ಡಾ. ರಾಜ್ ಕುಮಾರ್ ಕುಟುಂಬದ ವ್ಯಾವಹಾರಿಕ ಪಾಲುದಾರ, ಫೈನಾನ್ಷಿಯರ್, ಹೊಟೇಲ್ ಉದ್ಯಮಿ, ನಿರ್ಮಾಪಕ ಹೀಗೆ ಸಾಕಷ್ಟು ವ್ಯಾಪಾರ, ವಹಿವಾಟುಗಳನ್ನು ನಡೆಸುತ್ತಿದ್ದ ವಿಕೆ ಮೋಹನ್ ಅಲಿಯಾಸ್ ಕಪಾಲಿ ಮೋಹನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಕೇಳಿಬರುತ್ತಿದೆ. ಬೆಂಗಳೂರು ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದ ಹೊಟೆಲ್ ಒಂದರಲ್ಲಿ ಘಟನೆ. ಹೊಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಕಪಾಲಿ ಮೋಹನ್. ಸ್ಥಳಕ್ಕೆ ಗಂಗಮ್ಮನಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಾವಿಗೆ ಕಾರಣವೇನು? ಅಸಲಿಗೆ ಕಪಾಲಿ ಮೋಹನ್ ಗೆ ಸಾಯುವಂಥ ಸಮಸ್ಯೆಯಾದರೂ ಏನಿತ್ತು? ಈ ಕುರಿತು ಹೆಚ್ಚಿನ ಮಾಹಿತಿ ಕೆಲವೇ ನಿಮಿಷಗಳಲ್ಲಿ ನಿಮ್ಮ cinibuzz ನಲ್ಲಿ…