ಮೊದಲೆಲ್ಲಾ ಗಡ್ಡ ಬಿಟ್ಟು ಓಡಾಡೋರನ್ನು ತಿರುಕ ಅನ್ನುತ್ತಿದ್ದರು. ಕೆಜಿಎಫ್ ಸಿನಿಮಾಗಿ ಉದ್ದ ಗಡ್ಡ ಬಿಟ್ಟವರನ್ನೆಲ್ಲಾ ಹುಡುಕಿ ತಂದು ಗುಡ್ಡೆ ಹಾಕಿದರು ನೋಡಿ. ಈಗ ಎಲ್ಲೆಲ್ಲೂ ದಾಡಿ ಬಿಡೋದೇ ಟ್ರೆಂಡು. ಇಪ್ಪತ್ತೈದು ಮೂವತ್ತು ವರ್ಷಗಳ ಹಿಂದಿನ ಕಂಪ್ಯೂಟರುಗಳನ್ನು ‘ಇ- ವೇಸ್ಟ್’ ಅಂತಾ ಹೆಸರಿಸಲಾಗಿ, ಕಸಕ್ಕೆ ಎಸೆಯಲೂ ಜನ ಹೆದರುವಂತಾ ಪರಿಸ್ಥಿತಿಯಿದೆ. ಪಳೆಯುಳಿಕೆಯಂಥಾ ಕಂಪ್ಯೂಟರುಗಳು ಕೆ.ಜಿ.ಎಫ್.-೨ ಚಿತ್ರದ ಚಿತ್ರೀಕರಣಕ್ಕೆ ಬೇಕಂತೆ. ಸದ್ಯ ಈ ಚಿತ್ರದ ಕಲಾನಿರ್ದೇಶಕರ ತಂಡ ಯಾರ ಬಳಿ ಹಳೇ ಕಂಪ್ಯೂಟರಿದೆ ಅನ್ನೋ ಹುಡುಕಾಟದಲ್ಲಿ ತೊಡಗಿಕೊಂಡಿದೆ.

ಕೆ.ಜಿ.ಎಫ್ ಸಿನಿಮಾದ ಮೊದಲ ಭಾಗದಲ್ಲಿ ಗಡ್ಡ ಬಿಟ್ಟ ಜನರ ಜೊತೆಗೆ ಲೋಡುಗಟ್ಟಲೆ ಮಣ್ಣು, ಧೂಳನ್ನು ತುಂಬಿದ್ದರು. ಈ ಸಲ ಎರಡನೇ ಚಾಪ್ಟರಿನಲ್ಲಿ ಕಂಪ್ಯೂಟರುಗಳನ್ನು ಸಂಗ್ರಹಿಸುತ್ತಿದ್ದಾರೆ. ೮೦ರ ದಶಕದಲ್ಲಿ ಬಳಸುತ್ತಿದ್ದ ಗಣಕಯಂತ್ರಗಳು ಭಾರತದ ಯಾವ ಮೂಲೆಯಲ್ಲಿ, ಯಾರೇ ಉಳಿಸಿಕೊಂಡಿದ್ದರೂ ಅದಕ್ಕೆ ಒಳ್ಳೇ ಬೆಲೆ ಕೊಟ್ಟು ಖರೀದಿಸುತ್ತಿದ್ದಾರೆ.

ಕೆ.ಜಿ.ಎಫ್.  ಚಿತ್ರದಲ್ಲಿ ಇಂದಿರಾಗಾಂಧಿಯ ಪಾತ್ರ ಕೂಡಾ ಪ್ರಮುಖವಾಗಿ ಬರಲಿದೆ ಅನ್ನೋ ಮಾಹಿತಿ ಕೂಡಾ ಹೊರಬಿದ್ದಿದೆ. ಪ್ರಶಾಂತ್ ನೀಲ್ ಈ ಸಲ ಏನೇನು ಕಂಟೆಂಟು ಸೇರಿಸುತ್ತಿದ್ದಾರೋ ಗೊತ್ತಿಲ್ಲ. ಆದರೆ ಭಾರತ ರಾಜಕೀಯ ಇತಿಹಾಸವನ್ನು ಕೆದಕುವ ಪ್ರಯತ್ನವಂತೂ ಇಲ್ಲಿ ನಡೆಯಲಿದೆ ಅನ್ನೋದು ಪಕ್ಕಾ. ೧೯೮೪ರಲ್ಲಿ ನಡೆದ ಇಂದಿರಾ ಹತ್ಯೆ ಮತ್ತು ಅದರ ಹಿಂದಿನ ಅಸಲೀ ಸತ್ಯಗಳು ಅನಾವರಣಗೊಳ್ಳಲಿವೆ ಎನ್ನುವ ಸಣ್ಣ ಕುರುಹಂತೂ ದೊರೆತಿದೆ. ಅಲ್ಲಿಗೆ ಕೆ.ಜಿ.ಎಫ್.ಗೂ ಇಂದಿರಾಗಾಂಧಿಗೂ ಏನೇನು ಸಂಬಂಧವಿತ್ತು? ಸಿನಿಮಾದ ಹೀರೋ ರಾಕಿಯ ಬದುಕಲ್ಲಿ ಇಂದಿರಾ ಗಾಂಧಿ ಪಾತ್ರವೇನು? ಎಂಬಿತ್ಯಾದಿ ವಿವರಗಳನ್ನು ಸಾಧ್ಯವಾದಷ್ಟು ಬೇಗ ನಿಮ್ಮ ಮುಂದಿಡುತ್ತೇವೆ.

ಅಲ್ಲೀತನಕ ನಿಮ್ಮಲ್ಲಿ ಹಳೇ ಕಂಪ್ಯೂಟರೇನಾದರೂ ಇದ್ದರೆ ಧೂಳೊರೆಸಿ ಜೋಡಿಸಿಡಿ. ಕೆಜಿಎಫ್ ಟೀಮಿನವರು ಬಂದು ಕಾಸು ಕೊಟ್ಟು ಕೊಂಡೊಯ್ಯುತ್ತಾರೆ!

CG ARUN

ಫಾರಿನ್ ಟೂರಿಗೆ ಹೋಗಿದ್ದ ಶ್ರೀನಿವಾಸಪ್ಪನವರಿಗೆ ಏನಾಯಿತು?

Previous article

ಬೇಕಿತ್ತಾ ಗುರುವೇ ಇದೆಲ್ಲಾ?

Next article

You may also like

Comments

Leave a reply

Your email address will not be published. Required fields are marked *

More in cbn