ತಮಿಳುಕ್ಕು ಎನ್ ಒಂಡರಾಯ್ ಅಜುತವನ್ ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ನಟಿಸಿದ್ದ ನಟಿ ಐಶ್ವರ್ಯ ದತ್ತ, ನಕುಲ್ ಮತ್ತು ದಿನೇಶ್ ರವರ ಜತೆಯಾಗಿದ್ದರು. ನಂತರದ ಬಹುತೇಕ ಸಿನಿಮಾಗಳಲ್ಲಿ ನಟಿಸಿದರೂ ಸಹ ಅಷ್ಟೇನು ಯಶಸ್ಸನ್ನು ಕಾಣಲಿಲ್ಲ. ಕಮಲ್ ಹಾಸನ್ ರವರು ನಡೆಸಿಕೊಡುತ್ತಿದ್ದ ಬಿಗ್ ಬಾಸ್ ಸೀಜನ್ 2 ನಲ್ಲಿ ಸ್ಪರ್ಧಿಸಿದ ನಂತರದಲ್ಲಿ ಐಶ್ವರ್ಯಾ ಅವರಿಗೆ ಲಕ್ಕು ಖುಲಾಯಿಸಿದ್ದು. ಆನಂತರದಲ್ಲಿ ಅವರಿಟ್ಟ ಹೆಜ್ಜೆಗಳೆಲ್ಲವೂ ಚಿನ್ನದ ಹಾಸಿಗೆಯಾಗಿಯೇ ನಿರ್ಮಾಣವಾಯಿತು.
M in ❤️🥂
— Aishwarya dutta (@Aishwaryadutta6) May 5, 2019
ಇತ್ತೀಚಿಗೆ ಐಶ್ವರ್ಯ ತನ್ನ ಟ್ವಿಟರ್ ಖಾತೆಯಲ್ಲಿ ಲವ್ವಾಗಿರುವುದಾಗಿ ಫೋಸ್ಟ್ ಮಾಡಿದ್ದಾರೆ. ಅಲ್ಲದೇ ಆಕೆಯ ಟ್ವಿಟರ್ ಖಾತೆಯ ಹಿಂಬಾಲಕರು ಯಾರು ಲವ್ವರ್ ಎಂಬುದಾಗಿಯೂ ಟೈಮ್ ಲೈನ್ ನಲ್ಲಿ ಪ್ರಶ್ನೆಯ ಸುರಿಮಳೆಯನ್ನೇ ಗೈದಿದ್ದಾರೆ. ಆದರೆ ತನ್ನ ಪ್ರಿಯತಮನ ಹೆಸರನ್ನು ಸದ್ಯಕ್ಕೆ ರಿವೀಲ್ ಮಾಡದ ಐಶ್ವರ್ಯ ಸೀಕ್ರೆಟ್ ಕಾಯ್ದುಕೊಂಡಿದ್ದಾರೆ.