ಅನುರಾಗ್ ಸಿಂಗ್ ನಿರ್ದೇಶನದಲ್ಲಿ ಅಕ್ಷಯ್ ಕುಮಾರ್ ನಟಿಸಿರುವ ‘ಕೇಸರಿ’ ಸಿನಿಮಾ ಮಾರ್ಚ್ 21ರಂದು ತೆರೆಕಾಣಲಿದೆ. ಅಪಾರ ಕುತೂಹಲ ಹುಟ್ಟಿಸಿರುವ ಈ ಪೀರಿಯಡ್ ಸಿನಿಮಾದ ಎರಡು ಟೀಸರ್‍ಗಳೀಗ ಬಿಡುಗಡೆಯಾಗಿವೆ. 30 ಸೆಕೆಂಡ್‍ಗಳ ಎರಡು ಟೀಸರ್‍ಗಳು ಚಿತ್ರದಲ್ಲಿನ ವೀರಗಾಥೆಯನ್ನು ಸಾರುತ್ತವೆ. ಮೊದಲ ಟೀಸರ್‍ನಲ್ಲಿ ನೂರಾರು ಸಂಖ್ಯೆಯಲ್ಲಿ ಯೋಧರು ಕತ್ತಿ ಹಿಡಿದು ಅರಮನೆಯ ಗೋಡೆಯುದ್ದಕ್ಕೂ ಸಾಗುತ್ತಿದ್ದಾರೆ. ಹಿನ್ನೆಲೆಯಲ್ಲಿ ಡ್ರಮ್‍ನ ದೊಡ್ಡ ಸದ್ದು. ಕತ್ತಿ ಝಳಪಿಸುತ್ತಿರುವ ಸಿಖ್ ಯೋಧನ ಮೇಲೆ ಕ್ಯಾಮರಾ ಪ್ಯಾನ್ ಆಗುತ್ತದೆ. ‘ಇದೊಂದು ನಂಬಲು ಅಸಾಧ್ಯವಾದ ಕಥೆ’ ಎನ್ನುವ ಸಿನಿಮಾದ ಟ್ಯಾಗ್‍ಲೈನ್ ಸಮರ್ಥಿಸುವಂತಿದೆ ಈ ದೃಶ್ಯ.
ಚಿತ್ರತಂಡ ಬಿಡುಗಡೆ ಮಾಡಿರುವ ಎರಡನೇ ಟೀಸರ್‍ನಲ್ಲಿ ಮೈಯೆಲ್ಲಾ ಬೆಂಕಿಯಾಗಿರುವ ಸಿಖ್ ವ್ಯಕ್ತಿಯೊಬ್ಬ ಅಫ್ಘನ್ ಸೈನಿಕರೆಡೆ ಹೋಗುವ ದೃಶ್ಯವಿದೆ. “ಇತಿಹಾಸ ಕಂಡರಿಯದ ವೀರ ಕಥನವೊಂದನ್ನು ನೀವು ಈ ಹೋಳಿ ಹಬ್ಬದಂದು ನೋಡಲಿದ್ದೀರಿ” ಎನ್ನುವ ಟಿಪ್ಪಣಿಯೊಂದಿಗಿನ ಟೀಸರ್ ರೋಚಕತೆಯನ್ನು ಹೆಚ್ಚಿಸುತ್ತದೆ. 1897ರ ಸರಗ್ಹಾರಿ ಸಮರವನ್ನು ಆಧರಿಸಿದ ಸಿನಿಮಾ ‘ಕೇಸರಿ’. ಬ್ರಿಟಿಷ್ ಸೈನ್ಯದಲ್ಲಿನ 21 ಸಿಖ್ ಸೈನಿಕರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಅಫ್ಘನ್ ಸೈನಿಕರನ್ನು ಹಿಮ್ಮಟ್ಟುವ ರೋಚಕ ಕಥಾವಸ್ತು ಇದು. ಸಿಖ್ ರೆಜಿಮೆಂಟ್‍ನ ಮುಖ್ಯಸ್ಥ ಹವಿಲ್ದಾರ್ ಇಶಾರ್ ಸಿಂಗ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ ಚಿತ್ರದ ನಾಯಕಿಯಾಗಿ ಪರಿಣೀತಿ ಚೋಪ್ರಾ ಇದ್ದಾರೆ.
#
Leave a Reply
You must be logged in to post a comment.