ಧನುಷ್ ಅಭಿನಯದ ದಿ ಎಕ್ಟ್ರಾರ್ಡಿನರಿ ಜರ್ನಿ ಆಫ್ ದಿ ಫಕೀರ್ ಸಿನಿಮಾ ಈಗಾಗಲೇ ಸಾಕಷ್ಟು ಬಹುಮಾನ, ಸನ್ಮಾನಗಳನ್ನು ಬಾಚಿಕೊಂಡಿದೆ. ಅಲ್ಲದೇ ವಿಶ್ವದಾದ್ಯಂತ ಬಹಳಷ್ಟು ಪಾಸಿಟೀವ್ ಪ್ರತಿಕ್ರಿಯೆಗಳನ್ನು ಗಳಿಸಿಕೊಂಡಿದೆ. ಸದ್ಯ ಆಸ್ಟ್ರೇಲಿಯಾ ಮತ್ತು ಜೀಯಾಲೆಂಡ್ ನಲ್ಲಿ ಅದ್ಬುತ ಪ್ರದರ್ಶನ ಕಾಣುತ್ತಿರುವ ಫಕೀರ್ ಬರ್ಕೆಲೆನೋ ಸಂಜೋರ್ಡಿ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಆಡಿಯನ್ಸ್ ಅವಾರ್ಡ್ ನ್ನು ಪಡೆದುಕೊಂಡಿರುವ ಖುಷಿಯಲ್ಲಿದೆ. ಈಗಾಗಲೇ ನಿರ್ದೇಶಕ ಕೆನ್ ಸ್ಕಾಟ್ ನಾರ್ವೆಜಿನ್ ಇಂಟರ್ ನ್ಯಾಷನಲ್ ಫೆಸ್ಟಿವಲ್ ನಲ್ಲಿ ಸನ್ ಶೈನ್ ಅವಾರ್ಡ್ ನ್ನು ಪಡೆದಿದ್ದಾರೆ.
ದಿ ಎಕ್ಟ್ರಾರ್ಡಿನರಿ ಜರ್ನಿ ಆಫ್ ದಿ ಫಕೀರ್ ಸಿನಿಮಾವನ್ನು ಕೆನ್ ಸ್ಕಾಟ್ ನಿರ್ದೇಶನ ಮಾಡುತ್ತಿದ್ದು, ಇದು ಕಾದಂಬರಿ ಆಧಾರಿತ ಸಿನಿಮಾವಾಗಿದೆ. ಮೂಲತಃ ರೋಮನ್ ಪುರ್ಟೋಲ್ಸ್ ರಚನೆಯ ಲೆಕಿಯಾ ವಾರ್ಡ್ ರೋಬ್ ಕೃತಿಯನ್ನು ಆಧರಿಸಿದೆ. ಚಿತ್ರದಲ್ಲಿ ಧನುಷ್, ಬರೆನೆಸ್ ಬೆಜೋ ಮತ್ತು ಇರಿನ್ ಮೊರ್ಯಾಂಟಿ ಅಭಿನಯಿಸಿದ್ದಾರೆ. ಸದ್ಯದಲ್ಲೇ ಭಾರತದಲ್ಲಿ ತೆರೆಕಾಣಲಿದೆ.
No Comment! Be the first one.