- ಸಂತೋಷ್ ಸಕ್ರೆಬೈಲು
ಸಲ್ಮಾನ್ ಯೂಸುಫ್ ಖಾನ್ ಮತ್ತು ಎಲಿ ಅವರಾಮ್ ಇಬ್ಬರು ಬಾಲಿವುಡ್ ನಲ್ಲಿ ತಮ್ಮದೇ ಆದ ಹವಾ ಕ್ರಿಯೇಟ್ ಮಾಡಿರೋ ಜೋಡಿ.. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ವಿಜೇತನಾಗಿದ್ದ ಸಲ್ಮಾನ್ ಪ್ರೊಫೆಷನಲ್ ಡ್ಯಾನ್ಸರ್ ಆಗಿ ಸಖತ್ ಸೌಂಡ್ ಮಾಡಿದ್ದಾನೆ. ಏಲ್ಲಿ ಕೂಡ ಖ್ಯಾತ ನೃತ್ಯಗಾರ್ತಿ.. ಇದೀಗ ಈ ಜೋಡಿ ಡಾನ್ಸ್ ಮಾಡಿರೋ ಒಂದು ಸಾಂಗ್ ನ ಟೀಸರ್ ಔಟ್ ಆಗಿದೆ.. ಫಿದಾಯ್ ಎಂಬ ಸಾಂಗ್ ನ ಟೀಸರ್ ಬಿಡುಗಡೆಯಾಗಿದೆ..
ಕಳೆದು ಹೋದ ಪ್ರೀತಿಯ ನೋವು ಮತ್ತು ಡ್ಯಾನ್ಸಿಂಗ್ ನಲ್ಲಿ ಪಕ್ಕಾ ಸ್ಟೆಪ್ಸ್ ಹಾಕುತ್ತಾ ಇಬ್ಬರು ಕ್ರಿಯೇಟಿವ್ ಆಗಿ ಹೆಜ್ಜೆ ಹಾಕಿದ್ದಾರೆ.. ಟೀಸರ್ ನಲ್ಲಿ ಸೆಳೆದಿರುವ ಈ ಸಾಂಗ್ ಇದೇ ತಿಂಗಳ 25ಕ್ಕೆ ರಿಲೀಸ್ ಆಗಲಿದೆಯಂತೆ. ಟೀಸರ್ ನಲ್ಲಿ ಇಬ್ಬರ ನೃತ್ಯ ಬಹಳ ಅದ್ಬುತವಾಗಿ ಇದೆ.. ಸಲ್ಮಾನ್ ಮೊದಲೇ ಪ್ರೊಫೆಷನಲ್ ಡ್ಯಾನ್ಸರ್ ಆಗಿರೋದ್ರಿಂದ ಹೊಸ ಸ್ಟೆಪ್ಸ್ ಕೂಡ ನೋಡಬಹುದಾಗಿದೆ. ರಾಹುಲ್ ಜೈನ್ ಇದಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಈ ಪೋಸ್ಟರ್ ಅನ್ನು ಎಲಿ ತಮ್ಮ ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ.. ‘ತ್ಯಾಗವಿಲ್ಲದೆ ಆಳವಾಗಿ ಪ್ರೀತಿಸುವುದು ಅಸಾಧ್ಯ’ (Impossible to Love deeply, without sacrifice) ಎಂಬ ಟ್ಯಾಗ್ ಲೈನ್ ಕೊಟ್ಟು ಪೋಸ್ಟರ್ ಶೇರ್ ಮಾಡಿದ್ದಾರೆ.
ಈ ಟೀಸರ್ ರಿಲೀಸ್ ಆಗಿ ಎಲಿ ಫ್ಯಾನ್ಸ್ ಮನಗೆದ್ದಿದೆ. ಜೊತೆಗೆ ಸಾಂಗ್ ಕೂಡ 25ಕ್ಕೇ ಬಿಡುಗಡೆಯಾಗುತ್ತೆ ಅಂತ ಹೇಳಿರುವುದರಿಂದ ಅಭಿಮಾನಿಗಳು ತೀವ್ರ ಕುತೂಹಲದಿಂದ ಕಾಯುತ್ತಿದ್ದಾರೆ.. ಟೀಸರ್ ಇಷ್ಟೋಂದು ಸದ್ದು ಮಾಡ್ತಿದ್ರೆ, ಸೌರಭ್ ಪ್ರಜಾಪತಿ ನಿರ್ದೇಶನ ಮಾಡಿರೋ ಈ ಸಾಂಗ್ ಬಿಗ್ ಪ್ರೇಕ್ಷಕರ ಕುತೂಹಲ ಮತ್ತಷ್ಟು ಹೆಚ್ಚಿಸಿದೆ..
No Comment! Be the first one.