ಟೆಲಿವಿಷನ್ ನಲ್ಲಿ ಡಿಡಿ ಎಂದೇ ಫೇಮಸ್ ಆಗಿರುವ ದಿವ್ಯ ದರ್ಶಿನಿ ಕಾಫಿ ವಿತ್ ಡಿಡಿ ಇನ್ನಿತರ ಹಿಟ್ ಕಾರ್ಯಕ್ರಮಗಳಿಂದ ಚಿರಪರಿಚಿತ. ಅಲ್ಲದೇ ತಮಿಳಿನ ವಿಷಲ್, ನಳದಮಯಂತಿ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿಯೂ ನಟಿಸಿದ್ದಾರೆ. ಇತ್ತೀಚಿಗೆ ಸರ್ವಂ ತಲಾ ಮಯಮ್, ಪಾ ಪಾಂಡಿ ನಟಿಸಿದ್ದು, ಸದ್ಯ ಚಿಯಾನ್ ವಿಕ್ರಂ ಧ್ರುವ ನಾಟ್ಚತ್ತಿರಾಮ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ವಿಶೇಷ ಏನಪ್ಪಾ ಅಂದ್ರೆ ಟೆಲಿವಿಷನ್ ನಲ್ಲಿ ಇಪ್ಪತ್ತು ವರ್ಷವನ್ನು ಪೂರೈಸಿರುವ ಡಿಡಿ, ಟಾಲಿವುಡ್ ಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಪೊಕಿರಿ ಚಿತ್ರದ ನಿರ್ದೇಶಕ ಪೂರಿ ಜಗನ್ನಾಥ್ ರವರ ಹೊಸ ಸಿನಿಮಾ ರೊಮ್ಯಾಂಟಿಕ್ ನಲ್ಲಿ ಪ್ರಮುಖ ಪಾತ್ರದಲ್ಲಿ ಡಿಡಿ ನಟಿಸಲಿದ್ದಾರೆ. ಡಿಡಿಗೆ ಜತೆಯಾಗಿ ಪೂರಿ ಜಗನ್ನಾಥ್ ಅವರ ಮಗ ಆಕಾಶ್ ಪೂರಿ ನಟಿಸುತ್ತಿದ್ದಾರೆ. ಪ್ರಕಾಶ್ ರಾಜ್ ಅವರ ದೋನಿ ಚಿತ್ರದಲ್ಲಿ ನಟಿಸಿದ ಅನುಭವ ಆಕಾಶ್ ಪೂರಿಗಿದೆ. ಈ ಕುರಿತು ಡಿಡಿ ಟ್ವಿಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.