ಕರ್ಷಣಂ ಕೌತುಕಕ್ಕೆ ಕ್ಷಣಗಣನೆ ಶುರು!


ಧನಂಜಯ್ ಅತ್ರೆ ಅವರ ಮೊದಲ ಸಿನಿಮಾ ಕನಸು ಕರ್ಷಣಂ ಚಿತ್ರ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಟ್ರೈಲರ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆವೇಗವನ್ನೇ ಹುಟ್ಟು ಹಾಕಿದೆ. ಇಡೀ ಚಿತ್ರದ ಥ್ರಿಲ್ಲರ್ ಅಂಶ, ತಾಜಾತನಗಳೆನ್ನೆಲ್ಲ ನಿಮಿಷಗಳ ಟ್ರೈಲರ್ ಯಶಸ್ವಿಯಾಗಿಯೇ ಅನಾವರಣಗೊಳಿಸಿದೆ. ಇದೇ ಬಿಸಿಯಲ್ಲಿ ಈ ಚಿತ್ರ ತೆರೆಗಾಣುವ ಸಮಯವೂ ಸಮೀಪಿಸುತ್ತಿದೆ!

ಗೌರಿ ಅತ್ರೆ ಈ ಚಿತ್ರಕ್ಕೆ ವಿಶಿಷ್ಟವಾದೊಂದು ಕಥೆ ಬರೆದಿದ್ದಾರೆ. ಈ ಹಿಂದೆ ಧಾರಾವಾಹಿ ಪ್ರೇಕ್ಷಕರನ್ನು ಮೋಡಿಗೀಡು ಮಾಡಿದ್ದ ಧನಂಜಯ ಅತ್ರೆ ಈ ಚಿತ್ರದ ಮೂಲಕವೇ ನಾಯಕನಾಗಿ, ನಿರ್ಮಾಪಕನಾಗಿಯೂ ಪಾದಾರ್ಪಣೆ ಮಾಡಿದ್ದಾರೆ. ಖ್ಯಾತ ನಿರ್ಮಾಪಕ ರಾಕ್‌ಲೈನ್ ಅವರ ಮಾರ್ಗದರ್ಶನದಲ್ಲಿಯೇ ಸಿನಿಮಾ ಹಾದಿಯಗುಂಟ ಸಾಗಿ ಬಂದಿರೋ ಧನಂಜಯ್ ಮೊದಲ ಪ್ರಯತ್ನ ಕಂಡು ಖುದ್ದು ವೆಂಕಟೇಶ್ ಅವರೇ ಮೆಚ್ಚಿಕೊಂಡಿದ್ದಾರೆ.

ಟೈಟಲ್ಲಿಗೆ ತಕ್ಕುದಾದ ಫೋರ್ಸ್ ಹೊಂದಿರೋ ಕಥೆಯನ್ನೊಳಗೊಂಡಿರೋ ಚಿತ್ರ ಕರ್ಷಣಂ. ಧನಂಜಯ್ ಅತ್ರೆ ಅವರದ್ದಿಲ್ಲ ನಾಯಕನಾಗಿ ಬೇರೆ ಬೇರೆ ಶೇಡುಗಳಿರೋ ಸವಾಲಿನ ಪಾತ್ರ. ಈಗಾಗಲೇ ಸೀರಿಯಲ್ ಜಗತ್ತಿನಲ್ಲಿ ಛಾಪು ಮೂಡಿಸಿರುವ ಅನುಷಾ ಈ ಚಿತ್ರದ ನಾಯಕಿ. ಅವರದ್ದು ಪತ್ರಕರ್ತೆಯ ಪಾತ್ರ.
ಅದೆಷ್ಟೋ ವರ್ಷಗಳ ಕಾಲ ತಯಾರಿ ನಡೆಸಿಕೊಂಡು ತಮ್ಮ ಅಷ್ಟೂ ಎನರ್ಜಿಯನ್ನು ಪಣಕ್ಕಿಟ್ಟು ಧನಂಜಯ್ ಈ ಚಿತ್ರವನ್ನು ರೂಪಿಸಿದ್ದಾರೆ. ಅವರ ಕನಸಿಗೆ ನಿರ್ದೇಶಕ ಶರವಣ ಅಷ್ಟೇ ಶ್ರದ್ಧೆಯಿಂದ, ಸರಿಕಟ್ಟಾಗಿಯೇ ಜೀವ ತುಂಬಿದ್ದಾರೆ. ಅದೆಲ್ಲವೂ ಟ್ರೈಲರ್ ಮೂಲಕವೇ ಸಾಬೀತಾಗಿದೆ. ಇದರ ಜೊತೆ ಜೊತೆಗೇ ಕರ್ಷಣಂ ಚಿತ್ರದ ಬಗ್ಗೆಯೀಗ ಎಲ್ಲೆಡೆ ನಿರೀಕ್ಷೆ ಮೂಡಿಕೊಂಡಿದೆ. ಇದುವೇ ಬಿಡುಗಡೆಗೆ ಸೂಕ್ತ ಕಾಲ ಎಂಬುದೂ ಚಿತ್ರತಂಡಕ್ಕೆ ಅರ್ಥವಾಗಿದೆ. ಆದ್ದರಿಂದಲೇ ಕರ್ಷಣಂ ಬಿಡುಗಡೆಗೆ ತಯಾರಿ ಆರಂಭವಾಗಿದೆ.

#


Posted

in

by

Tags:

Comments

Leave a Reply