ಇಷ್ಟು ದಿನ ಬಹುತೇಕ ವಾಹಿನಿಗಳು ಟಿ.ಆರ್.ಪಿ. ಟ್ಯಾಂಪರಿಂಗ್ ಮಾಡಿ ಬೋಗಸ್ ರೇಟಿಂಗ್ ತೋರಿಸುತ್ತಿದ್ದವು. ಸದ್ಯದ ಪರಿಸ್ಥಿತಿಯಲ್ಲಿ ಅದಕ್ಕೆ ಬ್ರೇಕ್ ಬಿದ್ದಿದೆ. ದರ್ಶನ್ ಒಬ್ಬರ ಸಿನಿಮಾ ಬಿಟ್ಟರೆ ಉಳಿದಂತೆ ದೊಡ್ಡ ಹೀರೋಗಳ ಸಿನಿಮಾಗಳು ಕೂಡಾ ಒಂದೂವರೆ ಎರಡು ದಾಟುತ್ತಿಲ್ಲ.
ಸದ್ಯ ಡಾಲಿ ಇಂಡಿಯಾ ಲೆವೆಲ್ಲಿನಲ್ಲಿ ಹೆಸರು ಮಾಡಿರುವ ನಟ. ಟಗರು ನಂತರ ಬೇರೆ ಇಮೇಜು ಪಡೆದಿರುವ ಧನಂಜಯ ನಿರ್ಮಾಪಕರಾಗಿ ಗೆದ್ದಿದ್ದು ಬಡವ ರಾಸ್ಕಲ್ ಸಿನಿಮಾದಲ್ಲಿ. ಆ ನಂತರ ಡಾಲಿ ಧನಂಜಯ ನಟನೆಯ ನಾಲ್ಕಾರು ಸಿನಿಮಾಗಳು ಬಂದಿವೆ. ಆದರೆ ಯಾವುದೂ ಅಂಥಾ ಗೆಲುವು ಕಂಡಿಲ್ಲ. ಹೊಯ್ಸಳ ಸಿನಿಮಾ ಕನ್ನಡ ಇಂಡಸ್ಟ್ರಿಯಲ್ಲಿ ರೆಕಾರ್ಡ್ ಬ್ರೇಕ್ ಮಾಡುತ್ತೆ ಅಂತಾ ಸ್ವತಃ ಡಾಲಿ ಅಲ್ಲಲ್ಲಿ ಹೇಳಿಕೊಂಡಿದ್ದರಂತೆ. ಥೇಟರಿಗೆ ಬಂದ ಜನ ಇಂಟರ್ವಲ್ ಬ್ರೇಕ್ ಹೊತ್ತಿಗೇ ಬಸವಳಿದಿದ್ದರು. ಆದರೂ ನೆಪಕ್ಕೆನ್ನುವಂತೆ ಇಪ್ಪತ್ತೈದು ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಹಿಡಿದಿಟ್ಟಿದ್ದರು. ಈಗ ಇದೇ ಚಿತ್ರ ಕಿರುತೆರೆಗೂ ಅಪ್ಪಳಿಸಿದೆ. ಈ ಸಿನಿಮಾಗೆ ಬಂದಿರುವ ಟಿ.ಆರ್.ಪಿ. ನೋಡಿ ಟೀವಿ ಮೀಡಿಯಾ ಬೆಚ್ಚಿಬಿದ್ದಿದೆ. ಡಾಲಿ ಲೆವೆಲ್ಲಿನ ಹೀರೋಗೆ ತೀರಾ ಕಡಿಮೆ ಅನ್ನಿಸುವಂತಾ ೧.೪ ಟಿ.ಆರ್.ಪಿ ಅಷ್ಟೇ ಹೊಯ್ಸಳಕ್ಕೆ ದಕ್ಕಿದೆ.
ಇದು ಧನಂಜಯನ ಪ್ರತಿಷ್ಠೆಗೆ ಭಯಾನಕ ಏಟು ಬಿದ್ದಂತೆ ಆಗಿದೆ. ಇನ್ನೂ ಯಾವೆಲ್ಲಾ ಹೀರೋಗಳ, ವಾಹಿನಿಗಳ ಟಿ.ಆರ್.ಪಿ. ರೇಟಿಂಗಿನ ಅಸಲೀಯತ್ತು ಏನೇನು ಅನ್ನೋದು ಇನ್ಮುಂದೆ ಅನಾವರಣಗೊಳ್ಳಲಿದೆ.
No Comment! Be the first one.