ಭಾರತದ ಬಹಳಷ್ಟು ಸಿನಿಮಾಗಳನ್ನು ವಿದೇಶಿ ಲೊಕೇಶನ್ನುಗಳಲ್ಲಿ ಶೂಟಿಂಗ್ ಮಾಡಿಕೊಂಡು ಬರುವ ಹವ್ಯಾಸ ಈಗೀಗ ಹೆಚ್ಚಾಗುತ್ತಿದೆ. ಆದರೆ ಹಾಲಿವುಡ್ ನ ಸಿನಿಮಾವೊಂದನ್ನು ಭಾರತದ ನೆಲದಲ್ಲಿ ಚಿತ್ರೀಕರಣ ಮಾಡಲಿದ್ದಾರೆಂಬ ಅಚ್ಚರಿ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಹೌದು ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೊಲನ್ ತಮ್ಮ ಟೆನೆಟ್ ಚಿತ್ರದ ಕೆಲ ಸೀನುಗಳನ್ನು ಭಾರತದಲ್ಲಿ ಚಿತ್ರೀಕರಿಸಲು ಡಿಸೈಡ್ ಮಾಡಿದ್ದಾರೆ ಎನ್ನಲಾಗಿದೆ.
ಈ ಚಿತ್ರದಲ್ಲಿ ಬಾಲಿವುಡ್ ತಾರೆ ಡಿಂಪಲ್ ಕಪಾಡಿಯಾ ನಟಿಸುತ್ತಿದ್ದಾರೆ. ಈ ಹಿಂದೆ ಬಾಂಡ್ ಸರಣಿ ಸಿನಿಮಾಗಳಲ್ಲಿ ಒಂದು ಸಿನಿಮಾದ ಕೆಲವು ಭಾಗಗಳನ್ನು ಭಾರತದಲ್ಲೂ ಚಿತ್ರೀಕರಿಸಲಾಗಿತ್ತು. ಉಳಿದಂತೆ ಜಾಕಿ ಚಾನ್ ಅಭಿನಯದ ಸಿನಿಮಾ ಹಾಗೂ ‘ಐರನ್ ಮ್ಯಾನ್’ ಖ್ಯಾತಿಯ ಟೋನಿ ಸ್ಟಾರ್ಕ್ ‘ಸ್ಪೈಡರ್ ಮ್ಯಾನ್ ಹೋಮ್ ಕಮಿಂಗ್’ ಸಿನಿಮಾದ ಒಂದು ದೃಶ್ಯವನ್ನು ಸಹ ಭಾರತದಲ್ಲೇ ಚಿತ್ರೀಕರಿಸಲಾಗಿತ್ತು. ಪಟ್ಟಿಗೆ ಮತ್ತೊಂದು ಹಾಲಿವುಡ್ ಸಿನಿಮಾ ಸೇರ್ಪಡೆಯಾಗಲಿದೆ. ಎಲ್ಲ ಅಂದುಕೊಂಡಂತಾದರೆ 2020ರ ವೇಳೆಗೆ ಈ ಸಿನಿಮಾ ರಿಲೀಸ್ ಆಗಲಿದೆ.
No Comment! Be the first one.