ದುನಿಯಾ ವಿಜಯ್ ಪಾನಿಪುರಿ ಕಿಟ್ಟಿ ತಮ್ಮನ ಮೇಲೆ ಹಲ್ಲೆ ಮಾಡಿ ಜೈಲುಪಾಲಾಗಿದ್ದಾರೆ. ದೃಷ್ಯ ಮಾಧ್ಯಮಗಳಂತೂ ಬಿಟ್ಟೂ ಬಿಡದಂತೆ ವಿಜಿಗೆ ಜೈಲು ಖಾಯಂ ಎಂಬಂಥಾ ಸುದ್ದಿ ಹರಡುತ್ತಿವೆ. ಇದೇ ಹೊತ್ತಿನಲ್ಲಿ ಮಾಧ್ಯಮಗಳಲ್ಲಿ ಜಾಹೀರಾಗುತ್ತಾ ಬಂದಿರೋ ಏಕಮುಖವಾದ ಹಲ್ಲೆ ಪ್ರಕರಣಕ್ಕೆ ಮತ್ತೊಂದು ಮುಖವೂ ಇದ್ದೀತೆಂಬುದರ ಬಗ್ಗೆಯೂ ಚರ್ಚೆಗಳಾಗುತ್ತಿವೆ. ಅಂಥಾ ಚರ್ಚೆಗಳೇ ಒರಟ, ರಾಕ್ಷಸ ಎಂಬರ್ಥದಲ್ಲಿ ಮಾಧ್ಯಮಗಳು ಅನಾವರಣಗೊಳಿಸುತ್ತಿರುವ ವಿಜಯ್ ಅವರ ಮನುಷ್ಯತ್ವದ ಮುಖವೊಂದನ್ನು ಅನಾವರಣಗೊಳಿಸುತ್ತಿವೆ!

ವಿಜಯ್ ಪಾನಿಪುರಿ ಕಿಟ್ಟಿಯ ಮೃದು ಸ್ವಭಾವದ ತಮ್ಮ ಮಾರುತಿಗೆ ಸಾಯ ಬಿಡಿದಿದ್ದಾರೆಂಬುದು ಈಗಿರೋ ಆರೋಪ. ಇದರ ಹಿಂಚುಮುಂಚಲ್ಲಿ ಯಾವ ಪ್ರಚೋದನೆ ಇತ್ತು? ಅದಕ್ಕೆ ಯಾರು ಕಾರಣ ಎಂಬುದರ ಬಗ್ಗೆ ಪೊಲೀಸ್ ತನಿಖೆಯೇ ಉತ್ತರ ಹೇಳಬೇಕಿದೆ. ಇದೆಲ್ಲ ಏನೇ ಇದ್ದರೂ ಓರ್ವ ನಟನಾಗಿ ವಿಜಯ್ ಈ ಥರದ ರಂಖಲುಗಳನ್ನು ಮಾಡಿಕೊಂಡಿದ್ದು ದುರಾದೃಷ್ಟವೇ. ಮಾಡಿದ ತಪ್ಪಿಗೆ ಶಿಕ್ಷೆಯೂ ಆಗಲಿ. ಆದರೆ ಈವತ್ತಿಗೆ ಮಾಧ್ಯಮಗಳು ಬಡಿದುಕೊಳ್ಳುತ್ತಿರುವಂತೆ ವಿಜಯ್ ಕರುಣೆಯ ಪಸೆಯೇ ಇಲ್ಲದ ರಕ್ಕಸನಾ? ವಿಜಯ್ ಎಂದರೆ ಕೇವಲ ಪುಂಡಾಟದ ವ್ಯಕ್ತಿತ್ವ ಮಾತ್ರವಾ ಅಂತ ನೋಡ ಹೋದರೆ ಒಂದಷ್ಟು ವಿಚಾರಗಳು ಎದುರುಗೊಳ್ಳುತ್ತವೆ. ಅಭಿಮಾನಿಗಳಲ್ಲದವರೂ ಕೂಡಾ ವಿಜಿಯ ಇಂಥಾ ಭಿನ್ನ ವ್ಯಕ್ತಿತ್ವವನ್ನು ಅಲ್ಲಲ್ಲಿ ಅನಾವರಣಗೊಳಿಸುತ್ತಿದ್ದಾರೆ.

ಇದರಲ್ಲಿ ಖೈದಿಯೊಬ್ಬ ಪತ್ರಿಕೆಯೊಂದಕ್ಕೆ ಬರೆದ ಪತ್ರವೊಂದು ವಿಜಯ್ ಬಗ್ಗೆ ಕುರುಡಾಗಿ ಒಂದು ಅಭಿಪ್ರಾಯಕ್ಕೆ ಬಂದವರನ್ನೂ ಕೂಡಾ ವಿಚಲಿತರನ್ನಾಗಿಸಿದೆ. ಅದು ನಂಜನಗೂಡು ತಾಲೂಕಿನ ವ್ಯಕ್ತಿಯೋರ್ವ ಬರೆದ ಪತ್ರ. ಅದರಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡ ಕೋಗಿಲೆ ಕಾರ್ಯಕ್ರಮದ ಸ್ಪರ್ಧಿ ಮಹದೇವಸ್ವಾಮಿ ಹೇಳಿದ್ದದೊಂದು ವಿಚಾರವನ್ನು ಉಲ್ಲೇಖಿಸಲಾಗಿದೆ. ಚಾಮರಾಜನಗರದ ಮಹದೇವಸ್ವಾಮಿ ಆ ಕ್ಷಣದ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟು ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದವರು. ಅವರು ಮೈಸೂರು ಜೈಲಿನಲ್ಲಿದ್ದಾಗ ವಿಜಯ್ ಅಭಿನಯದ ದೇವ್ರು ಚಿತ್ರದ ಚಿತ್ರೀಕರಣ ಮೈಸೂರು ಜೈಲಿನಲ್ಲಿತ್ತು. ಈ ಸಂದರ್ಭದಲ್ಲಿ ಜೈಲಿಗಾಗಮಿಸಿದ್ದ ವಿಜಿ ಮಹದೇವಸ್ವಾಮಿ ಸೇರಿದಂತೆ ಖೈದಿಗಳಲ್ಲಿ ಊಟ ಕೊಡಿಸೋ ಬಗ್ಗೆ ಮಾತಾಡಿದ್ದರಂತೆ. ಆಗ ದಂಡ ಕಟ್ಟದೆ ಜೈಲಿನಲ್ಲಿ ಕೊಳೆಯುತ್ತಿದ್ದ ಖೈದಿಗಳು ಆ ದಂಡ ಪಾವತಿಸಿದರೆ ಬಿಡುಗಡೆಯ ಭಾಗ್ಯ ಸಿಕ್ಕುತ್ತದೆಂಬ ವಿಚಾರವನ್ನು ವಿಜಯ್‌ಗೆ ಮನವರಿಕೆ ಮಾಡಿಸಿದ್ದರಂತೆ.

ಈ ವಿಚಾರ ತಿಳಿದ ವಿಜಯ್ ತಕ್ಷಣವೇ ಮೂರೂವರೆ ಲಕ್ಷ ತರಿಸಿ ಪಾವತಿಸಿದ್ದರು. ಅದರಿಂದಾಗಿಯೇ ಅರವತ್ತಕ್ಕು ಹೆಚ್ಚು ಕೈದಿಗಳು ಬಿಡುಗಡೆಗೊಂಡಿದ್ದರು. ತೀರಾ ವಿಜಿಯನ್ನು ಹತ್ತಿರದಿಂದ ಬಲ್ಲವರೆಲ್ಲರಿಗೂ ಅವರ ಮಾನವೀಯ ಮುಖದ ಬಗ್ಗೆ ಗೊತ್ತಿದೆ. ಆತ ಈವತ್ತಿಗೂ ಜನಮನ್ನಣೆ ಗಳಿಸಿಕೊಂಡಿರೋದು ಅಂಥಾ ಮನಸ್ಥಿತಿಯಿಂದಲೇ.
ಈವತ್ತಾದ ಘಟನೆಯಲ್ಲಿ ವಿಜಿ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಬಹುಶಃ ಇದು ವರ ಪಾಲಿಗೆ ಎಚ್ಚರಿಕೆ. ಇದರಿಂದಲಾದರೂ ಎಚ್ಚೆತ್ತುಕೊಂಡು ಬೇರೆಯದ್ದೇ ರೀತಿಯಲ್ಲಿ ಬದುಕು ಕಟ್ಟಿಕೊಳ್ಳದಿದ್ದರೆ ವಿಜಿಯ ನಟನೆಯ ಜೀವನವೂ ಇಂಥಾ ವಿವಾದಗಳ ಕಿಸುರಲ್ಲಿ ಕಳೆದು ಹೋಗಲಿದೆ. ಹಾಗಾಗದಿರಲಿ…

#

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಪಯಣ ಕಿರಣ್ ಗೋವಿ ಲೈಫ್ ಸ್ಟೋರಿ!

Previous article

ರಶ್ಮಿಕಾ ಬಿಟ್ಟು ಹೋದ ವೃತ್ರಕ್ಕೆ ನಿತ್ಯಾಗಮನ!

Next article

You may also like

Comments

Leave a reply

Your email address will not be published. Required fields are marked *