ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೋಡಿಯ ಅದ್ದೂರಿ ಸಿನಿಮಾ ಭಾರತ್ ನಲ್ಲಿ ದಿಶಾ ಸೀರೆ ಉಟ್ಟಿರುವ ಶೈಲಿಯಿಂದಾಗಿ ಬಾಲಿವುಡ್ ಸುಂದರಿ ದಿಶಾ ಪಟಾನಿ ಈಗ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ದಿಶಾ ನೀನು ಸೀರೆ ಉಟ್ಟಿರುವೆಯಾ? ನಿನ್ನ ಮೈಮೇಲೆ ಸೀರೆ ಎಲ್ಲಿದೆ? ಸೆರೆಗೆಲ್ಲಿದೆ? ಎಂಬಿತ್ಯಾದಿ ಕಮೆಂಟ್ ಗಳನ್ನು ನೆಟ್ಟಿಗರು ಹರಿಬಿಡುತ್ತಿದ್ದು, ದಿಶಾ ಪಟಾನಿಗೆ ಕಾಳೆಯುವಲ್ಲಿ ಬ್ಯುಸಿಯಾಗಿದ್ದಾರೆ.
ಭಾರತ್ ಸಿನಿಮಾದ ಸ್ಲೋ ಮೋಷನ್ ಎಂಬ ಹಾಡಿಗಾಗಿ ಸಲ್ಲೂ ಬಾಯ್ ಜತೆ ದಿಶಾ ಮೈ ಮರೆತು ಕುಣಿದಿದ್ದಾರೆ. ಇದರ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಪಡೆಯುತ್ತಿದ್ದಂತೆ ಟ್ರೋಲಿಗರು ದಿಶಾಳ ಮೇಲೆ ಸರತಿ ಸಾಲಿನಲ್ಲಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ವಿಶಾಲ್ ಮತ್ತು ಶೇಖರ್ ಜೋಡಿಯ ಸ್ಲೋ ಮೋಷನ್ ಹಾಡಿಗಾಗಿ ದಿಶಾ ಹಳದಿ ಬಣ್ಣದ ಸಿಂಥೆಟಿಕ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸೀರೆಯ ಸೆರಗನ್ನು ಸೊಮಟದಿಂದಲೇ ತಿರುಚಿ ಹಗ್ಗದಂತೆ ಮಾಡಲಾಗಿದೆ. ಸೊಂಟಕ್ಕೆ ಅಂತಹುದೇ ಸೀರೆಯ ಹಗ್ಗವನ್ನು ಬಿಗಿಯಲಾಗಿದೆ. ತೋಳಿಲ್ಲದ ರವಿಕೆ ಮತ್ತು ಸಪಾಟು ಹೊಟ್ಟೆಯಲ್ಲಿ ಬಿಂದಾಸ್ ಆಗಿ ಕುಣಿದು ನೃತ್ಯ ಮಾಡಿರುವ ದಿಶಾ ಉಟ್ಟಿರುವ ಸೀರೆಯ ಮೇಲೆ ಎಲ್ಲರ ಕಣ್ಣು ಬಿದ್ದಿದೆ.
ಸೋಶಿಯಲ್ ಮೀಡಿಯಾದಲ್ಲಿ ದಿಶಾ ಕುರಿತಾಗಿ ಸಾಕಷ್ಟು ಚರ್ಚೆಗಳು ಏಳುತ್ತಿದ್ದಂತೆ ಅಂತಿಮವಾಗಿ ದಿಶಾ ಪ್ರತಿಕ್ರಿಯಿಸಿದ್ದು, ನಾನು ನಿಮಗೆ ಕಾಮಿಡಿ ಪೀಸ್ ಥರ ಕಾಣುತ್ತಿದ್ದೇನಾ ಎಂದು ಟ್ರೋಲಿಗರಿಗೆ ಪ್ರಶ್ನಿಸಿದ್ದಾರೆ.
No Comment! Be the first one.