ಗೀತಾ ಎಂದಾಕ್ಷಣ ಮೊದಲಿಗೆ ನಮ್ಮ ತಲೆಗೆ ಬರೋದು ಒಂದು ಕರಾಟೆ ಕಿಂಗ್ ಶಂಕರ್ ನಾಗ್ ಅಭಿನಯದ ಗೀತಾ ಸಿನಿಮಾ. ಮತ್ತೊಂದು ಶಿವಣ್ಣನ ಹೆಂಡತಿ. ಇದೀಗ ಅದೇ ಟೈಟಲ್ ಇಟ್ಟುಕೊಂಡು ಗೋಲ್ಡನ್ ಸ್ಟಾರ್ ಗಣೇಶ್ ಗೀತಾ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾವನ್ನು ವಿಜಯ್ ನಾಗೇಂದ್ರ ನಿರ್ದೇಶನ ಮಾಡುತ್ತಿದ್ದು ಈಗಾಗಲೇ ಹಲವಾರು ಪೋಸ್ಟರ್ ಗಳು ಈಗಾಗಲೇ ರಿಲೀಸ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಇದೀಗ ಚಿತ್ರತಂಡ ಮತ್ತಷ್ಟು ಪೋಸ್ಟರ್ ಗಳನ್ನು ರಿಲೀಸ್ ಮಾಡಿದೆ. ಚಿತ್ರದಲ್ಲಿ ಪಾರ್ವತಿ ಅರುಣ್, ಶಾನ್ವಿ ಶ್ರೀವಾಸ್ತವ್, ಪ್ರಯಾಗ ಮಾಲ್ಟಿನ್ ಸೇರಿದಂತೆ ಮೂವರು ನಾಯಕಿಯರಿದ್ದಾರೆ. ಮೇನ್ ಲೀಡ್ ರೋಲ್ನಲ್ಲಿ ಯಾರು ಕಾಣಿಸಿಕೊಳ್ಳಬಹುದೆಂಬ ಕುತೂಹಲ ಅಭಿಮಾನಿಗಳಲ್ಲಿದೆ. ಗೀತಾ ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಸದ್ಯದಲ್ಲೇ ರಿಲೀಸ್ ದಿನಾಂಕವೂ ಘೋಷಣೆಯಾಗಲಿದೆ.
ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್ , ಸುಧಾರಾಣಿ, ರಂಗಾಯಣ ರಘು, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಶಂಕರ್ ನಾಗ್ ಅವರ ಗೀತಾ ಸಿನಿಮಾದಲ್ಲಿ ಶಂಕರ್ ನಾಗ್ ಕ್ಲೀನ್ ಶೇವ್ ಆಗಿದ್ದರೆ, ಹೊಸ ಗೀತಾದಲ್ಲಿ ಗೋಲ್ಡನ್ ಸ್ಟಾರ್ ಪುಲ್ ಗಡ್ಡ ಬಿಟ್ಟು ಮಿಂಚುತ್ತಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಶಂಕರ್ ನಾಗ್ ಅವರ ಸಿನಿಮಾದ ಹೆಸರಿನಲ್ಲಿ ನಟಿಸುತ್ತಿರುವ ಎರಡನೇ ಸಿನಿಮಾವಾಗಿದ್ದು, ಈ ಮೊದಲು ಆಟೋರಾಜದಲ್ಲಿ ನಟಿಸಿದ್ದರು.
No Comment! Be the first one.