ಕರಿಯಪ್ಪನ ಪಾತ್ರದಲ್ಲಿ ನಟ ತಬಲಾನಾಣಿ ಕಾಣಿಸಿಕೊಂಡಿದ್ದಾರೆ. ಇವರ ಜೋಡಿಯಾಗಿ ಕಿರುತೆರೆ ನಟಿ ಅಪೂರ್ವ ನಟಿಸಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ನಿರ್ಮಾಪಕ ಮಂಜುನಾಥ್ ೨೦೧೭ರಲ್ಲಿ ಸಂಯುಕ್ತ ೨ ಎಂಬ ಚಿತ್ರವನ್ನು ನಿರ್ಮಿಸಿದ್ದೆ. ಆನಂತರ ಏನು ಮಾಡಬೇಕೆಂಬ ಯೋಚನೆಯಲ್ಲಿದ್ದಾಗ ಕುಮಾರ್ ಬಂದು ಹೇಳಿದ ಈ ಕಥೆ ಹೇಳಿದರು. ಕಥೆ ತುಂಬಾ ಇಂಟರೆಸ್ಟಿಂಗ್ ಆಗಿದೆ ಎನಿಸಿತು, ಅದರಲ್ಲೂ ರಿಯಲ್ ಇನ್ಸಿಡೆಂಟ್ ಎಂದಮೇಲೆ ಕುತೂಹಲ ಜಾಸ್ತಿಯಾಯಿತು.
ಸಮಾಜದಲ್ಲಿ ಹೀಗೂ ನಡೆಯುತ್ತಾ ಅನಿಸಿತು. ಕರಿಯಪ್ಪನ ಪಾತ್ರಕ್ಕೆ ತಬಲಾನಾಣಿ ಅವರೇ ಬೇಕೆಂದು ಕುಮಾರ್ ಫಿಕ್ಸ್ ಆಗಿಬಿಟ್ಟಿದ್ದರು. ನಾಣಿ ಅವರು ನಮ್ಮ ಹಿಂದಿನ ಚಿತ್ರದಲ್ಲಿ ಕೆಲಸ ಮಾಡಿದ್ದರು. ಪಾತ್ರ ಕೇಳಿದ ಕೂಡಲೇ ತಕ್ಷಣ ಒಪ್ಪಿದರು. ಅವರ ಪುತ್ರನಾಗಿರುವ ಚಂದನ್ ನೀನಾಸಂ ಪ್ರತಿಭೆ, ಇನ್ನು ನಾಯಕಿಯಾಗಿ ಚಂದನ ಕೊನೇ ಘಳಿಗೆಯಲ್ಲಿ ಬಂದರು. ನಾನು ಕೂಡ ಈ ಚಿತ್ರದಲ್ಲಿ ಬರೀ ಪ್ರೊಡ್ಯೂಸರ್ ಆಗಿದ್ದಿಲ್ಲ, ಒಬ್ಬ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ನನ್ನ ಎಲ್ಲಾ ಕೆಲಸಗಳ ಹಿಂದೆ ಶ್ರೀನಿವಾಸ್ ಇದ್ದಾರೆ, ಈ ಚಿತ್ರವನ್ನು ಮುಂದಿನ ತಿಂಗಳು ರಿಲೀಸ್ ಮಾಡುವ ಪ್ಲಾನ್ ಇದೆ ಎಂದು ಹೇಳಿಕೊಂಡರು. ಕರಿಯಪ್ಪ ತಬಲಾನಾಣಿ ಮಾತನಾಡಿ ಇದು ಹಳ್ಳಿಯ ಸಂಸಾರಿಕ ಜೀವನದಲ್ಲಿ ನಡೆಯುವ ಕಥೆ. ನೈಜ ಘಟನೆಯನ್ನು ತೆಗೆದುಕೊಂಡು ಆಪಾತ್ರಗಳಿಗೆ ನಮ್ಮನ್ನು ತಂದು ಕೂರಿಸಿದ್ದಾರೆ. ಜೀವನಕ್ಕೆ ತುಂಬಾ ಹತ್ತಿರವಾದ ಕಥೆ ಈ ಚಿತ್ರದಲ್ಲಿದೆ. ಒಬ್ಬ ಅಪ್ರಯೋಜಕ ಮಗನ ಕಾರಣದಿಂದ ಕರಿಯಪ್ಪನ ಕೆಮಿಸ್ಟ್ರಿ ಏನಾಯಿತು ಎನ್ನುವುದೇ ಚಿತ್ರದ ಕಥೆ ಎಂದು ಹೇಳಿದರು.
ನಂತರ ಚಂದನ್, ಸಂಜನಾ ಸಂಗೀತ ನಿರ್ದೇಶಕ ಆರವ್ ರಿಶಿಕ್, ಛಾಯಾಗ್ರಾಹಕ ಶಿವಸೇನಾ ಕೂಡ ಚಿತ್ರದ ಬಗ್ಗೆ ಮಾತನಾಡಿದರು. ಅತಿಥಿಗಳಾಗದ್ದ ಮಿತ್ರ, ವಾಣಿಹರಿಕೃಷ್ಣ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದಲ್ಲಿ ನವೀನ್ ಸಜ್ಜು ಹಾಡಿರುವ ಶ್ರೀಮತಿ ಆಗು ಅಂದ್ರೆ ಎಂಬ ಹಾಡು ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡುತ್ತಿದ್ದು, ಈ ಹಾಡಿಗೆ ಆರವ್ ರಿಶಿಕ್ ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶಕ ಕುಮಾರ್ ಸಾಹಿತ್ಯ ರಚಿಸಿದ್ದಾರೆ. ಆನಂದ್ ಆಡಿಯೋ ಈ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಿದ್ದು, ಈ ಹಾಡಿಗೆ ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸುಚೇಂದ್ರ ಪ್ರಸಾದ್, ಮೈಕೋ ನಾಗರಾಜ್, ರಾಕ್ಲೈನ್ ಸುಧಾಕರ್ ಹಾಗೂ ನಿರ್ಮಾಪಕ ಡಾ.ಮಂಜುನಾಥ್ ಡಿ.ಎಸ್ ಚಿತ್ರದ ಉಳಿದ ತಾರಾಬಳಗದಲ್ಲಿದ್ದಾರೆ. ಸಜಯ್ಕುಮಾರ್ ಹಿನ್ನೆಲೆ ಸಂಗೀತ, ವೆಂಕಿ ಅವರ ಸಂಕಲನ ಮತ್ತು ಲಕ್ಷ್ಮಿತನಯ್ ಅವರ ನೃತ್ಯ ನಿರ್ದೇಶನವಿದೆ.
#
No Comment! Be the first one.