ಇತ್ತೀಚಿಗಷ್ಟೇ ಕಿಚ್ಚ ಸುದೀಪ್ ದಬಾಂಗ್ 3 ಸಿನಿಮಾದ ಸೆಟ್ಟಿಗೆ ಸೇರಿಕೊಂಡಿದ್ದು, ಶೂಟಿಂಗ್ ನಲ್ಲಿಯೂ ಬ್ಯುಸಿಯಾಗಿದ್ದರು. ಚಿತ್ರದ ಹೈ ಮೋಲೈಟ್ ಕ್ಲೈಮ್ಯಾಕ್ಸ್ ದೃಶ್ಯದ ಶೂಟಿಂಗ್ ಕೂಡ ಭರದಿಂದ ಸಾಗುತ್ತಿತ್ತು. ಬಾಲಿವುಡ್ ಬ್ಯಾಡ್ ಮ್ಯಾನ್ ಜತೆ ತೊಡೆ ತಟ್ಟಿದ್ದ ಕಿಚ್ಚ ದೀಢೀರನೆ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಬೆಂಗಳೂರಿಗೆ ರಿಟನ್ ಆಗಿದ್ದಾರೆ. ಹೌದು ಮಗಳು ಸಾನ್ವಿಯ ಹುಟ್ಟುಹಬ್ಬದ ಸಂಭ್ರಮದ ನಿಮಿತ್ತ ಕಿಚ್ಚ ಸುದೀಪ್ ದಬಾಂಗ್ ಶೂಟಿಂಗ್ ನಿಂದ ತಾತ್ಕಾಲಿಕ ಬ್ರೇಕ್ ಪಡೆದಿದ್ದಾರೆ. ಮಗಳಿಗೆ ಕಿಚ್ಚ ಸುದೀಪ್ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಮಗಳ ಜೊತೆಗಿನ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡುವ ಮೂಲಕ ಸಾನ್ವಿಗೆ ಶುಭಾಶಯ ಕೋರಿದ್ದಾರೆ.
https://twitter.com/KicchaSudeep/status/1130203190303924224
“ನನ್ನ ಪ್ರೀತಿಯ ಏಂಜೆಲ್ ಗೆ ಹುಟ್ಟುಹಬ್ಬದ ಶುಭಾಶಯಗಳು. ಯಾವಾಗಲು ಸಂತೋಷದಿಂದಿರು ಸಾನು ಬೇಬಿ. ಯಾವಾಗಲು ನಿನ್ನನ್ನ ಹೆಚ್ಚು ಪ್ರೀತಿಸುತ್ತೇನೆ” ಎಂದು ಮುದ್ದು ಮಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ತಿಳಿಸಿದ್ದಾರೆ. ಇನ್ನು ಸುದೀಪ್ ಪತ್ನಿ ಪ್ರಿಯಾ ರಾಧಕೃಷ್ಣನ್ ಸಹ ಮಗಳಿಗೆ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ
https://twitter.com/iampriya06/status/1130300588237893632
No Comment! Be the first one.