ಎಲ್ಲೆಡೆ ಶಿವರಾಜ್ ಕುಮಾರ್ ಮತ್ತು ಸುದೀಪ್ ನಟಿಸಿರೋ ವಿಲನ್ ಚಿತ್ರಕ್ಕಾಗಿ ಕಾತರ ಶುರುವಾಗಿದೆ. ಈ ಚಿತ್ರ ಇದೇ ತಿಂಗಳ ೧೮ರಂದು ಬಿಡುಗಡೆಯಾಗಲಿದೆಯಲ್ಲಾ? ಇದೇ ದಿನ ಈ ಸಿನಿಮಾದ ಇಂಟರ್‌ವೆಲ್‌ನಲ್ಲಿ ರವಿಕಿರಣ್ ನಿರ್ದೇಶನದ ಗಿರಗಿಟ್ಲೆಯ ಟೀಸರ್ ಕೂಡಾ ಬಿಡುಗಡೆಯಾಗಲಿದೆ. ಈ ರೀತಿಯಲ್ಲಿ ವಿನೂತನವಾಗಿ ಟೀಸರ್ ಅನಾವರಣಗೊಳಿಸಲು ಚಿತ್ರತಂಡ ತಯಾರಾಗಿದೆ.
ಆ ದಿನ ವಿಲನ್ ಚಿತ್ರ ಬಿಡುಗಡೆಯಾಗೋ ಎಲ್ಲ ಚಿತ್ರಮಂದಿರಗಳಲ್ಲಿಯೂ ಗಿರಗಿಟ್ಲೆಯ ಟೀಸರ್ ಬಿಡುಗಡೆಯಾಗಲಿದೆ. ಗಿರೀಶ್, ತಿಮ್ಮರಾಜು ಮತ್ತು ವೆಂಕಟೇಶ್ ಅವರುಗಳು ವೀರಾಂಜನೇಯ ಎಂಟರ್‌ಪ್ರೈಸಸ್ ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರ ಗಿರಗಿಟ್ಲೆ. ಇದು ನಿರ್ದೇಶಕ ರವಿಕಿರಣ್ ನಿರ್ದೇಶನದ ಚೊಚ್ಚಲ ಚಿತ್ರ. ಆದರೆ ಈ ಚಿತ್ರವೀಗ ದೊಡ್ಡ ಮಟ್ಟದಲ್ಲಿಯೇ ಸುದ್ದಿ ಮಾಡಲಾರಂಭಿಸಿದೆ. ಆದ್ದರಿಂದಲೇ ವಿಲನ್ ಜೊತೆ ಬಿಡುಗಡೆಯಾಗಲಿರೋ ಟೀಸರ್‌ಗೆ ಕೂಡಾ ಜನ ಕಾತರದಿಂದ ಕಾಯಲಾರಂಭಿಸಿದ್ದಾರೆ.
ಗಿರಗಿಟ್ಲೆ ಪಕ್ಕಾ ಆಕ್ಷನ್ ಕಥಾ ಹಂದರ ಹೊಂದಿರೋ ಕಮರ್ಶಿಯಲ್ ಚಿತ್ರ. ಈ ಚಿತ್ರದ ಮೂಲಕ ಪ್ರದೀಪ್, ಗುರು ಮತ್ತು ಚಂದ್ರು ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಸನ್ನಿಧಿ ಎಂದೇ ಖ್ಯಾತರಾಗಿರೋ ವೈಷ್ಣವಿ ಗೌಡ ಮತ್ತು ಅದ್ವಿತಿ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ. ಹೀರೋ ಹೀರೋಯಿನ್ ಎಂಬ ಚೌಕಟ್ಟು ಮೀರಿದ ಕಥೆ ಹೊಂದಿರೋ ಈ ಚಿತ್ರದಲ್ಲಿ ರಂಗಾಯಣ ರಘು ಬಲು ವಿಶಿಷ್ಟವಾದೊಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಇದಲ್ಲಿದೇ ಶ್ರೀನಗರ ಕಿಟ್ಟಿ ಅತಿಥಿ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಮೂವತೈದಕ್ಕೂ ಹೆಚ್ಚು ಕಲಾವಿದರ ತಾರಾಗಣವನ್ನೂ ಈ ಚಿತ್ರ ಹೊಂದಿದೆ. ಈ ಹಿಂದೆ ಉಪೇಂದ್ರ ಅಭಿನಯದ ಸೂಪರ್ ಚಿತ್ರದಲ್ಲಿ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸಿದ್ದ ಈ ಚಿತ್ರದ ನಿರ್ದೇಶಕ ರವಿ ಕಿರಣ್ ಮೂರು ತಮಿಳು ಚಿತ್ರಗಳಿಗೂ ಕಜೆಲಸ ಮಾಡಿದ ಅನುಭವ ಹೊಂದಿದ್ದಾರೆ. ದುನಿಯಾ ವಿಜಯ್ ಅಭಿನಯದ ಜಾಕ್ಸನ್ ಚಿತ್ರಕ್ಕೆ ಸ್ಕ್ರೀನ್ ಪ್ಲೇ, ಡೈಲಾಗ್ ಬರೆದಿದ್ದ ಅವರು ಸೃಜನ್ ಲೋಕೇಶ್ ಅಭಿನಯಿಸಿದ್ದ ಸಪ್ನೋಂಕಿ ರಾಣಿ ಚಿತ್ರಕ್ಕೂ ಡೈಲಾಗ್ ಮತ್ತು ಹಾಡು ಬರೆದಿದ್ದರು.
ಹೀಗೆ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರೋ ರವಿಕಿರಣ್ ಚೊಚ್ಚಲ ನಿರ್ದೇಶನದ ಗಿರಗಿಟ್ಲೆ ಚಿತ್ರದ ಮೂಕಲಕ ಆರಂಭದಲ್ಲಿಯೇ ಅಲೆಯೆಬ್ಬಿಸಿದ್ದಾರೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಎ ಸರ್ಟಿಫಿಕೆಟು ಸಿಕ್ಕಿದೆ. ಹಾಗಂತ ಈ ಚಿತ್ರದಲ್ಲಿ ಅಂಥಾ ಎಕ್ಸ್‌ಪೋಸ್ ಮುಂತಾದ ದೃಷ್ಯಾವಳಿಗಳಿದ್ದಾವೆ ಅಂದುಕೊಳ್ಳಬೇಕಿಲ್ಲ. ಪಕ್ಕಾ ಮಾಸ್ ಸಬ್ಜೆಕ್ಟು ಹೊಂದಿರೋ ಈ ಚಿತ್ರದಲ್ಲಿ ಒಂದಷ್ಟು ರಕ್ತ ಮೆತ್ತಿದ ಸೀನುಗಳಿರೋದರಿಂದಷ್ಟೇ ಅ ಸರ್ಟಿಫಿಕೆಟ್ ಸಿಕ್ಕಿದೆಯಂತೆ. ಅಂತೂ ವಿಲನ್ ಚಿತ್ರದ ಇಂಟರ್‌ವೆಲ್‌ನಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಯಾಗೋದು ಪಕ್ಕಾ. ಅದಾದ ಮೇಲೆ ನವೆಂಬರ್ ಮೊದಲ ವಾರದಲ್ಲಿಯೇ ಹಾಡು ಮತ್ತು ಟ್ರೈಲರ್ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ನಡೆಸಲಾರಂಭಿಸಿದೆ.
#
Leave a Reply
You must be logged in to post a comment.