ನಿರೀಕ್ಷೆಗಳು ನಿಜವೇ ಆದರೆ ದಿಲ್ ಪಸಂದ್ ʻಲವ್ ಮಾಕ್ಟೇಲ್ʼ ಸರಣಿ ಸಿನಿಮಾಗಳಂತೆ ದೊಡ್ಡ ಮಟ್ಟದಲ್ಲಿ ಗೆಲ್ಲಲಿದೆ. ಮದರಂಗಿ ಕೃಷ್ಣ ಅವರನ್ನು ಹೇಗೆಲ್ಲಾ ನೋಡಲು ಜನ ಬಯಸುತ್ತಿದ್ದಾರೋ ಅಂಥಾದ್ದೇ ರೋಲಲ್ಲಿ ಕೃಷ್ಣ ಕಾಣಿಸಿಕೊಂಡಿದ್ದಾರೆ.
ನಿಮಗೆಲ್ಲ ನೆನಪಿರಬೇಕು. ಇಸವಿ 2016ರಲ್ಲಿ ʻನಾನಿʼ ಹೆಸರಿನ ಸಿನಿಮಾ ಬಂದಿತ್ತು. ಪ್ರಣಾಳ ಶಿಶುವನ್ನು ಆವರಿಸಿದ್ದ ನೈಜ ಮತ್ತು ಭಯಾನಕ ಘಟನೆಯೊಂದರ ಸುತ್ತ ಹೆಣೆದಿದ್ದ ಸಿನಿಮಾವದು. ಆ ಚಿತ್ರವನ್ನು ನಿರ್ದೇಶಿಸಿದ್ದವರು ಸುಮಂತ್. ಇವರ ಮೂಲ ಹೆಸರು ರಾಘವೇಂದ್ರ ಗೊಲ್ಲಹಳ್ಳಿ. ತೀರಾ ಸಣ್ಣ ವಯಸ್ಸಿಗೇ ಚಿತ್ರ ನಿರ್ದೇಶಕನಾಗಬೇಕು ಅಂತಾ ಬಯಸಿ, ಪರಿಪೂರ್ಣ ತಯಾರಿಯನ್ನು ಮಾಡಿಕೊಂಡು ಚಿತ್ರರಂಗಕ್ಕೆ ಬಂದವರು ಸುಮಂತ್.
ಎಲ್ಲಾ ಅಂದುಕೊಂಡಂತೇ ಆಗಿದ್ದಿದ್ದರೆ ಸ್ಟಾರ್ ನಟನೊಬ್ಬನ ಸಿನಿಮಾವನ್ನು ಸುಮಂತ್ ಮೊಟ್ಟ ಮೊದಲ ಬಾರಿಗೆ ನಿರ್ದೇಶಿಸಬೇಕಿತ್ತು. ಎಲ್ಲವೂ ಕೈಗೂಡಿತು ಅನ್ನುವಷ್ಟರಲ್ಲಿ ಆ ಪ್ರಾಜೆಕ್ಟು ಡ್ರಾಪ್ ಔಟ್ ಆಗಿತ್ತು. ಅದರ ಬಗೆಗೆಲ್ಲಾ ತಲೆ ಕೆಡಿಸಿಕೊಳ್ಳದ ಸುಮಂತ್ ನಾನಿ ಸಿನಿಮಾವನ್ನು ಕೈಗೆತ್ತಿಕೊಂಡಿದ್ದರು. ಬಹುತೇಕ ಗುಜರಾತಿನಲ್ಲಿ ಚಿತ್ರೀಕರಣಗೊಂಡಿದ್ದ ಆ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸೌಂಡು ಮಾಡಿತ್ತು. ಬಂಡವಾಳ ಹೂಡಿದವರಿಗೂ ಮೋಸ ಮಾಡಿರಲಿಲ್ಲ.
ಇದಾದ ನಂತರ ಸುಮಂತ್ ಬರ್ಕ್ಲಿ ಮತ್ತು ಕಾಲಚಕ್ರ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವೆರಡು ಸಿನಿಮಾಗಳೂ ಬಿಡುಗಡೆಗೆ ರೆಡಿಯಾಗಿವೆ. ತಾವೇ ಒಬ್ಬ ಉದಯೋನ್ಮುಖ ನಿರ್ದೇಶಕರಾಗಿದ್ದರೂ ಮತ್ತೊಬ್ಬ ನಿರ್ದೇಶಕನ ಸಿನಿಮಾಗೆ ಹಣ ಹೂಡುವ ಮನಸ್ಸು ಮಾಡಿದ್ದು ಸುಮಂತ್ ಅವರ ಸಿನಿಮಾ ಪ್ರೀತಿಯನ್ನು ತೋರುತ್ತದೆ. ಹಾಗೆ ಕಥೆ ಇಷ್ಟವಾದಕೂಡಲೇ ಸುಮಂತ್ ಆರಂಭಿಸಿದ್ದ ಚಿತ್ರ ʻದಿಲ್ ಪಸಂದ್ʼ. ಡಾರ್ಲಿಂಗ್ ಕೃಷ್ಣ, ಕೃಷ್ಣ ಅಜೇಯ್ ರಾವ್, ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ಒಟ್ಟಿಗೇ ನಟಿಸಿರುವ ದಿಲ್ ಪಸಂದ್ ಇದೇ ವಾರ ತೆರೆಗೆ ಬರುತ್ತಿದೆ. ಸುಮಂತ್ ಅವರ ಒಳ್ಳೇ ಮನಸ್ಸಿಗೆ ಪ್ರತಿಫಲವಾಗಿ ʻದಿಲ್ ಪಸಂದ್ʼ ಉತ್ತಮ ವ್ಯಾಪಾರವನ್ನೂ ಮುಗಿಸಿದೆ. ಈ ಚಿತ್ರದ ನಿರ್ದೇಶಕ ಶಿವತೇಜಸ್ ಈ ಹಿಂದೆ ಮಳೆ, ಧೈರ್ಯಂ, ಶಿವಾರ್ಜುನ ಮುಂತಾದ ಯಶಸ್ವೀ ಚಿತ್ರಗಳನ್ನು ನೀಡಿದವರು.
ನಿರೀಕ್ಷೆಗಳು ನಿಜವೇ ಆದರೆ ದಿಲ್ ಪಸಂದ್ ʻಲವ್ ಮಾಕ್ಟೇಲ್ʼ ಸರಣಿ ಸಿನಿಮಾಗಳಂತೆ ದೊಡ್ಡ ಮಟ್ಟದಲ್ಲಿ ಗೆಲ್ಲಲಿದೆ. ಮದರಂಗಿ ಕೃಷ್ಣ ಅವರನ್ನು ಹೇಗೆಲ್ಲಾ ನೋಡಲು ಜನ ಬಯಸುತ್ತಿದ್ದಾರೋ ಅಂಥಾದ್ದೇ ರೋಲಲ್ಲಿ ಕೃಷ್ಣ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆಗೊಂಡಿರುವ ಟ್ರೇಲರು ಎಲ್ಲರನ್ನೂ ರಂಜಿಸಿದೆ. ʻರಾಮಾ ರಾಮಾ ರಾಮಾʼ ಹಾಡು ಕನ್ನಡದ ಅಷ್ಟೂ ಜನ ಸಿನಿಪ್ರಿಯರನ್ನು ಎಲ್ಲೆಂದರಲ್ಲಿ ಕುಣಿಸುತ್ತಿದೆ. ಇಂಥ ಸಿನಿಮಾಗಳು ಗೆದ್ದರೆ ಸುಮಂತ್ ಥರದ ನಿರ್ದೇಶಕ, ನಿರ್ಮಾಪಕರು ಕನ್ನಡ ಚಿತ್ರರಂಗದಲ್ಲಿ ನಿಜಕ್ಕೂ ಕ್ರಾಂತಿಯ ಅಲೆ ಎಬ್ಬಿಸಬಲ್ಲರು. ಒಳ್ಳೇದಾಗ್ಲಿ….
No Comment! Be the first one.