ಈ ಹಿಂದೆ ಬಹುತಾರಾಗಣದ ಥೈಗರಾಜನ್ ನಿರ್ದೇಶನದ ಸೂಪರ್ ಡಿಲಕ್ಸ್ ಸಿನಿಮಾದಲ್ಲಿ ನಟಿಸಿದ್ದ ಮಕ್ಕಲ್ ಸೆಲ್ವನ್ ವಿಜಯ್ ಸೇತುಪತಿ ಚಿತ್ರದಲ್ಲಿ ನಪುಂಸಕನಾಗಿ ಅಭಿನಯಿಸಿದ್ದರು. ಅದಾದ ಮೇಲೆ ಸಿಂಧೂಬಾದ್ ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸಿದ್ದು, ಅದು ಪಕ್ಕಾ ಮಾಸ್ ಎಂಟರ್ ಟೈನ್ ಮೆಂಟ್ ಸಿನಿಮಾವಾಗಿರಲಿದೆ. ಚಿತ್ರವು ಮುಂದಿನ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ.

ಇತ್ತೀಚಿಗೆ ಸಿನಿಮಾದ ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಸು. ಅರುಣ್ ಕುಮಾರ್ ಮಾತನಾಡಿ ಸಿಂಧೂಬಾದ್ ಸಿನಿಮಾದ ಇಂಟ್ರಸ್ಟಿಂಗ್ ವಿಚಾರಗಳನ್ನು ಶೇರ್ ಮಾಡಿಕೊಂಡರು. ವಿಜಯ್ ಸೇತುಪತಿ ಈ ಚಿತ್ರದಲ್ಲಿ ತಿರು ಎನ್ನುವ ಕಿವುಡನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರಂತೆ. ಮೇಲಾಗಿ ಅವರಿಗೆ ಅಂತಹುದೇ ಸಮಸ್ಯೆ ಇರುವ ವ್ಯಕ್ತಿಗಳ ಮಾತಷ್ಟೇ ಕೇಳಿಸುವುದಂತೆ. ಇನ್ನು ಚಿತ್ರದಲ್ಲಿ ಅಂಜಲಿ ವೆಂಬಾ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ನಾಯಕನ ಮುಂದೆ ಗಟ್ಟಿ ಹಾಗೂ ಜೋರು ಧ್ವನಿಯಲ್ಲಿ ಮಾತನಾಡುತ್ತಾರಂತೆ. ಹಾಗೆಯೇ ಸಿನಿಮಾದಲ್ಲೊಂದು ಲವ್ ಸ್ಟೋರಿ ಸಾಗುವುದು ಸಿಂಧೂಬಾದ್ ನ ವಿಶೇಷ. ಈಗಾಗಲೇ ಮೆಯಾದ ಮಾನ್ ಮತ್ತು ವಿಕ್ರಮ್ ವೇದ ಸಿನಿಮಾದಲ್ಲಿ ಅಭಿನಯಿಸಿದ್ದ ವಿವೇಕ್ ‍ಪ್ರಸನ್ನ ಈ ಚಿತ್ರಕ್ಕಾಗಿ 17 ಕೆಜಿ ತೂಕವನ್ನು ಹೆಚ್ಚಿಸಿಕೊಂಡಿದ್ದಾರಂತೆ. ಇನ್ನು ಸೇತುಪತಿಗೆ ವಿರುದ್ಧವಾಗಿ ಲಿಂಗ ಖ್ಯಾತಿಯ ಅತೆ ಕಂಗಾಲ್ ತೊಡೆತಟ್ಟಲಿದ್ದಾರೆ. ಸೂಪರ್ ಡಿಲಕ್ಸ್ ಸಿನಿಮಾದ ಮೂಲಕ ಸವಾಲಿನ ಪಾತ್ರಗಳನ್ನು ನಾನು ಮಾಡಬಲ್ಲೆ ಎಂದು ಸಾಬೀತು ಪಡಿಸಿದ್ದ ವಿಜಯ್ ಸೇತುಪತಿ ಸಿಂಧೂಬಾದ್ ನಲ್ಲಿಯೂ ಸವಾಲಿನ ಪಾತ್ರದಲ್ಲಿಯೇ ಅಭಿನಯಿಸಲಿದ್ದು, ಅವರ ಅಬ್ಬರಕ್ಕೆ ಮುಂದಿನ ತಿಂಗಳಿನವರೆಗೂ ಕಾಯಲೇಬೇಕು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ರಜನಿ ದರ್ಬಾರಿಗೆ ಎಸ್.ಪಿ.ಬಿ ದನಿ!

Previous article

ಮೊದಲ ಹಂತದ ಶೂಟಿಂಗ್ ಮುಗಿಸಿಕೊಂಡ ಬ್ರಹ್ಮಚಾರಿ!

Next article

You may also like

Comments

Leave a reply