ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಲ್ಲರಿಗಿಂತ ಹೆಚ್ಚು ಶಾಕ್ಗೊಳಗಾದವರೆಂದರೆ ಮಾಧ್ಯಮದವರು. ಅವರಿಗೆ ಆಹ್ವಾನವಿರಲಿಲ್ಲ ಅಥವಾ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬುದು ಒಂದು ಕಾರಣವಾದರೆ, ಇನ್ನೊಂದು ಕಾರಣ ಆ ಕಾರ್ಯಕ್ರಮಕ್ಕೆ ಬಂದ ಕೆಲವು ನಟಿಯರು ಮತ್ತು ಅವರು ತೊಟ್ಟ ಉಡುಗೆಗೊಳು.
ಕನ್ನಡದ ಹಲವು ನಟಿಯರು ತಮ್ಮ ಚಿತ್ರದ ಪತ್ರಿಕಾಗೋಷ್ಠಿಗಳಿಗೆ ಬರುವುದು, ಮಾಧ್ಯಮದವರನ್ನು ಭೇಟಿ ಮಾಡುವುದು, ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವುದು, ಟಿವಿ ಕ್ಯಾಮೆರಾಗಳ ಮುಂದೆ ಫೋಸು ಕೊಡುವುದು ಎಲ್ಲವೂ ಸಹಜ. ಆದರೆ, ಪತ್ರಿಕಾಗೋಷ್ಠಿಗಳಿಗೆ ಅವರು ಬರವ ರೀತಿ ಮತ್ತು ಇಂತಹ ಕಾರ್ಯಕ್ರಮಗಳಿಗೆ ಬರುವ ರೀತಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಶನಿವಾರ ಮತ್ತೊಮ್ಮೆ ನಿರೂಪಿತವಾಯಿತು.
ಪತ್ರಿಕಾಗೋಷ್ಠಿಗಳಿಗೆ ಬರುವ ಸಂದರ್ಭದಲ್ಲಿ ಗೌರಮ್ಮನಂತೆ ಕಾಣುವ ನಟಿಯರು, ಈ ಕಾರ್ಯಕ್ರಮಕ್ಕೆ ಎದೆ ಕಾಣುವಂತೆ ಬಟ್ಟೆ ತೊಟ್ಟು ಬಂದಿದ್ದು ನೋಡಿ ಹಲವರು ಶಾಕ್ ಆದರು. ಕೆಲವರು ಪ್ರೆಸ್ ಮೀಟುಗಳಿಗೆ ಬರುವುದನ್ನು ನೋಡಬೇಕು. ಕೈಗೆ ಸಿಕ್ಕ ಯಾವುದೋ ಬಟ್ಟೆಯನ್ನು ತೊಟ್ಟು, ಮುಖಕ್ಕೆ ನೀರು ಸಹ ಹಾಕುತ್ತಾರೋ ಇಲ್ಲವೋ ಎಂಬ ಸಂಶಯ ಬರುವಂತೆ ಕೆಟ್ಟದಾಗಿ ಬಂದು ವೇದಿಕೆ ಮೇಲೆ ಕೂತಿರುತ್ತಾರೆ. ಮಾತಾಡಿ ಎಂದರೆ, ಅದೇ ಚರ್ವಿತ ಚರ್ವಣ ಎಂಬಂತಹ ಮಾತುಗಳನ್ನಾಡಿ, ನೆರೆದಿರುವವರಿಗೆ ಬೋರ್ ಹೊಡೆಸಿ ಮಾಯವಾಗುತ್ತಾರೆ. ಇವರಿಗೆ ಬೇರೇನೂ ಮಾತನಾಡುವುದಕ್ಕೆ ಬರುವುದಿಲ್ಲವೇನೋ ಎಂಬ ಸಂಶಯ ಬರುವಂತೆ ಆಡುತ್ತಾರೆ. ಅಂತಹವರು ಈ ಸಮಾರಂಭದಲ್ಲಿ ತುಂಡುಡುಗೆ ತೊಟ್ಟು, ಚೆಲ್ಲುಚೆಲ್ಲಾಗಿ ಆಡುತ್ತಿದ್ದುದು ನೋಡಿದರೆ, ಏನೇ ಕನ್ನಡತಿ ನೀ ಯಾಕೆ ಹಿಂಗಾಡ್ತಿ? ಎಂದು ಮಾಧ್ಯಮದವರು ಕೇಳುವಂತಿತ್ತು.
ನಾಯಕಿ ಕಂ ಗಾಯಕಿ ಚೈತ್ರಾ ಆಚಾರ್ ಎನ್ನುವ ಹೆಣ್ಣುಮಗಳು ತೆರೆಮೇಲೆ ಕಾಣಿಸಿಕೊಳ್ಳುವ ಪರಿಯೇ ಬೇರೆ. ತನ್ನ ಮನೋಜ್ಞ ಅಭಿನಯದಿಂದಲೇ ಎಲ್ಲರನ್ನೂ ಸೆಳೆದಿರುವ ಈಕೆ ಇದ್ಯಾವುದೋ ತುಕಾಲಿ ಸಮಾರಂಭದಲ್ಲಿ ಭಾಗವಹಿಸಲು ಈ ಥರದ ಬಟ್ಟೆ ಹಾಕ್ಕೊಂಡು ಬರಬೇಕಿತ್ತಾ ಎನ್ನುವ ಪ್ರಶ್ನೆ ಮೂಡಿದೆ. ಇನ್ನು, ಆಶಿಕಾ ರಂಗನಾಥ್, ಅಮೃತಾ ಅಯ್ಯಂಗಾರ್, ಭೂಮಿ ಶೆಟ್ಟಿ, ಪ್ರಜ್ಞಾ, ಆರೋಹಿ ನಾರಾಯಣ್, ಕಾರುಣ್ಯ ರಾಮ್, ಸಂಹಿತಾ ವಿನ್ಯಾ ಸೇರಿದಂತೆ ಹಲವು ನಟಿಮಣಿಯರು ರೆಡ್ ಕಾರ್ಪೆಟ್ ಮೇಲೆ ನಡೆದಿದ್ದೇನು? ಮಾಧ್ಯಮದವರನ್ನು ನೋಡಿ ನುಲಿದಿದ್ದೇನು? ಬೇರೆಯವರ ಗಮನ ಸೆಳೆಯುವುದಕ್ಕೆ ಪ್ರಯತ್ನಿಸಿದ್ದೇನು? ಹೀಗೆಲ್ಲ ಮಾಡಿದರೆ ಅವರಿಗೆ ಬೇರೆ ಭಾಷೆಗಳಲ್ಲಿ ಅವಕಾಶ ಸಿಗುತ್ತದಾ? ಗೊತ್ತಿಲ್ಲ. ಆದರೆ, ತಮ್ಮ ಚಿತ್ರದ ಬಗ್ಗೆ, ಪಾತ್ರದ ಬಗ್ಗೆ, ಚಿತ್ರದ ಬಗ್ಗೆ ನಾಲ್ಕು ಮಾತನ್ನು ಸರಿಯಾಗಿ ಆಡಲಿಕ್ಕಾಗದವರನ್ನು ಬೇರೆ ಚಿತ್ರರಂಗದವರು ಗುರುತಿಸುತ್ತಾರಾ? ಖಂಡಿತಾ ಇಲ್ಲ. ಆದರೂ ಈ ಮಂಗಾಟಗಳು ಯಾತಕ್ಕಾಗಿ? ಅವರೇ ಉತ್ತರಿಸಬೇಕು.
No Comment! Be the first one.