ನಾಲಕ್ಕು ಗೋಡೆಗಳ ಮಧ್ಯೆಯೇ ದೃಷ್ಯ ಕಟ್ಟುವ ಜಾಣ್ಮೆಯೊಂದಿಗೆ ಗೆದ್ದಿರುವವರು ದಯಾಳ್ ಪದ್ಮನಾಭನ್. ಇದೀಗ ಅವರು ತ್ರಯಂಬಕಮ್ ಚಿತ್ರದ ಮೂಲಕ ಹೊರಜಗತ್ತನ್ನೂ ಕೂಡಾ ಸೆರೆಯಾಗಿಸುತ್ತಿದ್ದಾರೆ. ರಾಘವೇಂದ್ರ ರಾಜ್ ಕುಮಾರ್, ಅನುಪಮಾ ಗೌಡ ಮತ್ತು ರಾಕ್ ಸ್ಟಾರ್ ರೋಹಿತ್ ಮುಖ್ದಯಭೂಮಿಕೆಯಲ್ಲಿರೋ ಈ ಸಿನಿಮಾ ಚಿತ್ರೀಕರಣ ಸಮುದ್ರದ ನಡುವೆ ಅನಾಯಾಸವಾಗಿ ಸಾಗುತ್ತಿದೆ.
ಇದುವರೆಗಿನ ಎಲ್ಲ ಚಿತ್ರಗಳಲ್ಲಿಯೂ ಭಿನ್ನವಾದ ಕಥಾ ಹಂದರಕ್ಕೆ ದೃಷ್ಯ ರೂಪ ನೀಡಿದವರು ದಯಾಳ್. ಈ ಬಾರಿ ತ್ರಯಂಬಕಮ್ ಮೂಲಕವೂ ಅವರು ಬೇರೆ ಮಾದರಿಯದ್ದೊಂದು ಕಥೆಯನ್ನ ಕೈಗೆತ್ತಿಕೊಂಡಿದ್ದಾರೆ. ಇದು ಶಿವಲಿಂಗ ಮತ್ತು ಕೊಲೆಯೊಂದರ ಸುತ್ತಾ ಸಾಗೋ ಸಸ್ಪೆನ್ಸ್ ಥ್ರಿಲ್ಲರ್ ಕಥಾನಕ.
ಇತ್ತೀಚೆಗಷ್ಟೇ ಶಿವಗಂಗೆ ಬೆಟ್ಟದಲ್ಲಿ ಅನುಪಮಾ ಭಾಗದ ಚಿತ್ರೀಕರಣ ನಡೆದಿತ್ತು. ಇದೀಗ ಅದು ಸಾಗರದ ನಡುವೆ ಶಿಫ್ಟ್ ಆಗಿದೆ. ರಾಘವೇಂದ್ರ ರಾಜ್ ಕುಮಾರ್, ರೋಹಿತ್ ಮತ್ತು ಅನುಪಮಾ ಇದರಲ್ಲಿ ಭಾಗಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅನುಪಮಾ ಪತ್ರಕರ್ತೆಯಾಗಿ ನಟಿಸಿದರೆ, ರಾಘವೇಂದ್ರ ರಾಜ್ ಕುಮಾರ್ ನಾಯಕಿಯ ಅಪ್ಪನಾಗಿ ನಟಿಸಿದ್ದಾರೆ. ರಾಕ್ ಸ್ಟಾರ್ ರೋಹಿತ್ ಅವರದ್ದಿಲ್ಲಿ ಪತ್ತೇದಾರಿಯ ಪಾತ್ರ.
No Comment! Be the first one.