ಕಂಡ ಕಂಡೆಲೆಲ್ಲಾ ಬಿಕಿನಿ ಧರಿಸಿ ಬೇಕಂತಲೇ ಟ್ರೋಲ್ ಆಗಬಹುದಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ಬಿಟ್ಟಿ ಪ್ರಚಾರಕ್ಕಾಗಿ ಹವಣಿಸುತ್ತಿದ್ದ ಕಿರಿಕ್ ಹುಡುಗಿ ಸಂಯುಕ್ತಾ ಹೆಗಡೆ ಮಾಡಿರುವ ಅವಾಂತರಗಳು ಒಂದೆರಡಲ್ಲ. ಕಿರಿಕ್ ಪಾರ್ಟಿ ಸಿನಿಮಾದ ಯಶಸ್ಸಿನ ನಂತರ ಸಂಯುಕ್ತಾ ಹೆಗಡೆ ಇಂಗು ತಿಂದ ಮಂಗನಂತಾಡುತ್ತಲೇ ಟ್ರೋಲಿಗರಿಗೆ ಆಹಾರವಾಗಿದ್ದರು. ಇಷ್ಟೆಲ್ಲಾ ಸರ್ಕಸ್ ಮಾಡಿರುವ ಸಂಯುಕ್ತಾ ಹೆಗಡೆ ಲಿಪ್ ಲಾಕ್ ದೃಶ್ಯಗಳನ್ನು ಮಾಡುವುದಿಲ್ಲವೆಂದು ಕನ್ನಡ ಸಿನಿಮಾವೊಂದನ್ನು ನಿರಾಕರಿಸಿದ್ದಾರಂತೆ.ಹಾಗಂತ ಚಿತ್ರತಂಡವೇ ಫೀಲ್ ಮಾಡಿಕೊಂಡಿದ್ದು, ಸಂಯುಕ್ತಾ ಹೆಗಡೆಯ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಚಾರಿ ಮತ್ತು ಜಟಾಯು ಸಿನಿಮಾಗಳನ್ನು ನಿರ್ಮಿಸಿ ನಟಿಸಿದ್ದ ರಾಜ್ ಸೂರ್ಯ ಮತ್ತು ಪ್ರಭು ಸೂರ್ಯ ಮೈ ನೇಮ್ ಈಸ್ ರಾಜ್ ಎನ್ನುವ ಹೊಸ ಸಿನಿಮಾವನ್ನು ತಯಾರಿಸುತ್ತಿದ್ದಾರೆ. ಇದು ನಾ ಪೇರು ರಾಜಾ ಎಂಬ ಹೆಸರಿನಲ್ಲಿ ತೆಲುಗಿನಲ್ಲಿಯೂ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಅರ್ಜುನ್ ರೆಡ್ಡಿ ಸಿನಿಮಾವನ್ನು ಮೀರಿಸುವಷ್ಟು ಲಿಪ್ ಲಾಕ್ ದೃಶ್ಯಗಳಿವೆಯಂತೆ. ಈ ಸಿನಿಮಾದ ನಾಯಕಿಯ ರೋಲ್ ಗೆ ಕನ್ನಡದ ಬಹಳಷ್ಟು ನಾಯಕಿಯರನ್ನು ಕೇಳಿಕೊಂಡಿದ್ದರೂ ಯಾರೂ ಸಹ ಒಪ್ಪದೇ ನಿರಾಕರಿಸಿದ್ದಾರೆ. ಇದೇ ಬೇಡಿಕೆಯನ್ನು ಸಂಯುಕ್ತಾ ಹೆಗಡೆಯ ಮುಂದೆಯೂ ಇಟ್ಟಿರುವ ನಿರ್ಮಾಪಕರು ಆಕೆಯ ನೋ ಎನ್ನುವ ರಿಯಾಕ್ಷನ್ನಿಗೆ ಕೊಂಚ ಹರ್ಟ್ ಆಗಿದ್ದಾರೆ. ಇನ್ನು ನಾಯಕನಟ ರಾಜ್ ಸೂರ್ಯ ಬೇರೆ ಹೀರೋಗಳ ಜತೆಯಾಗಿದ್ದರೆ ಒಪ್ಪತ್ತಿದ್ದರೇನೋ ಎಂದು ತನ್ನ ಮೇಲೆ ತಾನೇ ಬೇಸರಪಟ್ಟುಕೊಂಡಿದ್ದಾರೆ. ಇದೆಂಥಾ ವಿಪರ್ಯಾಸವಿರಬೇಕಲ್ಲವೇ!
No Comment! Be the first one.