ಕನ್ನಡದ ಬಹುತೇಕ ಕಲಾವಿದರು ನಟಿಸಿರುವುದು ಹಾಗೂ ಬೆಂಗಳೂರಿ ನಲ್ಲೆ 90% ಭಾಗದಷ್ಟು ಶೂಟಿಂಗ್ ನಡೆದಿದೆ ಇನ್ನು ವಿಶೇಷ ವೆಂದರೆ ಕನ್ನಡದ ಸಂಭಾಷಣೆ ಕೂಡ ಈ ಚಿತ್ರದಲ್ಲಿ ಬಳಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಸಾಕಷ್ಟು ವಿವರಗಳನ್ನು ಹಂಚಿಕೊಂಡಿತು. ಚಿತ್ರದ ನಿರ್ದೇಶಕ ಲಕ್ಷ್ಮಣ್ ಚಿನ್ನ ಮಾತನಾಡಿ, ಚಿತ್ರ ತೆರೆಗೆ ಬರಲು ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ. ಈ ಚಿತ್ರ ಬಹುತೇಕ ಚಿತ್ರಿಕರಣ ಬೆಂಗಳೂರಿನಲ್ಲೆ ಆಗಿದೆ. ನಾವು ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವುದಾಗಿ ಅವರು ಹೇಳಿದರು.
ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕನ್ನಡತಿ ಕಾವ್ಯ ರಮೇಶ್ ಮಾತನಾಡಿ, ನಾನು ಅನು ಎನ್ನುವ ಕ್ಯಾರೆಕ್ಟರ್ ಮಾಡುತ್ತಿದ್ದೇನೆ. ಸಿನಿಮಾ ಜನರೇಷನ್ ಗ್ಯಾಪಿನಿಂದ ಉಂಟಾಗುವ ಮಾನಸಿಕ ಒದ್ದಾಟದ ಬಗ್ಗೆ ಕಥೆಯನ್ನು ಹೊಂದಿದೆ. ಮಾನಸಿಕ ಒದ್ದಾಟದಿಂದ ಹೇಗೆ ಹೊರಬರಬೇಕು ಎಂದು ಇದರಲ್ಲಿ ಹೇಳಲಾಗಿದೆ. ಹೆಣ್ಣು ಮಕ್ಕಳಿಗೆ ಇದು ಹೆಚ್ಚು ಕನೆಕ್ಟ್ ಆಗುತ್ತದೆ. ತೆಲುಗಿನಲ್ಲಿ ಇದು ನನ್ನ ಮೊದಲ ಚಿತ್ರ ಆಗಿದೆ. ಚೌಕ ಬಾರ್ ಸೇರಿದಂತೆ ಎರಡು ಕನ್ನಡ ಚಿತ್ರಗಳಲ್ಲಿ ನಾನು ನಟಿಸಿದ್ದೇನೆ. ನಿರ್ದೇಶಕರು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿದರು ಎಂದು ಹೇಳಿದರು. ಪ್ರಮುಖ ಪಾತ್ರದಲ್ಲಿ ನಟಿಸಿರುವ ಕನ್ನಡದ ನಟ ದರ್ಶನ್ ಮಾತನಾಡಿ, ಇದು ನನ್ನ ಮೊದಲ ಚಿತ್ರ ಆಗಿದೆ. ನಾನು ಇಲ್ಲಿ ಬೋಲ್ಡ್ ಕ್ಯಾರೆಕ್ಟರ್ ಮಾಡಿದ್ದೇನೆ ಎಂದು ಹೇಳಿದರು. ಚಿತ್ರದ ಇತರ ಕಲಾವಿದರಾದ ಪ್ರೇರಣಾ ಭಟ್, ಲಲಿತ ನಾಯಕ್, ಚಿತ್ರತಂಡದ ತಂತ್ರಜ್ಞರು ತಮ್ಮ ಅನುಭವಗಳನ್ನು ಹಂಚಿಕೊಂಡರು.
No Comment! Be the first one.