- ಮಹಂತೇಶ್ ಮಂಡಗದ್ದೆ
ಕಿಚ್ಚ ಸುದೀಪ್ ಕನ್ನಡ, ತೆಲುಗು, ತಮಿಳು ಮಲಯಾಳಂ, ಹಿಂದಿ ಈ ಐದೂ ಭಾಷೆಗಳಲ್ಲಿ ಖ್ಯಾತಿ ಹೊಂದಿರೋ ನಟ. ಹತ್ತಕ್ಕೂ ಹೆಚ್ಚು ವರ್ಷಗಳಿಂದ ಬಿಟೌನ್, ಟಿಟೌನ್, ಕಾಲಿವುಡ್ ಅಂಗಳದಲ್ಲಿ ಓಡಾಡಿರೋ ಸ್ಯಾಂಡಲ್ವುಡ್ ಸ್ಟಾರ್. ಎಲ್ಲಾ ಭಾಷೆಗಳಲ್ಲೂ ತನ್ನದೇ ಆದ ಫ್ಯಾನ್ಸ್ ಫಾಲೋವಿಂಗ್ ಹೊಂದಿರೋ ಅಭಿನಯ ಚಕ್ರವರ್ತಿ. ಸದ್ಯ ವಿಕ್ರಾಂತ್ ರೋಣ ಸಿನಿಮಾದ ಶೂಟಿಂಗ್ ಹಾಗೂ ಬಿಗ್ ಬಾಸ್ನಲ್ಲಿ ಬ್ಯುಸಿಯಿರೋ ಕಿಚ್ಚನಿಗಾಗಿ ಸೌತ್ ಸ್ಟಾರ್ ಡೈರೆಕ್ಟರ್ಗಳು ಕಥೆ ಮಾಡಿಕೊಂಡು ಕನ್ವೆನ್ಸ್ ಮಾಡ್ತಿದ್ದಾರೆ.
ವಿಕ್ರಾಂತ್ ರೋಣನ ನಂತರ ಅವರ ಮುಂದಿನ ಸಿನಿಮಾ ಯಾರ ಜೊತೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಕಾಡ್ತಿದೆ. ಈ ಬಗ್ಗೆ ಗಾಂಧೀನಗರದಲ್ಲಿ ಹಲವು ಗಾಸಿಪ್ ಸೌಂಡ್ ಮಾಡ್ತಿದ್ದು, ಜೋಗಿ ಪ್ರೇಮ್ ಜೊತೆ ಮತ್ತೊಂದು ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಸ್ವಲ್ಪ ಜಾಸ್ತಿಯೇ ಸೌಂಡ್ ಮಾಡ್ತಿದೆ.
ದಿ ವಿಲನ್ ಸ್ಯಾಂಡಲ್ವುಡ್ನಲ್ಲಿ ಯಾವ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿತ್ತು ಅನ್ನೋದು ಎಲ್ಲರಿಗೂ ನೆನಪಿರ್ಲೇ ಬೇಕಲ್ವಾ. ಶಿವಣ್ಣ-ಸುದೀಪ್ರಂತಹ ಸೂಪರ್ ಸ್ಟಾರ್ಗಳನ್ನ ಒಂದೇ ಸ್ಕ್ರೀನ್ ಮೇಲೆ ತಂದ ಖ್ಯಾತಿ ಜೋಗಿ ಪ್ರೇಮ್ರದ್ದು. ವಿಲನ್ ನಂತರ ಕಿಚ್ಚ ಸುದೀಪ್ ಹಾಗೂ ಪ್ರೇಮ್ ಈ ಇಬ್ಬರ ಕಾಂಬಿನೇಷನ್ನಲ್ಲಿ ಮತ್ತೊಂದು ಸಿನಿಮಾ ರೆಡಿಯಾಗ್ತಿದೆ. ಸದ್ಯ ಏಕ್ ಲವ್ಯಾ ಸಿನಿಮಾದಲ್ಲಿ ಬ್ಯುಸಿಯಿರೋ ಪ್ರೇಮ್, ಈಗಾಗಲೇ ಸುದೀಪ್ಗಾಗಿ ಸಿನಿಮಾ ರೆಡಿ ಮಾಡಿಕೊಂಡಿದ್ದಾರಂತೆ.
ಈಗಾಗಲೇ ಸುದೀಪ್ಗೆ ಪ್ರೇಮ್ ಕಥೆ ಹೇಳಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಇಬ್ಬರ ಕಾಂಬಿನೇಷನ್ನ ಮತ್ತೊಂದು ಸಿನಿಮಾ ಪಕ್ಕಾ ಅನ್ನೋ ಮಾತುಗಳು ಕೇಳಿ ಬರ್ತಿವೆ. ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆದ್ಮೇಲೆ ಈ ಇಬ್ಬರ ಸಿನಿಮಾ ಲಾಂಚ್ ಆಗುತ್ತೆ ಅಂತಾ ಮೂಲಗಳು ತಿಳಿಸಿವೆ. ಅಲ್ಲದೇ ಹೆಬ್ಬುಲಿ, ಪೈಲ್ವಾನ್ ನಿರ್ದೇಶಕ ಕೃಷ್ಣ ಕೂಡ ಸುದೀಪ್ಗೆ ಮತ್ತೊಂದು ಸಿನಿಮಾ ಮಾಡ್ತಾರೆ ಅನ್ನೋ ಸುದ್ಧಿ ಹಲವು ದಿನಗಳಿಂದ ಕೇಳಿ ಬರ್ತಿದೆ. ಜೊತೆಗೆ ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ನಿಂದಲೂ ಕಿಚ್ಚನಿಗೆ ಆಫರ್ಸ್ ಬರ್ತಿವೆ.
No Comment! Be the first one.