ಪ್ರೇಮ ಕವಿ ಎಂದೇ ಖ್ಯಾತರಾಗಿರುವ ಕನ್ನಡ ಚಿತ್ರರಂಗದ ಗೀತ ಸಾಹಿತಿ ಕೆ.ಕಲ್ಯಾಣ್ ಚಿತ್ರರಂಗಕ್ಕೆ ಬಂದು 25 ವರ್ಷಗಳನ್ನು ಪೂರೈಸಿದ್ದಾರೆ. 1975ಜನವರಿ 01 ರಂದು ಬೆಂಗಳೂರಿನಲ್ಲಿ ಜನಿಸಿದ ಕಲ್ಯಾಣ್ ತಮ್ಮ 16ನೇ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಬಂದರು. ಇದುವರೆಗೆ ಸುಮಾರು 2400 ಹಾಡುಗಳನ್ನು ಬರೆದಿರುವ ಕಲ್ಯಾಣ್, ೫೦ ಚಿತ್ರಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಅವರು ಬರೆದಿರುವ ಅಮೃತವರ್ಷಿಣಿ ಹಾಗೂ ಚಂದ್ರಮುಖಿ ಪ್ರಾಣಸಖಿ ಚಿತ್ರಗಳ ಹಾಡುಗಳಂತೂ ಬಹು ಜನಪ್ರಿಯ. ಹುಚ್ಚ, ನಮ್ಮೂರ ಮಂದಾರ ಹೂವೆ ಅವರ ಇತರ ಜನಪ್ರಿಯ ಗೀತೆಗಳ ಚಿತ್ರಗಳು. ಮಾಧುರ್ಯ ಪ್ರಧಾನ ಗೀತೆಗಳನ್ನು ನೀಡುವುದರಲ್ಲಿ ಸದಾ ಸಿದ್ಧಹಸ್ತರಾಗಿರುವ ಇವರನ್ನು ಮಧುರ ಕವಿ ಎನ್ನುತ್ತಾರೆ. ಇವರ ಹಾಡುಗಳಲ್ಲಿ ಮನಸ್ಸು ಪದಬಳಕೆ ಸಾಮಾನ್ಯವಾಗಿರುವುದರಿಂದ ಮನಸ್ಸಿನ ಕವಿ ಎಂದೂ ಕರೆಯುವವರಿದ್ದಾರೆ.

ಕನ್ನಡ ಚಲನಚಿತ್ರ ಗೀತೆಗಳ ಮೂಲಕ ಕೇಳುಗರ ಹೃದಯ ವೀಣೆಯನ್ನು ಮೀಟಿದ ಗೀತಸಾಹಿತಿ ಕೆ ಕಲ್ಯಾಣ್. ಅವರ ಸ್ವಚ್ಛ, ಸುಂದರ, ಸುಮಧುರ ಗೀತೆಗಳು ಕಲಾರಸಿಕರ ಮನತಣಿಸಿವೆ, ತಣಿಸುತ್ತಿವೆ. “ಝಿಂಬೋಲೆ ಝಿಂಬೋಲೆ ಓಲೆ ಓಲೆ ಓಲೆ…” ಎಂದು ಸಾಹಿತ್ಯದಲ್ಲೇ ಸಂಗೀತ ಹೊಮ್ಮಿಸಿದ ಖ್ಯಾತಿ ಕಲ್ಯಾಣ್ ಅವರದು. ‘ಅಮೃತ ವರ್ಷಿಣಿ’ ಚಿತ್ರದ “ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ..” ಎಂಬ ಸಾಹಿತ್ಯದ ಮೂಲಕ ಅಮೃತ ಹನಿಸಿದ ಪ್ರೇಮಕವಿ ಕೆ ಕಲ್ಯಾಣ್. ನೆನಪುಗಳ ಮಾತು ಮಧುರಾ (ಚಂದ್ರಮುಖಿ ಪ್ರಾಣಸಖಿ), ಸವಿ ಸವಿ ನೆನಪು ಸಾವಿರ ನೆನಪು (ಮೈ ಆಟೋಗ್ರಾಫ್), ಆಹಾ ಎಂಥಾ ಆ ಕ್ಷಣ ನೆನೆದರೆ ತಲ್ಲಣ (ಆಕಾಶ್), ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ (ಆ ದಿನಗಳು)… ಹೀಗೆ ಸೂಪರ್ ಹಿಟ್ ಗೀತೆಗಳನ್ನು ಕೊಟ್ಟಂತಹ ಸಾಹಿತಿ ಕಲ್ಯಾಣ್. ಸರಿಸುಮಾರು ನೂರಕ್ಕೂ ಹೆಚ್ಚು ಸಂಗೀತ ನಿರ್ದೇಶಕರ ಸಿನಿಮಾಗಳಿಗೆ ಕೆಲಸ ಮಾಡಿದ ಕೀರ್ತಿ ಕಲ್ಯಾಣ್ ಅವರದ್ದು.

ಸೂಕ್ಷ್ಮಸಂವೇದನೆಗೆ ಹೆಸರಾಗಿರುವ ಕಲ್ಯಾಣ್ ನಿರ್ದೇಶಕನಾಗಿಯೂ ಹೊರ ಹೊಮ್ಮುವ ತಯಾರಿಯಲ್ಲಿಯೂ ಇದ್ದಾರೆ. ಈ ಹೊಸಾ ಅಲೆಗೆ ಹೊಂದಿಕೊಂಡೇ ಮೂಲ ಸಂವೇದನೆಗಳನ್ನಿಟ್ಟುಕೊಂಡು ಸಕ್ರಿಯರಾಗಿರುವ ಕಲ್ಯಾಣ್ ಅವರ ಕಡೆಯಿಂದ ಇನ್ನಷ್ಟು ಮಾಧುರ್ಯಪೂರಿತ ಹಾಡುಗಳನ್ನು ಕೇಳುವ ಸೌಭಾಗ್ಯ ಕನ್ನಡಿಗರಿಗೆ ಸಿಗಲೆಂದು ಹಾರೈಸೋಣ.

CG ARUN

ನಿರ್ದೇಶಕ ಕೃಷ್ಣರ ಶರ್ಟು ಬಿಚ್ಚಿಸಿದ್ರಾ ಸುದೀಪ್?

Previous article

ತಮಿಳಿನ ಕುಟ್ಟಿ ಪುಲಿ ಕನ್ನಡದ ಸಿಂಗ!

Next article

You may also like

Comments

Leave a reply

Your email address will not be published. Required fields are marked *