ಕನ್ನಡ ಚಿತ್ರರಂಗವನ್ನು ಬೇರೆ ಮಟ್ಟಕ್ಕೆ ಕೊಂಡೊಯ್ದ ಸಿನಿಮಾ, ಕನ್ನಡಿಗರು ಹೆಮ್ಮೆ ಪಡುವಂತಾ ತಾಂತ್ರಿಕತೆಯ ಚಿತ್ರ ಎಂದೆಲ್ಲಾ ಕನ್ನಡಿಗರು ಕೆ.ಜಿ.ಎಫ್. ಚಿತ್ರವನ್ನು ತಲೆಮೇಲೆ ಮೆರವಣಿಗೆ ಹೊತ್ತು ತಿರುಗುತ್ತಿದ್ದಾರೆ. ಆದರೆ ಕೆ.ಜಿ.ಎಫ್. ತಂಡ ಕನ್ನಡ ಮತ್ತು ಕರ್ನಾಟಕದವರೇ ಅಸಡ್ಡೆಯಾಗಿ ನೋಡುತ್ತಿದೆಯಾ?

ಹೀಗೊಂದು ಅನುಮಾನ ಹುಟ್ಟಲೂ ಕಾರಣವಿದೆ. ಕೆ.ಜಿ.ಎಫ್. ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿದ ನಂತರ ಕರ್ನಾಟಕ ಚಲನಚಿತ್ರ ಅಕಾಡೆಮಿ, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸಮಯದಲ್ಲಿ ಸಂವಾದ, ಸನ್ಮಾನ ಅಂತಾ ಕರೆದಿತ್ತು. ಆಗ ಕೆ.ಜಿ.ಎಫ್. ಚಿತ್ರತಂಡದವರು ಯಾರೂ ದಾಕ್ಷಿಣ್ಯಕ್ಕಾದರೂ ಬರುವ ಪ್ರಯತ್ನ ಮಾಡಿರಲಿಲ್ಲ. ಈಗ ಕಥಾರಿನಲ್ಲಿ ನಡೆದಿರುವ ಸೈಮಾ ಅವಾರ್ಡಿಗೆ ಮಾತ್ರ ಎಲ್ಲರೂ ಹಾಜರಾಗಿದ್ದಾರೆ. ನಮ್ಮವರು ಕರೆದ ಸಮಾರಂಭಕ್ಕೆ ಹಾಜರಾಗಲು ಮನಸ್ಸಿಲ್ಲದವರಿಗೆ, ಬೇರೆ ಯಾವುದೋ ನೆಲದಲ್ಲಿ ನಡೆಯುವ ಸಭೆ ಸಮಾರಂಭಗಳೇ ಮುಖ್ಯವಾ? ಸಿನಿಮಾದ ನಾಯಕನಟ ಯಶ್, ನಿರ್ದೇಶಕ ಪ್ರಶಾಂತ ನೀಲ್ .. ಮುಂತಾದವರು ಉತ್ತರಿಸಬೇಕು!

CG ARUN

ಜಗ್ಗಿ ಜಗನ್ನಾಥ್ ಟ್ರೇಲರ್ ಬಿಡುಗಡೆ!

Previous article

ತಮಿಳು ರಾಕರ್ಸ್ ತಂಡದಿಂದ ಲೀಕಾಯ್ತು ಸೇಕ್ರೆಡ್ ಗೇಮ್ಸ್ 2 ಸಿನಿಮಾ!

Next article

You may also like

Comments

Leave a reply

Your email address will not be published. Required fields are marked *