ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಪೆಟ್ಟಾ ಸಿನಿಮಾದಲ್ಲಿ ನಟಿಸಿ ಬ್ಲಾಕ್ ಬಸ್ಟರ್ ಹಿಟ್ ಪಡೆದಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಸದ್ಯ ಎ.ಆರ್. ಮುರುಗದಾಸ್ ನಿರ್ದೇಶನದ ದರ್ಬಾರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ವಿಶೇಷವೆಂದರೆ ಈ ಬ್ಯಾನರಿಗಿದು 167ನೇ ಸಿನಿಮಾ ಕೂಡ. ಈಗಾಗಲೇ ರಜನಿಯ ದರ್ಬಾರ್ ಶುರುವಾಗಿದ್ದು, ಏಪ್ರಿಲ್ ತಿಂಗಳಿನಲ್ಲಿಯೂ ಶೂಟಿಂಗ್ ಆರಂಭಿಸಿ ಮೊದಲ ಹಂತದ ಶೂಟಿಂಗ್ ಕೂಡ ಮುಗಿದಿದೆ. ಮೇ 29ಕ್ಕೆ ಮುಂಬೈನಲ್ಲಿ ತನ್ನ ಎರಡನೇ ಹಂತದ ಶೂಟಿಂಗ್ ನಡೆಸಲು ಪ್ರ್ಯಾನ್ ಮಾಡಿಕೊಂಡಿದೆ ಚಿತ್ರತಂಡ. ಇನ್ನು ರಜನಿಗೆ ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿನಯಿಸಿದ್ದು, ನಿವೇಥಾ ಥಾಮಸ್, ಯೋಗಿ ಬಾಬು, ಪ್ರತೀಕ್ ಬಬ್ಬರ್, ಜಾನ್ ಮಹೇಂದರ್ ಇತರರು ತಾರಾಂಗಣದಲ್ಲಿದ್ದಾರೆ.
ಸದ್ಯದ ವಿಶೇಷ ಸುದ್ದಿ ಏನಂದ್ರೆ ದರ್ಬಾರ್ ಸಿನಿಮಾದ ರಜನಿ ಇಂಟ್ರಡಕ್ಷನ್ ಸಾಂಗನ್ನು ಎಸ್.ಪಿ. ಬಾಲಸುಬ್ರಮಣ್ಯ ಅವರು ಹಾಡಲಿದ್ದಾರೆ. ಬಹುತೇಕ ರಜನಿಕಾಂತ್ ನ ಎಲ್ಲ ಸಿನಿಮಾಗಳ ಹಾಡುಗಳನ್ನು ಎಸ್.ಪಿ.ಬಿ ಅವರೇ ಹಾಡಿರುವುದು ವಿಶೇಷವಾಗಿದ್ದು, ದರ್ಬಾರ್ ನಲ್ಲಿಯೂ ಅವರ ಗಾಯನ ಮುಂದುವರೆಯಲಿದೆ. ಈ ಹಾಡನ್ನು ಮೂಲತಃ ಅನಿರುದ್ದ್ ಹಾಡಲಿದ್ದು, ಕೆಲ ಸಾಲುಗಳನ್ನು ಎಸ್.ಪಿ.ಬಿ ಹಾಡಲಿದ್ದಾರೆ ಎನ್ನಲಾಗಿದೆ. ಪೆಟ್ಟಾ ನಂತರ ಅನಿರುದ್ಧ್ ದರ್ಬಾರ್ ನಲ್ಲಿಯೂ ತನ್ನ ಗಾಯನದ ದರ್ಬಾರ್ ತೋರಿಸಲು ಮುಂದಾಗಿದ್ದಾರೆ.
No Comment! Be the first one.