ತಮಿಳಿನ ಮಾಜಿ ಸ್ಟಾರ್ ಹಾಲಿ ರಾಜಕಾರಣಿ ವಿಜಯಕಾಂತ್. ಸಾಕಷ್ಟು ವರ್ಷಗಳ ಕಾಲ ಹೀರೋ ಆಗಿ ಮೆರೆದು ಸದ್ಯ ಚಿತ್ರರಂಗದಿಂದ ದೂರವಿದ್ದಾರೆ. ದೇಸೀಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಪಕ್ಷದ ಮುಖ್ಯಸ್ಥರಾಗಿರುವ ವಿಜಯಕಾಂತ್ ತಮ್ಮ ಪಕ್ಷದ ಕಾರ್ಯಕರ್ತನ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಲು ಪ್ಲಾನು ಮಾಡಿದ್ದರು. ಸದ್ಯ ದೇಶದೆಲ್ಲೆಡೆ ಕರೋನಾ ವಕ್ಕರಿಸಿಕೊಂಡಿದೆಯಲ್ಲಾ? ಜನತಾ ಕರ್ಫ್ಯೂ ಜಾರಿಯಲ್ಲಿರೋದರಿಂದ ಗಂಡು-ಹೆಣ್ಣನ್ನು ತಮ್ಮ ಮನೆಗೇ ಕರೆಸಿಕೊಂಡು ಮದುವೆ ಮಾಡಿಸಿದ್ದಾರೆ. ನವಜೋಡಿ ಕೂಡಾ ಮಾಸ್ಕ್ ಧರಿಸಿಕೊಂಡೇ ಹೊಸ ಬಾಳಿಗೆ ಎಂಟ್ರಿ ಕೊಟ್ಟಿದ್ದಾರೆ!