
ಇದು ಗುರುದೇಶಪಾಂಡೆ ನಿರ್ಮಾಣದ ಎರಡನೇ ಚಿತ್ರ!
ನಿರ್ದೇಶಕ ಗುರುದೇಶಪಾಂಡೆ ತಮ್ಮದೇ ಬ್ಯಾನರ್ ಮೂಲಕ ನಿರ್ಮಾಪಕರಾಗಿರೋದು ಗೊತ್ತೇ ಇದೆ. ಇದೀಗ ಅವರ ಗುರುದೇಶಪಾಂಡೆ ಪ್ರೊಡಕ್ಷನ್ ಬ್ಯಾನರಿನ ಎರಡನೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಕೃಷ್ಣ ಅಜೇಯ್ ರಾವ್ ಖಾಕಿ ಕಂ ಕೃಷ್ಣಾವತಾರದಲ್ಲಿರೋ ಈ ಪೋಸ್ಟರ್ ಪ್ರೇಕ್ಷಕರನ್ನೆಲ್ಲ ಯೋಚನೆಗೆ ಹಚ್ಚುವಂತಿದೆ. ಈ ಪೋಸ್ಟರ್ ಅಜೇಯ್ ಹುಟ್ಟಿದ ದಿನದಂದೇ ಬಿಡುಗಡೆಗೊಂಡಿದೆ.
ಇದು ಅಜೇಯ್ ರಾವ್ ಅವರ ಇಪ್ಪತ್ತೇಳನೇ ಚಿತ್ರ. ಇದನ್ನು ರಾಜ್ ವರ್ಧನ್ ಶಂಕರ್ ನಿರ್ದೇಶನ ಮಾಡಲಿದ್ದಾರೆ. ಗುರುದೇಶಪಾಂಡೆಯವರೇ ಜಡೇಶ್ ಕುಮಾರ್ ಮತ್ತು ರಾಜ್ವರ್ಧನ್ ಜೊತೆಗೂಡಿ ಕಥೆ ಚಿತ್ರಕಥೆಯನ್ನೂ ರಚಿಸಿದ್ದಾರೆ. ಆರೂರು ಸುಧಾಕರ್ ಶೆಟ್ಟಿ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ. ಆದರೆ ಇನ್ನಷ್ಟೇ ಟೈಟಲ್ ನಿಗಧಿ ಆಗಬೇಕಿದೆ.
ಅಂತೂ ಕೃಷ್ಣ ಅಜೇಯ್ ರಾವ್ ಅವರಿಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ, ಕೃಷ್ಣ ಲೀಲೆಯನ್ನೂ ಹೊಂದಿರೋ ಭಿನ್ನ ಪಾತ್ರವ್ನ್ನ ನಿರ್ವಹಿಸುತ್ತಿರೋದಂತೂ ಸತ್ಯ. ಇದೀಗ ತಾರಾಗಣ ಮತ್ತು ಉಳಿಕೆ ತಾಂತ್ರಿಕ ವರ್ಗದ ಆಯ್ಕೆ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲಿಯೇ ಟೈಟಲ್ ಲಾಂಚ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಲು ಗುರುದೇಶಪಾಂಡೆ ಯೋಜನೆ ಹಾಕಿಕೊಂಡಿದ್ದಾರೆ.
No Comment! Be the first one.