ನಿಲುವಂಗಿಯ ಕನಸಿನ ಮೂಲಕ ಕಥೆಯ ಹೇಳುತ್ತಾ…

ದಟ್ಟ ಮಲೆನಾಡಿನೊಳಗೆ ಕರೆಂಟ್ ತಯಾರಿಸುವ ಯೋಜನೆಯಿಂದ ಮಲೆನಾಡು ತಲ್ಲಣಕ್ಕೆ ಒಳಗಾಗುತ್ತದೆ. ಅದರ ಜತೆಜತೆಗೆ ಜಗತ್ತಿನ ಎಲ್ಲಾ ಭಾಗಕ್ಕೂ ತಟ್ಟುವ ಖಾಸಗೀಕರಣ ಹಾಗು ಜಾಗತೀಕರಣದ ಎಫೆಕ್ಟ್ ಮಲೆನಾಡಿನ ಜನರ ಮೇಲೆ ಯಾವ ರೀತಿಯಾಗಿ ಪರಿಣಾಮ ಬೀರಿತು..? ಅಲ್ಲಿ ಬದುಕು ಮಾಡುವವರ ಕತೆ ದುರಂತದ್ದಾದರೆ, ಆ ದುರಂತಕ್ಕೆ ಮುನ್ನುಡಿಯಾಗಿ ಬಂದ ಕಾರ್ಯ ಯಾವುದು ಎಂಬುದನ್ನೆಲ್ಲಾ ಎಳೆಎಳೆಯಾಗಿ ಬಿಡಿಸಿ ಹೇಳುತ್ತಾ ಹೋಗುತ್ತದೆ…ನಿಲುವಂಗಿಯ ಕನಸು ನಾಟಕ.

ನಿಲುವಂಗಿಯ ಕನಸು ಖ್ಯಾತ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಅವರ ಕಾದಂಬರಿ. ಆ ಕಾದಂಬರಿಯನ್ನು ರಂಗರೂಪಕ್ಕೆ ತಂದವರು ಪ್ರಸಾದ್ ರಕ್ಷಿದಿ. ಉಲಿವಾಲ‌ ಮೋಹನ್ ಕುಮಾರ್ ಈ ನಾಟಕವನ್ನು ನಿರ್ದೇಶಿಸಿದ್ದಾರೆ.ಹಳ್ಳಿಯ ಕೆಳಸ್ಥರದ ರೈತ ಕುಟುಂಬವೊಂದು ತುಂಬ ಸಣ್ಣ ಅಗತ್ಯತೆ ಎನಿಸುವ ಒಂದು ನೈಟಿಯನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಹೋಗುತ್ತದೆ ಎಂದು ಹೇಳುತ್ತಲೇ ಇಡೀ ಜೀವನದಲ್ಲಿ ಏನೆಲ್ಲಾ ಕಷ್ಟ ಪಟ್ಟರೂ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದನ್ನು ತೋರಿಸುತ್ತದೆ.

ಹಲವು ವಿಚಾರಗಳಲ್ಲಿ ಸಮಸ್ಯೆ ಇದೆ ಎಂಬುದು ಗೊತ್ತಾಗುತ್ತದೆ.ಆದರೆ ಈ ಸಮಸ್ಯೆಯ ಮೂಲ ಎಲ್ಲಿದೆ ಎಂಬುದನ್ನು ಹುಡುಕುವ ಪ್ರಯತ್ನಗಳು ಅಷ್ಟಾಗಿ ನಡೆದಂತೆ ಕಾಣುವುದಿಲ್ಲ. ಸಮಸ್ಯೆ ಎಂಬ ಗಾಯವನ್ನು ಹುಡುಕುವ ಪ್ರಯತ್ನ ಈ ನಾಟಕದಲ್ಲಿದೆ. ಗಾಯ ಎಂತದು ಎಂಬುದನ್ನು ಹೇಳುತ್ತದೆ. ನಂತರ ಆ ಗಾಯಕ್ಕೆ ಎಂತಹಾ ಔಷದಿ ಬೇಕು ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ಈ “ನಿಲುವಂಗಿಯ ಕನಸು” ನಾಟಕ ಬಹಳ ಮುಖ್ಯವಾಗುತ್ತದೆ.

ಸಮಸ್ಯೆ ಅಂದಾಕ್ಷಣ ಬರೀ ಗೋಳು ಎಂಬುದು ಸಾಮಾನ್ಯ ಗ್ರಹಿಕೆ. ಆದರೆ ಈ ನಾಟಕದಲ್ಲಿ ರೈತರ ಸಮಸ್ಯೆಯನ್ನು ಗೋಳಾಗಿಸದೇ ರೈತರ ಜೀವದ ಕಣಕಣದಲ್ಲೂ ಇರುವ ಜೀವನೋತ್ಸಾಹ, ಲವಲವಿಕೆಯನ್ನೂ ಮೇಳೈಸಿಕೊಂಡ ಈ ನಾಟಕ ಸರ್ಕಾರಿ‌ ಶಾಲೆಯ ಸಮಸ್ಯೆ, ಮುಳುಗಡೆ ಸಮಸ್ಯೆ ಮುಂತಾದವನ್ನು ಹದವಾಗಿ ನಿರೂಪಿಸುತ್ತಾ ಸಾಗುತ್ತದೆ.

ಇಂತಹಾ ಒಂದು ರೈತರ ವಿಷಯ ಈ ಕಾಲದ ಅಗತ್ಯ. ರಂಗಭೂಮಿಯ ವಿಶೇಷ ಪ್ರಯೋಗ.ಇದೇ ಶುಕ್ರವಾರ 8 ರ ಸಂಜೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನವಿದೆ. ರಂಗಾಸಕ್ತರು, ಸಾರ್ವಜನಿಕರು ಈ ಈ ನಾಟಕವನ್ನು ಗಂಭೀರವಾಗಿ ಪರಿಗಣಿಸಲು ಹಲವಾರು ಕಾರಣಗಳಿವೆ…ಆ ಕಾರಣದ ನಿಮಿತ್ತಕ್ಕೆ ಸಾಕ್ಷಿಯಾಗಿ

#


Posted

in

by

Tags:

Comments

Leave a Reply