- ರಮ್ಯ
ಧನುಷ್ ಅಭಿನಯದ ಹಳ್ಳಿ ಸೊಗಡಿನ ಕರ್ಣನ್ ಸಿನಿಮಾ ತೆಲುಗಿಗೆ ರಿಮೇಕ್ ಆಗಲು ಸಜ್ಜಾಗಿದೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಾರಾಸಗಟಾಗಿ ಮೆಚ್ಚುಗೆ ಪಡೆದ ಈ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ ಮಾಡಲು ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ರೆಡಿಯಾಗಿದ್ದಾರೆ. ಈಗಾಗಲೇ ಚಿತ್ರದ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿರುವ ನಿರ್ಮಾಪಕ ಸುರೇಶ್ ತಮ್ಮ ಮಗನನ್ನೇ ಧನುಷ್ ಪಾತ್ರದಲ್ಲಿ ನೋಡಲು ಬಯಸಿದ್ದಾರೆ.
ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಮಗ ಮತ್ತು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಈಗಾಗಲೇ ರಾಕ್ಷಸುಡು ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಮಿಂಚಿದ್ದರು. ಈ ಚಿತ್ರವು ತಮಿಳು ಚಿತ್ರವೊಂದರ ರಿಮೇಕ್ ಆಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಸೂಪರ್ ಕಲೆಕ್ಷನ್ ಕೂಡ ಮಾಡಿತ್ತು. ಈಗ ಮತ್ತೊಂದು ತಮಿಳು ಚಿತ್ರವನ್ನು ರಿಮೇಕ್ ಮಾಡಲು ತಂದೆ-ಮಗ ರೆಡಿಯಾಗಿದ್ದಾರೆ.
ವಿ ಕ್ರಿಯೇಷನ್ಸ್ ಅಡಿಯಲ್ಲಿ ಕಲೈಪುಲಿ ಎಸ್ ತನು ನಿರ್ಮಿಸಿದ ಕರ್ಣನ್ ಚಿತ್ರದಲ್ಲಿ ಧನುಷ್ ಪ್ರಭಾವಶಾಲಿ ಅಭಿನಯ ನೀಡಿದ್ದಾರೆ. ರಾಜಿಶಾ ವಿಜಯನ್ ನಾಯಕಿಯಾಗಿ, ನಾಟ್ಟಿ ಎದುರಾಳಿಯಾಗಿ ಕಾಣಿಸಿಕೊಂಡಿದ್ದಾರೆ. ಯೋಗಿ ಬಾಬು, ಲಾಲ್, ಲಕ್ಷ್ಮಿ ಪ್ರಿಯಾ ಚಂದ್ರಮೌಳಿ, ಗೌರಿ ಕಿಶನ್ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ವಾರದಲ್ಲಿ ಕರ್ಣನ್ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
No Comment! Be the first one.