ಪೊಗರು ನಂತರ ದುಬಾರಿಗೆ ರೆಡಿಯಾಗಿರೋ ದ್ರುವ ಸರ್ಜಾ ಪುರಿ ಜಗನ್ನಾಥ್ ಜೊತೆ ಸಿನಿಮಾ ಮಾಡೋಕೆ ತಯಾರಿ ನಡೆಸಿಕೊಳ್ತಿದ್ದಾರೆ. ಈ ಸಿನಿಮಾಗಳ ನಂತರ ದ್ರುವ ಸರ್ಜಾ ಮತ್ತು ಹರ್ಷ ಸಿನಿಮಾ ಮುನ್ನಲೆಗೆ ಬರಲಿದೆ ಅಂತಾ ಸುದ್ದಿ ಹಬ್ಬಿದೆ.
- ಸಂತೋಷ್
ಪೊಗರು ಸಿನಿಮಾದ ಮೂಲಕ ಯಶಸ್ಸಿನ ಖುಷಿಯಲ್ಲಿರೋ ಆ್ಯಕ್ಷನ್ ಪ್ರಿನ್ಸ್ ದ್ರುವ ಸರ್ಜಾ ತಮ್ಮ ಮುಂದಿನ ಸಿನಿಮಾಗಳಿಗೆ ಭರ್ಜರಿ ಪ್ಲಾನ್ ಹಾಕ್ತಿದ್ದಾರೆ. ಒಂದಲ್ಲಾ, ಎರಡಲ್ಲ, ಮೂರು ಸಿನಿಮಾಗಳು ಪೊಗರು ಹುಡುಗನ ಕೈ ಸೇರಿವೆ. ಪೊಗರು ನಂತರ ದುಬಾರಿಯಾಗ್ತಿರೋ ಅದ್ದೂರಿ ಹುಡುಗನಿಗೆ ಆ್ಯಕ್ಷನ್ ಕಟ್ ಹೇಳೋಕೆ ಸಾಲು ಸಾಲು ನಿರ್ದೇಶಕರು ಮುಂದಾಗ್ತಿದ್ದಾರೆ. ಅದರಲ್ಲೂ ವಿಶೇಷ ಅಂದ್ರೆ ಭಜರಂಗಿ ಮೇಕರ್ ಎ ಹರ್ಷ ಹೆಸರು ಕೇಳಿ ಬರ್ತಿದೆ.
ದ್ರುವ ಸರ್ಜಾ ಅಪ್ಪಟ ಆಂಜಿನೇಯನ ಭಕ್ತ. ಇತ್ತ ಎ ಹರ್ಷ ಕೂಡ ಹನುಮಂತನ ಆರಾಧಕ. ಈ ಇಬ್ಬರೂ ಈಗ ಒಟ್ಟಿಗೆ ಕೆಲಸ ಮಾಡೋ ಕಾಲ ಕೂಡಿ ಬಂದಿದೆ. ವಜ್ರಕಾಯ, ಭಜರಂಗಿ, ಭಜರಂಗಿ 2, ವೇದ ಸಿನಿಮಾದ ನಂತರ ಮತ್ತೊಂದು ಪವರ್ ಫುಲ್ ಸಿನಿಮಾ ಮಾಡೋಕೆ ನಿರ್ದೇಶಕ ಹರ್ಷ ಪ್ಲಾನ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಅದು ಹರ್ಷ ಮತ್ತು ದ್ರುವ ಸರ್ಜಾ ಕಾಂಬಿನೇಷನ್ನಲ್ಲಿ ರೆಡಿಯಾಗಲಿದ್ದು, ಹನುಭಕ್ತರಿಬ್ಬರೂ ಬಿಗ್ ಬಜೇಟ್ ಸಿನಿಮಾವೊಂದಕ್ಕೆ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಭಜರಂಗಿ 2 ನಂತರ 4ನೇ ಬಾರಿ ಮತ್ತೆ ಶಿವಣ್ಣನ ಜೊತೆ ‘ವೇದ’ ಸಿನಿಮಾ ಮಾಡೋಕೆ ಹರ್ಷ ರೆಡಿಯಾಗಿದ್ದಾರೆ.
ಇತ್ತ ಪೊಗರು ನಂತರ ದುಬಾರಿಗೆ ರೆಡಿಯಾಗಿರೋ ದ್ರುವ ಸರ್ಜಾ ಪುರಿ ಜಗನ್ನಾಥ್ ಜೊತೆ ಸಿನಿಮಾ ಮಾಡೋಕೆ ತಯಾರಿ ನಡೆಸಿಕೊಳ್ತಿದ್ದಾರೆ. ಈ ಸಿನಿಮಾಗಳ ನಂತರ ದ್ರುವ ಸರ್ಜಾ ಮತ್ತು ಹರ್ಷ ಸಿನಿಮಾ ಮುನ್ನಲೆಗೆ ಬರಲಿದೆ ಅಂತಾ ಸುದ್ದಿ ಹಬ್ಬಿದೆ. ಅಲ್ಲದೇ ಈ ಸಿನಿಮಾಗೆ ಭರಾಟೆ ನಿರ್ಮಾಪಕ ಸುಪ್ರಿತ್ ಗೌಡ ಬಂಡವಾಳ ಹೂಡಲಿದ್ದಾರೆ ಎನ್ನಲಾಗ್ತಿದ್ದು, ಈಗಾಗಲೇ ಈ ಸಿನಿಮಾದ ಬಗ್ಗೆ ಒಂದು ರೌಂಡ್ ಮಾತುಕತೆ ಕೂಡ ಮುಗಿದಿದೆ ಎನ್ನಲಾಗ್ತಿದೆ. ಹರ್ಷ ಮತ್ತು ದ್ರುವ ಸರ್ಜಾ ಇಬ್ಬರೂ ಕೂಡ ಹನುಮಂತನ ಪರಮ ಭಕ್ತರು. ವಜ್ರಕಾಯನ ಇಬ್ಬರೂ ಆರಾಧಕರು ಒಂದಾಗೋದ್ರಲ್ಲಿ ಡೌಟೇ ಇಲ್ಲಾ ಅನ್ನೋದು ಚಿತ್ರರಂಗದ ತಜ್ಞರ ಮಾತು.
No Comment! Be the first one.