ಇದು ಚಾಲೆಂಜಿಂಗ್ ದರ್ಶನ್ ಮೇಲಿರೋ ಅಭಿಮಾನದ ತೀವ್ರತೆ ಎಂಥಾದ್ದೆಂಬುದಕ್ಕೆ ಪಕ್ಕಾ ಉದಾಹರಣೆಯಂತಿರೋ ಸ್ಟೋರಿ. ನಿಂತಲ್ಲಿ ಕುಂತಲ್ಲಿ ದರ್ಶನ್ ಜಪ ಮಾಡೋ ಮಂಡ್ಯಾದ ಹುಡುಗ ಪ್ರಸನ್ನ ಇದರ ಕೇಂದ್ರಬಿಂದು. ತಾನು ಖರೀದಿಸಿರೋ ಹೊಸಾ ಬುಲ್ಲೆಟ್ಟಿಗೆ ದರ್ಶನ್ ವಾಹನಗಳ ನಂಬರ್ ಅನ್ನೇ ರಿಜಿಸ್ಟರ್ ಮಾಡಿಸಿದ್ದಲ್ಲದೆ, ದರ್ಶನ್ ಪುತ್ರನ ಹೆಸರನ್ನೇ ತನ್ನ ಮಗನಿಗೂ ಇಡೋ ಮೂಲಕ ಈತ ಅಭಿಮಾನದ ವಿರಾಟ್ ರೂಪ ಪ್ರದರ್ಶಿಸಿದ್ದಾನೆ!
ಹೀಗೆ ದರ್ಶನ್ ಮೇಲೆ ಅಪಾರ ಅಭಿಮಾನ ಹೊಂದಿರೋ ಈ ಹುಡುಗ ಪ್ರಸನ್ನ ಮಂಡ್ಯ ಜಿಲ್ಲೆ ಪಾಂಡವಪುರದ ಶಂಬೂನಹಳ್ಳಿಯೆಂಬ ಪುಟ್ಟ ಊರಿನವನು. ಈ ಊರಿನ ತುಂಬೆಲ್ಲ ಪ್ರಸನ್ನನ ದರ್ಶನಾಭಿಮಾನ ಭಲೇ ಫೇಮಸ್ಸು. ಅದೀಗ ಈತನ ಬುಲೆಟ್ ಗಾಡಿಯ ಮೂಲಕ ಮತ್ತಷ್ಟು ಪ್ರಸಿದ್ಧಿ ಪಡೆದುಕೊಂಡಿದೆ.
ಈತ ಖರೀದಿಸಿರೋ ಹೊಸಾ ಬುಲ್ಲೆಟ್ಟಿಗೆ ದರ್ಶನ್ ಅವರ ವಾಹನಗಳ ೭೯೯೯ ನಂಬರನ್ನೇ ರಿಜಿಸ್ಟರ್ ಮಾಡಿದ್ದಾನೆ. ಅದರಲ್ಲಿ ಯಜಮಾನ ಅಂತಲೂ ಬರೆಸಿಕೊಂಡಿದ್ದಾನೆ. ಇದನ್ನ ಖುದ್ದು ದರ್ಶನ್ ಅವರೇ ನೋಡಿ ಖುಷಿಪಟ್ಟಿದ್ದಾರಂತೆ. ಈತನ ಅಭಿಮಾನ ಅಷ್ಟಕ್ಕೇ ನಿಂತಿಲ್ಲ. ತನ್ನ ಪುಟ್ಟ ಮಗನಿಗೆ ದರ್ಶನ್ ಪುತ್ರನ ಹೆಸರನ್ನೇ ಇಟ್ಟಿದ್ದಾನೆ. ಡಿ ಬಾಸ್ ಅಂದರೆ ಜೀವ ಬಿಡೋವಷ್ಟು ಪ್ರೀತಿ ಅಭಿಮಾನ ಹೊಂದಿರೋ ಈ ಹುಡುಗ ಸುತ್ತಲ ಹಳ್ಳಿಗಳ ಜನರ ಮನ ಗೆದ್ದಿದ್ದಾನೆ. ಈ ಅಭಿಮಾನಕ್ಕೆ ದರ್ಶನ್ ಅವರೇ ಮರುಳಾಗಿದ್ದಾರೆಂದರೆ ಉಳಿಕೆ ಅಭಿಮಾನಿಗಳು ಖುಷಿಗೊಳ್ಳದಿರಲು ಸಾಧ್ಯವೇ?
#
No Comment! Be the first one.