ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿ ಇರುವ ನಟರ ಪೈಕಿ ಚಿರಂಜೀವಿ ಸರ್ಜಾ ಕೂಡ ಒಬ್ಬರು. ಈಗಾಗಲೇ ತನ್ನ ಬತ್ತಳಿಕೆಯಲ್ಲಿ ಖಾಕಿ, ರಣಂ, ಜುಗಾರಿ ಕ್ರಾಸ್, ಸಿಂಗ ಸೇರಿದಂತೆ ಸಾಲು ಸಾಲು ಸಿನಿಮಾಗಳಿವೆ. ಇದರ ನಡುವೆಯೇ ಧೈರ್ಯಂ ಖ್ಯಾತಿಯ ಶಿವ ತೇಜಸ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದೆ.
ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇಗುಲದಲ್ಲಿ ನಡೆಯಿತು. ಚಿತ್ರಕ್ಕೆ ಪ್ರೊಡಕ್ಷನ್ ನಂ 1 ಎಂಬ ಟೈಟಲ್ ಇಡಲಾಗಿದ್ದು, ಮುಹೂರ್ತ ಸಮಾರಂಭಕ್ಕೆ ಮುಖ್ಯಅತಿಥಿಗಳಾಗಿ ಕ್ರೇಜಿಸ್ಟಾರ್ ರವಿಚಂದ್ರನ್, ಲಕ್ಷ್ಮೀ ದೇವಮ್ಮ ಶಕ್ತಿ ಪ್ರಸಾದ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ ಸೇರಿದಂತೆ ಬಹುತೇಕ ತಾರಾಬಳಗವೇ ಆಗಮಿಸಿತ್ತು. ಇಲ್ಲಿವರೆಗೂ ಬಹುತೇಕ ಮಾಸ್ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದ ಚಿರು, ಈಗ ಹೊಸ ಕಥೆಯ ಜೊತೆ ಹೊಸ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ರವಿವರ್ಮ ಸಾಹಸ ನಿರ್ದೇಶನವಿದ್ದು, ಸುರಾಗ್ ಸಂಗೀತ ನೀಡಲಿದ್ದಾರೆ. ಜೊತೆಗೆಮಂಜುಳಾ ಶಿವಾರ್ಜುನ್ ಬಂಡವಾಳ ಹೂಡಲಿದ್ದಾರೆ.ಇನ್ನುಚಿರು ಹಾಗೂ ಶಿವತೇಜಸ್ ಕಾಂಬಿನೇಷನ್ನಿನ ಹೊಸ ಚಿತ್ರಕ್ಕೆ ಬಹುದೊಡ್ಡ ತಾರಾಬಳಗವಿದೆ. ನಾಯಕಿಯಾಗಿ ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡರೆ ಅವರ ಜೊತೆ ಅಕ್ಷತಾ ಶ್ರೀನಿವಾಸ್, ತಾರಾ, ಕಿಶೋರ್, ಅವಿನಾಶ್, ತರಂಗ ವಿಶ್ವ ನಟಿಸಲಿದ್ದಾರೆ. ವಿಶೇಷ ಅಂದ್ರೆ ಕಾಮಿಡಿ ರೋಲ್ ನಲ್ಲಿ ಸಾಧುಕೋಕಿಲ ಕಮಾಲ್ ಮಾಡಲಿದ್ದು, ಜೊತೆಯಾಗಿ ಕಾಮಿಡಿ ಕಿಲಾಡಿಗಳು, ಶಿವರಾಜ್ ಪೇಟೆ, ನಯನಾ, ಬಿರಾದಾರ್ ಸೇರಿದಂತೆ ಬಹುತೇಕ ತಾರೆಯರು ಬಣ್ಣ ಹಚ್ಚಲಿದ್ದಾರೆ.
No Comment! Be the first one.