ಸೃಜನ್ ಲೋಕೇಶ್ ಮತ್ತು ಹರಿಪ್ರಿಯಾ ಜೊತೆಯಾಗಿ ನಟಿಸುತ್ತಿರೋ ಚಿತ್ರ ಎಲ್ಲಿದ್ದೆ ಇಲ್ಲಿತನಕ. ಇದೀಗ ಈ ಸಿನಿಮಾಗೆ ವೇಗವಾಗಿ ಚಿತ್ರೀಕರಣ ನಡೆಯುತ್ತಿದೆ. ಸದ್ಯ ಚಿತ್ರತಂಡ ಕೊರೆಯುವ ಚಳಿಗೆ ಮುದಗೊಳ್ಳುತ್ತಾ ಕಾಶ್ಮೀರದ ಸುಂದರ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸುತ್ತಿದೆ. ಸೃಜನ್ ಮತ್ತು ಹರಿಪ್ರಿಯಾ ರೊಮ್ಯಾಂಟಿಕ್ ಹಾಡಿನ ದೃಷ್ಯಾವಳಿಗಳಲ್ಲಿ ನಟಿಸುತ್ತಿದ್ದಾರೆ.
ಚಿತ್ರತಂಡ ಈ ಹಾಡಿನ ಚಿತ್ರೀಕರಣಕ್ಕಾಗಿ ಮೂರು ದಿನಗಳನ್ನ ಮೀಸಲಿಟ್ಟಿದೆ. ಸದ್ಯಕ್ಕೆ ಎಲ್ಲಿದ್ದೆ ಇಲ್ಲೀತನಕ ಟೈಟಲ್ ಸಾಂಗಿನ ಚಿತ್ರೀಕರಣ ನಡೆಯುತ್ತಿದೆ. ಈ ಹಾಡೂ ಕೂಡಾ ರೊಮ್ಯಾಂಟಿಕ್ ಮೂಡಿನಲ್ಲಿದೆಯಂತೆ. ಈಗ ಕಾಶ್ಮೀರದ ಗುಲ್ಮಾರ್ಗ್ನಲ್ಲಿ ಚಿತ್ರೀಕರಣ ಸಾಗಿದೆ.
ಈಗಂತೂ ಕಾಶ್ಮೀರದಲ್ಲಿ ಎಂದಿಗಿಂತಲೂ ತುಸು ಹೆಚ್ಚೇ ಶೀತ ವಾತಾವರಣ. ಆದರೆ ಸೃಜನ್ ಸಾರಥ್ಯದಲ್ಲಿ ಇಡೀ ಚಿತ್ರತಂಡ ಉತ್ಸಾಹದಿಂದಲೇ ಕೆಲಸ ಮಾಡುತ್ತಿದೆ. ಈ ಪರಿಸರದಲ್ಲಿ ಶೂಟ್ ಮಾಡುತ್ತಿರೋದಕ್ಕೆ ಸೃಜನ್ ಕೂಡಾ ಖುಷಿಗೊಂಡಿದ್ದಾರೆ. ಇನ್ನು ನಾಯಕಿ ಹರಿಪ್ರಿಯಾ ಪಾಲಿಗಿದು ಕಾಶ್ಮೀರದ ಐದನೇ ಭೇಟಿ. ಈ ಪ್ರದೇಶಕ್ಕೆ ತೆರಳಲು ಸದಾ ತುದಿಗಾಲಲ್ಲಿಯೇ ನಿಂತಿರುವ ಹರಿಪ್ರಿಯಾ ಅಂತೂ ಪಿಕ್ ನಿಕ್ ಮೂಡಲ್ಲಿಯೇ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರಂತೆ.
ಈಗ ಮಜಾ ಟಾಕೀಸ್ ಶೋನಲ್ಲಿ ಬ್ಯುಸಿಯಾಗಿರೋ ಸೃಜ ಒಂದಷ್ಟು ಕಾಲದಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಅವರೀಗ ತಮ್ಮ ತಂದೆ ಲೋಕೇಶ್ ಅಭಿನಯದ ಪರಸಂಗದ ಗೆಂಡೆತಿಮ್ಮ ಚಿತ್ರದ ಹಾಡಿನ ಸಾಲನ್ನೇ ಶೀರ್ಷಿಕೆಯಾಗಿಸಿಕೊಂಡು ಮರಳಿದ್ದಾರೆ. ಇದನ್ನು ಸೃಜನ್ ಅವರೇ ನಿರ್ಮಾಣವನ್ನೂ ಮಾಡಲಿದ್ದಾರೆ. ಎಲ್ಲಿದ್ದೆ ಇಲ್ಲಿತಂಕ ಚಿತ್ರವನ್ನು ಮಜಾ ಟಾಕೀಸ್ ಟೀಮೇ ರೂಪಿಸುತ್ತಿದೆ. ಈ ಶೋನ ಡೈಲಾಗ್ ರೈಟರ್ ಆಗಿದ್ದ ತೇಜಸ್ವಿ ನಿರ್ದೇಶನ ಮಾಡುತ್ತಿದ್ದಾರೆ. ಯಥೇಚ್ಚ ಕಾಮಿಡಿ ಸೇರಿದಂತೆ ಮಜವಾದ ಗುಣ ಲಕ್ಷಣಗಳನ್ನು ಹೊಂದಿರೋ ಈ ಸಿನಿಮಾ ಈಗಾಗಲೇ ಪ್ರೇಕ್ಷಕರನ್ನು ಸೆಳೆದುಕೊಂಡಿದೆ.
#