ತಮಿಳು ಚಿತ್ರರಂಗವೂ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದ ಟಾಪ್ ಹೀರೋಯಿನ್ ಕೀರ್ತಿ ಸುರೇಶ್. ತನ್ನ ಅದ್ಭುತ ನಟನೆಯ ಕಾರಣದಿಂದ ಭಾರೀ ಬೇಡಿಕೆ ಹೊಂದಿರೋ ಕೀರ್ತಿಯನ್ನ ಕನ್ನಡಕ್ಕೆ ಕರೆತರುವ ಪ್ರಯತ್ನ ವರ್ಷಾಂತರಗಳಿಂದಲೂ ನಡೆಯುತ್ತಿದೆ. ಇದೀಗ ಕೀರ್ತಿ ಸುರೇಶ್ ಕನ್ನಡಕ್ಕೆ ಪಾದಾರ್ಪಣೆ ಮಾಡೋ ಕ್ಷಣಗಳು ಹತ್ತಿರಾಗಿವೆ!
ಅಂದಹಾಗೆ ಕೀರ್ತಿ ಸುರೇಶ್ ನಾಯಕಿಯಾಗಿ ಬರುತ್ತಾಳೆ ಅಂತ ಸುದ್ದಿಯೆದ್ದಿರೋದು, ಅದು ನಿಜಕ್ಕೆ ಹತ್ತಿರದಲ್ಲಿರೋದು ಪಕ್ಕಾ. ಈಕೆ ಚಾಲೆಂಜಿಂಗ್ ಸ್ಟಾರ್ ಅಭಿನಯದ ಚಿತ್ರದಲ್ಲಿ ನಟಿಸೋದೂ ಕೂಡಾ ಹೆಚ್ಚೂ ಕಡಿಮೆ ಗ್ಯಾರೆಂಟಿ. ಆದರೆ ದರ್ಶನ್ ಅವರ ಕೈಲಿರೋ ಸಾಲುಸಾಲು ಚಿತ್ರಗಳಲ್ಲಿ ಕೀರ್ತಿ ಯಾವುದಕ್ಕೆ ನಾಯಕಿಯಾಗುತ್ತಾಳೆ ಅನ್ನೋದು ಮಾತ್ರ ತುಸು ಗೊಂದಲವಾಗುಳಿದಿದೆ!
ದರ್ಶನ್ ಅಭಿನಯದ ಯಜಮಾನ ಅಬ್ಬರದೊಂದಿಗೇ ತೆರೆ ಕಾಣಲು ರೆಡಿಯಾಗಿದೆ. ಅದರ ಹಜಿಂಚುಮುಂಚಲ್ಲಿಯೇ ಕುರುಕ್ಷೇತ್ರವೂ ಬಿಡುಗಡೆಯಾಗಲಿದೆ. ಅದಾದ ನಂತರ ದರ್ಶನ್ ಸರಣಿಯೋಪಾದಿಯಲ್ಲಿ ಹಲವಾರು ಚಿತ್ರಗಳನ್ನ ಒಪ್ಪಿಕೊಂಡಿದ್ದಾರೆ. ಒಡೆಯ, ರಾಬರ್ಟ್ ಸೇರಿದಂತೆ ಈ ಪಟ್ಟಿ ಉದ್ದವಿದೆ. ಆದರೆ ಕೀರ್ತಿ ಸುರೇಶ್ ನಾಯಕಿಯಾಗಿ ಬರೋ ಸಾಧ್ಯತೆಗಳಿರೋದು ಗಂಡುಗಲಿ ಮದಕರಿ ನಾಯಕ ಸಿನಿಮಾಗೆ!
ಗಂಡುಗಲಿ ಮದಕರಿ ನಾಯಕ ಚಿತ್ರವ್ನ್ನು ಅದ್ದೂರಿ ತಾರಾಗಣದೊಂದಿಗೆ ರೂಪಿಸಲು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ನಿರ್ಧರಿಸಿದ್ದಾರೆ. ಈ ಚಿತ್ರಕ್ಕೆ ಕೀರ್ತಿ ಸುರೇಶ್ ಸೂಕ್ತ ಎಂಬ ಅನಿಸಿಕೆ ಆರಂಭ ಕಾಲದಿಂದಲೂ ಚಿತ್ರ ತಂಡದ ಕಡೆಯಿಂದಲೇ ಕೇಳಿ ಬರಲಾರಂಭಿಸಿತ್ತು. ಈಕೆ ದರ್ಶನ್ ಅವರಿಗೆ ಸೂಪರ್ ಜೋಡಿಯಾಗ್ತಾಳೆ ಅನ್ನೋದರಲ್ಲಿ ಯಾವ ಅನುಮಾನವೂ ಇಲ್ಲ. ಆದ್ದರಿಂದಲೇ ಈ ಬಗ್ಗೆ ರಾಕ್‌ಲೈನ್ ಕೂಡಾ ಮನಸು ಮಾಡಿದ್ದಾರೆನ್ನಲಾಗಿದೆ. ಖುದ್ದು ರಾಕ್ ಲೈನ್ ನಿರ್ಧರಿಸಿದರೆಂದರೆ ಗಂಡುಗಲಿ ಮದಕರಿ ನಾಯಕನಿಗೆ ಮಹಾನಟಿ ಕೀರ್ತಿ ಸುರೇಶ್ ನಾಯಕಿಯಾಗೋದು ಗ್ಯಾರೆಂಟಿ.
Leave a Reply
You must be logged in to post a comment.