ಈ ಹಿಂದೆ ಮಕ್ಕಲ್ ಸೆಲ್ವನ್ ವಿಜಯ್ ಸೇತುಪತಿಯವರು ನಪುಂಸಕನ ಪಾತ್ರಧಾರಿಯಾಗಿ ಶಿಲ್ಪಾ ಎನ್ನುವ ಪಾತ್ರದಲ್ಲಿ ಸೂಪರ್ ಡಿಲಕ್ಸ್ ಸಿನಿಮಾದಲ್ಲಿ ಅಭಿನಯಿಸಿದ್ದರು. ಈ ಸಿನಿಮಾವನ್ನು ತ್ಯಾಗರಾಜನ್ ಕುಮಾರರಾಜ ನಿರ್ದೇಶನವನ್ನು ಮಾಡಿದ್ದರು. ಈ ಚಿತ್ರವು ಬಹು ತಾರಾಗಣದ ಚಿತ್ರವಾಗಿದ್ದು, ಸಮತಾ, ಫಹದಾ ಫಾಸಿಲ್, ರಮ್ಯ ಕೃಷ್ಣನ್, ಮೈಸಿಕ್ ಇತರರು ಅಭಿನಯಿಸಿದ್ದರು. ಅಭೂತಪೂರ್ವ ಯಶಸ್ಸನ್ನು ಗಳಿಸಿದ್ದಾರೆ. ಸೇತುಪತಿ ಅಭಿನಯದ ಮುಂದಿನ ಸಿನಿಮಾ ಅಂದಾಜು ಇದೇ ತಿಂಗಳು ರಿಲೀಸ್ ಆಗಬೇಕಿತ್ತು. ಈ ಸಿನಿಮಾವನ್ನು ಪಾನಿಯರಾಮ್ ಪಂಡಿಮುನಿಯನ್ ರವರು ನಿರ್ದೇಶನ ಮಾಡಿದ್ದು, ವನ್ಸಾನ್ ಮೂವಿ ಮೇಕರ್ಸ್ ನಲ್ಲಿ ಸಿನಿಮಾ ನಿರ್ಮಾಣವೂ ಆಗಿತ್ತು.
ಸಿಂದೂಬಾದ್ ಸಿನಿಮಾ ರಿಲೀಸ್ ಮುಂದಕ್ಕೆ!
ಚಿತ್ರಕ್ಕೆ ಸಿಂದೂಭಾದ್ ಎಂದು ಹೆಸರಿಡಲಾಗಿದ್ದು, ಚಿತ್ರವೂ ಮೇ 17ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಅದೇ ದಿನವೇ ಸಾಕಷ್ಟು ಸಿನಿಮಾಗಳು ರಿಲೀಸ್ ಆಗಲಿರುವುದರಿಂದ ಈ ಸಿನಿಮಾವನ್ನು ಒಂದು ತಿಂಗಳು ಮುಂದೂಡಿದ್ದು, ಸಿಂದೂಬಾದ್ ಜೂನ್ ತಿಂಗಳಿನಲ್ಲಿ ರಿಲೀಸ್ ಆಗಲಿದೆ. ಮೇ 17ಕ್ಕೆ ಶಿವ ಕಾರ್ತಿಕೇಯನ್ ಮತ್ತು ನಯನತಾರಾ, ರಾಜೇಶ್ ಅಭಿನಯದ ಮಿಸ್ಟರ್ ಲೋಕಲ್, ಎಸ್.ಜೆ. ಸೂರ್ಯ ಅಭಿನಯದ ಮಾನ್ ಸ್ಟರ್ ಮತ್ತು ಫ್ಯಾಂಟಸಿ ಅಡ್ವೆಂಚರ್ ಹಾಗೂ ತುಂಬಾ ಅಭಿನಯದ ದರ್ಶನ್ ಕೂಡ ಅದೇ ದಿನ ರಿಲೀಸ್ ಆಗುವ ಸಾಧ್ಯತೆ ಇದೆ. ಸದ್ಯದಲ್ಲೇ ಸಿಂದೂಬಾದ್ ರಿಲೀಸ್ ದಿನಾಂಕವನ್ನು ಅಧಿಕೃತಗೊಳಿಸಲಾಗುವುದಂತೆ.