ಮಣಿರತ್ನಂರ ಗೀತಾಂಜಲಿ 1989ರಲ್ಲಿ ತೆರೆಗೆ ಬಂದ ಚಿತ್ರ. ಮೇರು ನಿರ್ದೇಶಕ ಮಣಿರತ್ನಂ ಆ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಅದ್ಭುತವಾಗಿ ಮೂಡಿ ಬಂದಿದ್ದ ಆ ಚಿತ್ರ ಇವತ್ತಿಗೂ ಕ್ಲಾಸಿಕ್ ಸಿನಿಮಾಗಳ ಲಿಸ್ಟಿನಲ್ಲಿ ಅಜರಾಮರವಾಗಿದೆ.  ಐ ಲವ್ ಯೂ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡುವಾಗ ಉಪೇಂದ್ರ ಒಂದು ಮಾತು ಹೇಳಿದ್ದರು- ‘ಚಂದ್ರು ನಿರ್ದೇಶಿಸಿರುವ ಐ ಲವ್ ಯೂ ಸಿನಿಮಾ ನನಗೆ ಗೀತಾಂಜಲಿ ಸಿನಿಮಾ ನೆನಪಿಸುತ್ತಿದೆ. ಅಷ್ಟೇ ಗಟ್ಟಿಯಾದ ಸಿನಿಮಾ ಇದು..’ ಎಂದಿದ್ದರು.

‘ಚಂದ್ರು ಸಿನಿಮಾದಿಂದ ಸಿನಿಮಾಗೆ ಸಾಕಷ್ಟು ಬದಲಾಗಿದ್ದಾರೆ. ಮಾಗಿದ್ದಾರೆ. ಬ್ರಹ್ಮ ಚಿತ್ರದಲ್ಲಿ ನಾನು ನೋಡಿದ ಚಂದ್ರುವಿಗೂ ಇವತ್ತಿನ ಐ ಲವ್ ಯೂ ಸಿನಿಮಾದ ಚಂದ್ರುವಿಗೂ ಸಾಕಷ್ಟು ಹೆಚ್ಚುವರಿಗಳಿವೆ. ತಾಂತ್ರಿಕವಾಗಲಿ, ಸಿನಿಮಾದ ಕಂಟೆಂಟ್ ರೂಪಿಸುವಲ್ಲಾಗಲಿ, ನಿರೂಪಣಾ ವಿಧಾನದಲ್ಲಾಗಲಿ ಅವರದ್ದೇ ಆದ ಮಾರ್ಗವನ್ನ ರೂಪಿಸಿಕೊಂಡಿದ್ದಾರೆ. ಹೀಗಾಗಿ ಐ ಲವ್ ಯೂ ಒಂದೊಳ್ಳೇ ಸಿನಿಮಾವಾಗಿ ದಕ್ಕಬಹುದು ಎಂಬ ನಿರೀಕ್ಷೆ ನನ್ನದು’ ಎಂದಿದ್ದರು ಉಪ್ಪಿ.

ಅದಾಗಿ ಒಂದಷ್ಟು ತಿಂಗಳುಗಳ ನಂತರ ಬಿಡುಗಡೆಗೊಂಡ ಐ ಲವ್ ಯೂ ಟ್ರೇಲರ್ ಈ ಇಬ್ಬರ ಅಭಿಮಾನಿಗಳನ್ನೂ ಹುಚ್ಚೆಬ್ಬಿಸಿದೆ. ಯಾಕೆಂದರೆ ಇಲ್ಲಿ ಆರ್ ಚಂದ್ರುರ ನವಿರುತನವೂ ಕಾಣಿಸುತ್ತಿದೆ. ಉಪೇಂದ್ರರ ಚಿತ್ರಗಳಲ್ಲಿ ಕಾಣಸಿಗುತ್ತಿದ್ದ ಕಿಕ್ ಕೂಡಾ ವಿಜೃಂಭಿಸಿದೆ. ಆದ್ದರಿಂದಲೇ ಐ ಲವ್ ಯೂ ಈ ವರ್ಷದ ಹಿಟ್ ಸಿನಿಮಾಗಳಲ್ಲೊಂದಾಗಿ ದಾಖಲೆ ಬರೆಯಲಿದೆ ಎಂಬ ಅನಿಸಿಕೆ ಗಾಂಧಿನಗರದ ಪಂಡಿತರದ್ದು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಡವ್ ರಾಣಿ ಆಗ್ಬಿಟ್ಳು ಕಾನ್ಸ್ ಸ್ಟೇಬಲ್ ಸರೋಜ!

Previous article

ಪದ್ಮಾವತಿಗೆ ಯು ಪ್ರಮಾಣಪತ್ರ!

Next article

You may also like

Comments

Leave a reply

Your email address will not be published. Required fields are marked *