ರಕ್ಷಿತ್ ಶೆಟ್ಟಿ ಜೊತೆ ಬ್ರೇಕಪ್ ಆದ ಸುದ್ದಿ ಹರಡುತ್ತಲೇ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದಲೂ ದೂರ ಸರಿಯುತ್ತಿದ್ದಾಳಾ? ಎಂಬ ಪ್ರಶ್ನೆ ಹುಟ್ಟಲು ಕಾರಣವಾಗಿರೋದು ವೃತ್ರ ಚಿತ್ರ. ರಕ್ಷಿತ್ ಬೆಟಾಲಿಯನ್ನಿನ ಸದಸ್ಯರಾಗಿರೋ ಗೌತಮ್ ನಿರ್ದೇಶನದ ವೃತ್ರ ಚಿತ್ರಕ್ಕೆ ರಶ್ಮಿಕಾ ನಾಯಕಿ ಎಂಬುದಾಗಿ ಅಧಿಕೃತವಾಗಿಯೇ ಘೋಷಣೆಯಾಗಿತ್ತು. ಆದರೆ ಈ ಚಿತ್ರದಲ್ಲಿ ನಟಿಸೋದಿಲ್ಲ ಅಂತ ರಶ್ಮಿಕಾ ಹೇಳಿದ ಬೆನ್ನಿಗೇ ಹೊಸಾ ಹುಡುಗಿ ನಿತ್ಯಾ ಆ ಜಾಗಕ್ಕೆ ಆಗಮಿಸಿದ್ದಾಳೆ.
ನಿರ್ದೇಶಕ ಗೌತಮ್ ರಕ್ಷಿತ್ ಕ್ಯಾಂಪಿನ ಹುಡುಗ ಎಂಬ ಕಾರಣದಿಂದಲೇ ವೃತ್ರ ಚಿತ್ರದಿಂದ ರಶ್ಮಿಕಾ ದೂರ ಸರಿದಿದ್ದಾಳೆಂಬ ಮಾತೂ ಕೇಳಿ ಬರುತ್ತಿದೆ. ರಶ್ಮಿಕಾ ಹೋದರೇನಂತೆ ಬೇರೆ ನಾಯಕಿಯರಿಗೆ ಬರವೇ ಅಂತೊಂದು ಸಂದೇಶ ರವಾನಿಸೋ ಸಲುವಾಗಿಯೇ ಈ ಚಿತ್ರಕ್ಕೆ ತರಾತುರಿಯಿಂದ ನಿತ್ಯಾ ಎಂಬಾಕೆಯನ್ನು ಕರೆತರಲಾಗಿದೆ ಎಂಬ ರೂಮರುಗಳೂ ಹುಟ್ಟಿಕೊಂಡಿವೆ.
ಒಟ್ಟಾರೆಯಾಗಿ ಮಹಿಳಾ ಪ್ರಧಾನ ವೃತ್ರ ಚಿತ್ರಕ್ಕೆ ನಿತ್ಯಾಶ್ರೀ ನಾಯಕಿಯಾಗಿ ಆಯ್ಕೆಯಾಗಿದ್ದಾಳೆ. ಈ ಹಿಂದೆ ಮಣಿರತ್ನಂ ನಿರ್ದೇಶನದ ಚಿತ್ರವೊಂದರಲ್ಲಿ ಸಣ್ಣದೊಂದು ಪಾತ್ರ ನಿರ್ವಹಿಸಿದ್ದವರು ನಿತ್ಯಾಶ್ರೀ. ಈಕೆ ಈ ಚಿತ್ರದ ಮೂಲಕ ಮಿಂಚಿ ರಶ್ಮಿಕಾ ಸ್ಥಾನವನ್ನು ತುಂಬಲಿದ್ದಾರಾ ಎಂಬ ಕುತೂಹಲವಂತೂ ಪ್ರೇಕ್ಷಕರಲ್ಲಿ ಇದ್ದೇ ಇದೆ.
ಇದು ಗೌತಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹೊಸಬರೇ ತುಂಬಿರುವ ಚಿತ್ರ. ಆದರೆ ರಶ್ಮಿಕಾ ಮತ್ತು ರಕ್ಷಿತ್ ಬ್ರೇಕಪ್ ಕಾರಣದಿಂದ ಈ ಚಿತ್ರಕ್ಕೂ ಗ್ರಹಣ ಕವಿದುಕೊಂಡಿತ್ತು. ಅದಾಗಲೇ ಕನ್ನಡ ಮತ್ತು ಇಂಗ್ಲಿಶ್ ಪೋಸ್ಟರುಗಳಲ್ಲಿಯೂ ರಶ್ಮಿಕಾ ಮಿಂಚಿದ್ದರಲ್ಲಾ? ಆ ಮುಲಾಜಿಗಾದರೂ ರಶ್ಮಿಕಾ ಈ ಚಿತ್ರದಿಂದ ಹೊರ ಹೋಗಲಿಕ್ಕಿಲ್ಲ ಎಂದೇ ಚಿತ್ರತಂಡ ನಂಬಿತ್ತು. ಅದು ಸುಳ್ಳಾದ ತಕ್ಷಣವೇ ಈ ಚಿತ್ರಕ್ಕೆ ನಿತ್ಯಾಶ್ರೀಯ ಆಗಮನವಾಗಿದೆ.
#
No Comment! Be the first one.