- ಸಂತೋಷ್ ಸಕ್ರೆಬೈಲು
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ರಾಬರ್ಟ್ ಸಿನಿಮಾದ ಮೂಲಕ ಸಿಲ್ವರ್ ಸ್ಕ್ರೀನ್ಗೆ ಗ್ರ್ಯಾಂಡ್ ಎಂಟ್ರಿ ಕೊಡೋಕೆ ಸಿದ್ಧರಾಗಿದ್ದಾರೆ. ರಾಬರ್ಟ್ ಸಿನಿಮಾದ ರಿಲೀಸ್ಗೆ ಇನ್ನು ಆರು ದಿನಗಳು ಮಾತ್ರ ಬಾಕಿ. ಸಿನಿಮಾ ರಿಲೀಸ್ ಆಗ್ತಿದ್ರೂ ದರ್ಶನ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಸ್ಪಷ್ಟ ಮಾಹಿತಿ ಬಿಟ್ಕೊಡ್ತಿಲ್ಲ. ಆದ್ರೆ ಈ ವರ್ಷ ಮತ್ತೊಂದು ಸಿನಿಮಾ ಅಂತೂ ಪಕ್ಕಾ ಅಂತಾ ಒನ್ ಹಂಡ್ರೆಡ್ ಆ್ಯಂಡ್ ಒನ್ ಪರ್ಸೆಂಟ್ ಹೇಳಿದ್ದಾರೆ. ಡಿ ಸೈನ್ಯಕ್ಕೆ ರಾಬರ್ಟ್ ಸೆಲೆಬ್ರೇಷನ್ ಜೊತೆಗೆ ನಮ್ ಬಾಸ್ ನೆಕ್ಸ್ಟ್ ಸಿನಿಮಾ ಯಾವುದು ಅನ್ನೋ ಪ್ರಶ್ನೇ ದಿನೇ ದಿನೇ ಹೆಚ್ಚಾಗ್ತಿದೆ. ಮೂಲಗಳ ಪ್ರಕಾರ ದರ್ಶನ್ ಈಗಾಗಲೇ ಮುಂದಿನ ಸಿನಿಮಾದ ಬಗ್ಗೆ ಎಲ್ಲಾ ಪ್ರೀ ಪ್ಲಾನ್ ಮಾಡಿಕೊಂಡಿದ್ದಾರಂತೆ!
ಹೌದು, ಈ ವರ್ಷದ ಕೊನೆಯಲ್ಲಿ ಬರೋದು ದರ್ಶನ್ ಹಾಗೂ ಮಿಲನ ಪ್ರಕಾಶ್ ಕಾಂಬಿನೇಷನ್ನ ಸಿನಿಮಾ ಅಂತಿವೆ ಸ್ಯಾಂಡಲ್ವುಡ್ ಸಿನಿ ಗಾಸಿಪ್ಸ್. ಈಗಾಗಲೇ ತಾರಕ್ ಸಿನಿಮಾದ ಮೂಲಕ ಹಿಟ್ ಕೊಟ್ಟಿರೋ ಈ ಜೋಡಿ ಮತ್ತೆ ಒಂದಾಗ್ತಿದೆ. ದರ್ಶನ್ ಹಲವು ಸಂದರ್ಶನಗಳಲ್ಲಿ ಹೇಳಿದ ಪ್ರಕಾರ ಮಿಲನ ಪ್ರಕಾಶ್ರ ಜೊತೆ ನೆಕ್ಸ್ಟ್ ಸಿನಿಮಾ ಅನ್ನೋದೆ ಹೆಚ್ಚು. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳಲ್ಲಿ ಮಿಲನ ಪ್ರಕಾಶ್ ತಲ್ಲೀನರಾಗಿದ್ದು, ರಾಬರ್ಟ್ ರಿಲೀಸ್ ಆಗ್ತಿದ್ದಂತೆಯೇ ಈ ಸಿನಿಮಾದ ಶೂಟಿಂಗ್ ಸೆಟ್ಗೆ ದರ್ಶನ್ ಕಾಲಿಡಲಿದ್ದಾರಂತೆ.
ಇದೊಂದು ಪಕ್ಕಾ ಲವ್ ಸ್ಟೋರಿ ಕಮ್ ಫ್ಯಾಮಿಲಿ ಎಂಟರ್ಟೈನ್ ಸಿನಿಮಾ ಅಂತಾ ಹೇಳಲಾಗ್ತಿದ್ದು, ಮಾಸ್ ಸ್ಟೈಲಲ್ಲಿ ಮಚ್ಚು ಬಿಟ್ಟು ರೋಜ಼್ ಹಿಡ್ಕೊಂಡು ಪ್ರಪೋಸ್ ಮಾಡಲಿದ್ದಾರೆ ಚಾಲೆಂಜಿಂಗ್ ಸ್ಟಾರ್. ದರ್ಶನ್ ಅವರೇ ಹೇಳೋ ಹಾಗೆ ಈಗಾಗಲೇ ಅವರ ಸಾಲಿನಲ್ಲಿ ಮೂಲ್ನಾಲ್ಕು ಸಿನಿಮಾಗಳು ಕ್ಯೂನಲ್ಲಿದ್ದು, ಶೈಲಜಾ ನಾಗರಾಜ್, ರಾಕ್ಲೈನ್ ವೆಂಕಟೇಶ್, ಸಂದೇಶ್ ನಾಗರಾಜ್, ತೆಲುಗು ನಿರ್ಮಾಪಕರೊಬ್ಬರು ಸೇರಿದಂತೆ ಹಲವರು ಕ್ಯೂನಲ್ಲಿದ್ದಾರೆ. ಒಟ್ಟಾರೆಯಾಗಿ ಡಿ ಬಾಸ್ ಇನ್ನೂ ನಾಲ್ಕೈದು ವರ್ಷ ಫುಲ್ ಬ್ಯುಜಿಯಾಗಿರಲಿದ್ದು, ಈ ವರ್ಷದಲ್ಲೇ ಮತ್ತೊಮ್ಮೆ ಬಿಗ್ ಸ್ಕ್ರೀನ್ನಲ್ಲಿ ದರ್ಶನ ಕೊಡಲಿದ್ದಾರೆ.
No Comment! Be the first one.