ತೆಲುಗಿನ ಕರ್ನಮ್ ವರುಣ್ ಮತ್ತು ದಿವ್ಯಾ ರಾವ್ ಲೀಡ್ ರೋಲ್ ನಲ್ಲಿ ಡಿಗ್ರಿ ಕಾಲೇಜ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ನರಸಿಂಹ ನಂದಿ ನಿರ್ದೇಶಿಸುತ್ತಿದ್ದು, ಶ್ರೀ ಲಕ್ಷ್ಮೀ ನರಸಿಂಹ ಸಿನಿಮಾ ಬ್ಯಾನರ್ ಬಂಡವಾಳ ಹೂಡಿದೆ. ಇತ್ತೀಚಿಗಷ್ಟೇ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ನೋಡುಗರು ಕಣ್ಣು ಮಿಟುಕಿಸದಂತೆ ಮಾಡಿದೆ.
https://www.youtube.com/watch?v=wWWJkO8Hz9s
ಸಿನಿಮಾದಲ್ಲಿ ನಟಿಸಿರುವ ನವೀನ ಪ್ರತಿಭೆಗಳು ಕಾಲೇಜು ಸ್ನೇಹಿತರಾಗಿ ಅಭಿನಯಿಸಿದ್ದಾರೆ. ಓದುವಾಗ ಲವ್ವು, ಡವ್ವು, ರೊಮ್ಯಾನ್ಸು ಎಲ್ಲವೂ ಅಗತ್ಯಕ್ಕಿಂತ ಹೆಚ್ಚೇ ಆಗುತ್ತದೆ. ಥೇಟ್ ಆರ್.ಎಕ್ಸ್ 100 ಸಿನಿಮಾದಂತೆ. ನಾಳಿನ ಯೋಚನೆಯಿಲ್ಲದೇ ಇಂದೇ ಎಲ್ಲವನ್ನೂ ಸಾಧಿಸುವ, ಅನುಭವಿಸುವ ತಗಾದೆ ಆ ಜೋಡಿಗಳದ್ದು. ಕೆಲವು ವಿಚಾರಗಳು ಎಷ್ಟರಮಟ್ಟಿಗೆ ವಿಕೋಪಕ್ಕೂ ತಿರುಗಬಲ್ಲದು ಎಂಬುದನ್ನು ಡಿಗ್ರಿ ಕಾಲೇಜ್ ನಲ್ಲಿ ಕಾಣಬಹುದಾಗಿದೆ. ಅವರ ಪ್ರೀತಿಯ ತೀವ್ರತೆಯು ಬೆಂಚ್ ಬ್ರೇಕಿಂಗ್ ಸೆಕ್ಸಾಗಿ ತಮ್ಮ ತರಗತಿಗಳನ್ನು ಉಳಿಸಲು ಅನುವು ಮಾಡಿಕೊಡುವುದಿಲ್ಲ. ಸದ್ಯದಲ್ಲೇ ಡಿಗ್ರಿ ಕಾಲೇಜ್ ಸಿನಿಮಾ ರಿಲೀಸ್ ಆಗಲಿದೆ. ಮನೆ ಮಂದಿಯೆಲ್ಲಾ ಒಟ್ಟಾಗಿ ಕುಳಿತು ನೋಡುವ ಸಿನಿಮಾವಂತೂ ಇದಲ್ಲ. ಈಗ ತಾನೇ ಲವ್ವಲ್ಲಿ ಬಿದ್ದವರೂ, ಲವ್ ಮಾಡುತ್ತಲೇ ಮತ್ತೇನಾದರೂ ಮಾಡಲೇಬೇಕೆಂಬ ಆತುರದಲ್ಲಿದ್ದರೂ ನೋಡಲೇಬೇಕಾದ ತೆಲುಗು ಸಿನಿಮಾ ಡಿಗ್ರಿ ಕಾಲೇಜ್.
No Comment! Be the first one.