‘ಪೈಲ್ವಾನ್’ ಜೊತೆ ‘ಬ್ಯಾಡ್ ಬಾಯ್’ ಫೈಟಿಂಗ್!

ಪೈಲ್ವಾನ್ ಕಿಚ್ಚ ಸುದೀಪ್ ಮತ್ತು ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಜೊತೆಯಾಗಿ ಅಭಿನಯಿಸುತ್ತಿರುವ ದಬಾಂಗ್ 3 ಸಿನಿಮಾ ಈಗಾಗಲೇ ಬಾಲಿವುಡ್ ನಲ್ಲಿ ಧೂಳೆಬ್ಬಿಸಿದೆ. ಈಗಾಗಲೇ ದಬಾಂಗ್ ಚಿತ್ರದ ಸೀಕ್ವೆಲ್ಗಳು ಭರ್ಜರಿ ಮನರಂಜನೆ ನೀಡಿದ್ದು ಇದೀಗ ಮತ್ತೊಂದು ಸೀಕ್ವೆಲ್ಗೆ ತಯಾರಿ ನಡೆಸಿದೆ ದಬಾಂಗ್ ಚಿತ್ರತಂಡ. ವಿಶೇಷ ಅಂದ್ರೆ ಚಿತ್ರದಲ್ಲಿ ಸಲ್ಮಾನ್ ಖಾನ್ಗೆ ಎದುರಾಗಿ ಸುದೀಪ್ ತೊಡೆತಟ್ಟಲಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್ ಆಗಿದ್ದು ಕಿಚ್ಚನ ಆಗಮನಕ್ಕಾಗಿ ಚಿತ್ರತಂಡ ಕಾಯುತ್ತಿದೆ.

ಸದ್ಯ ಸುದೀಪ್ ಕೋಟಿಗೊಬ್ಬ 3, ಸೈರಾ ಸಿನಿಮಾಗಳು ಸೇರಿದಂತೆ ಇನ್ನಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಮೇ ತಿಂಗಳ ಮೊದಲ ವಾರದಲ್ಲಿ ಸಲ್ಲು ಜೊತೆಯಾಗಿ ಅಖಾಡಕ್ಕಿಳಿಯಲಿದ್ದಾರೆ. ಇನ್ನು ಸಿನಿಮಾದಲ್ಲಿ ಸುದೀಪ್ ಸಿಖಂಡರ್ ಭಾರದ್ವಾಜ್ ಎನ್ನುವ ರೋಲ್ ನಲ್ಲಿ ಅಭಿನಯಿಸುತ್ತಿದ್ದು, ಸಲ್ಮಾನ್ ಚುಲ್ ಬುಲ್ ಪಾಂಡೆ ಪೊಲೀಸ್ ಅಧಿಕಾರಿಯಾಗಿ ಅಬ್ಬರಿಸಲಿದ್ದಾರೆ. ಈಗಾಗಲೇ ಚಿತ್ರದ ಮೇಕಿಂಗ್ ಕ್ಯೂರಿಯಾಸಿಟಿ ಮೂಡಿಸಿದ್ದು ಕಿಚ್ಚಸಲ್ಲುವಿನ ಫೈಟಿಂಗ್ ಹೇಗಿರಲಿದೆ ಅನ್ನೋದನ್ನ ಕಾದು ನೋಡಬೇಕಿದೆ. ಇನ್ನು ಚಿತ್ರಕ್ಕೆ ಸೋನಾಕ್ಷಿ ಸಿನ್ಹಾ ನಾಯಕಿಯಾಗಿ ಕಾಣಿಸಿಕೊಂಡಿದ್ದು ಪ್ರಭುದೇವ ಆ್ಯಕ್ಷನ್ ಕಟ್ ಹೇಳಿದ್ದಾರೆ.


Posted

in

by

Tags:

Comments

Leave a Reply