ಮಜಿಲಿ ಸಿನಿಮಾವು 28 ದಿನಗಳಲ್ಲಿ 68 ಕೋಟಿ ಆದಾಯವನ್ನು ಗಳಿಸಿದೆ. ಏಪ್ರಿಲ್ 5ರಂದು ಮಜಿಲಿ ರಿಲೀಸ್ ಆಗಿತ್ತು. ಚಿತ್ರದಲ್ಲಿ ನಾಗ ಚೈತನ್ಯ ಹಾಗೂ ಸಮಂತ ನಟಿಸಿದ್ದು, ಅಂದಾಜು 38.50 ಕೋಟಿ ಶೇರನ್ನು ಪಡೆದುಕೊಂಡಿದ್ದು ಸದ್ಯ ಖುಷಿಯಲ್ಲಿದ್ದಾರೆ. ಅವರ ಆದಾಯ 40 ಆಗಲು ಇನ್ನು ಕೇವಲ ಒಂದೂವರೆ ಕೋಟಿ ಅಗತ್ಯವಿದೆಯಷ್ಟೇ.
ಲೆಕ್ಕದ ಪ್ರಕಾರ ತೆಲುಗು ಬಳಕೆಯ ರಾಜ್ಯಗಳಾದ ನಿಜಾಮ್ ನಲ್ಲಿ 13.2 ಕೋಟಿ, ಸೀಡೆಡ್ ನಲ್ಲಿ 4.48 ಕೋಟಿ, ಉತ್ತರಾಂದ್ರದಲ್ಲಿ 4.25 ಕೋಟಿ, ಪೂರ್ವ ಗೋದಾವರಿಯಲ್ಲಿ 1.82 ಕೋಟಿ, ಪಶ್ಚಿಮ ಗೋದಾವರಿಯಲ್ಲಿ 1.38 ಕೋಟಿ, ಕೃಷ್ಣದಲ್ಲಿ 1.85 ಕೋಟಿ, ಗುಂಟೂರಿನಲ್ಲಿ 2.08 ಕೋಟಿ ಮತ್ತು ನೆಲ್ಲೂರಿನಲ್ಲಿ 0.92 ಕೋಟಿ ಆದಾಯ ಗಳಿಸಿದೆ.