“ಲೋಕೇಶ್ ಪ್ರೊಡಕ್ಷನ್ ನಮ್ಮ ಎರಡನೇ ಪ್ರೊಡಕ್ಷನ್ ಹೌಸ್ ಅಂತಾನೇ ಹೇಳಬೇಕು. ಈ ಸಂಸ್ಥೆಯ ಮೊದಲ ಕಾಣಿಕೆ ಎಲ್ಲಿದ್ದೆ ಇಲ್ಲಿತನಕ. ಸೃಜನ್ ಅದ್ಭುತವಾಗಿ ನಟಿಸಿದ್ದಾನೆ. ಅವನ ಹಿಡನ್ ಟ್ಯಾಲೆಂಟ್ ಏನೇನಿದೆಯೋ ಅದೆಲ್ಲವೂ ಇಲ್ಲಿ ಅನಾವರಣಗೊಂಡಿದೆ. ಒಂದು ಪ್ರೊಡಕ್ಷನ್ ಹುಟ್ಟಿಕೊಂಡರೆ ಎಷ್ಟೋ ಜನರ ಜೀವನ ನಡೆಯುತ್ತೆ. ನಮ್ಮ ಅಪ್ಪಜಿ ಹೇಳ್ತಾ ಇದ್ರು; ಒಂದು ಸಿನಿಮಾ ಶುರುವಾದರೆ ಒಬ್ಬ ರೈತನ ತನಕ ಅದರ ಶೇರ್ ಹೋಗತ್ತೆ ಅಂತಾ. ಯಾಕೆಂದ್ರೆ ಒಬ್ಬ ರೈತ ಬೆಳೆದ ಪದಾರ್ಥವನ್ನು ಇಲ್ಲಿ ಎಷ್ಟೋ ಜನ ಊಟ ಮಾಡ್ತಾರೆ. ಹೀಗಾಗಿ ಒಂದು ಹೊಸ ಪ್ರೊಡಕ್ಷನ್ ಹೌಸ್’ಗೆ ನಿಮ್ಮ ಪ್ರೀತಿ, ಪ್ರೋತ್ಸಾಹ, ಬೆಂಬಲ, ಆಶೀರ್ವಾದ ಎಲ್ಲ ಇರಲಿ. ಎಲ್ಲಿದ್ದೆ ಇಲ್ಲಿತನಕ ಇದೇ ಅಕ್ಟೋಬರ್ ೧೧ಕ್ಕೆ ಎಲ್ಲೆಡೆ ರಿಲೀಸ್ ಆಗ್ತಿದೆ. ದಯವಿಟ್ಟು ನೋಡಿ ಬೆಂಬಲಿಸಿ” ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತನ್ನ ಆತ್ಮೀಯ ಗೆಳೆಯ ಸೃಜನ್ ಲೋಕೇಶ್ ನಟಿಸಿ, ಮೊದಲ ಬಾರಿಗೆ ನಿರ್ಮಿಸಿರುವ ಎಲ್ಲಿದ್ದೆ ಇಲ್ಲಿತನಕ ಚಿತ್ರದ ಬಗ್ಗೆ ಆಡಿರುವ ಅಂತರಾಳದ ಮಾತುಗಳು. ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ದರ್ಶನ್ ತನ್ನ ಗೆಳೆಯನ ಸಾಹಸಕ್ಕೆ ಪ್ರೋತ್ಸಾಹ ನೀಡಿದ್ದಾರೆ.
ಎಲ್ಲಿಂದಲೋ ಬಂದವರು ದಿ.ಲೋಕೇಶ್ ಅಭಿನಯದಲ್ಲಿ ದಶಕದಲ್ಲಿ ತೆರೆಕಂಡಿದ್ದ ಜನಪ್ರಿಯ ಚಿತ್ರ. ಆ ಸಿನಿಮಾದ ಎಲ್ಲಿದ್ದೇ ಇಲ್ಲೀತನ್ಕಾ ಎಲ್ಲಿಂದಾ ಬಂದ್ಯವ್ವ ಹಾಡು ಇಂದಿಗೂ ಜನಜನಿತ. ಇದೀಗ ಲೋಕೇಶ್ ಅವರ ಪುತ್ರ ಸೃಜನ್, ಲೋಕೇಶ್ ಪ್ರೊಡಕ್ಷನ್ ಮೂಲಕ ನಿರ್ಮಿಸುತ್ತಿರುವ ಮೊದಲ ಚಿತ್ರಕ್ಕೆ ಎಲ್ಲಿದ್ದೇ ಇಲ್ಲೀತನಕ ಎಂಬ ಶೀರ್ಷಿಕೆಯನ್ನೇ ಇಟ್ಟಿದ್ದಾರೆ. ಈ ಚಿತ್ರಕ್ಕೆ ತೇಜಸ್ವಿ ಎಂಬ ಯುವ ಪ್ರತಿಭೆ ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ ಸೃಜನ್ ಜೊತೆ ನಾಯಕಿಯಗಿ ಬೆಡಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ ಟ್ರೇಲರ್ ಎಲ್ಲೆಡೆ ಸದ್ದು ಮಾಡುತ್ತಿದೆ.
No Comment! Be the first one.