ಶೀಲ ಸುಶೀಲ ಹಾಡಿನ ಮೂಲಕ ಕಿಸ್ ಸಿನಿಮಾ ಯುವ ಸಮೂಹದ ಮನಗೆದ್ದಿದೆ. ಯುವ ಮನಸುಗಳನ್ನು ಮೊದಲ ಕೇಳುವಿಕೆಯಲ್ಲಿಯೇ ಆವರಿಸಿಕೊಂಡಿರೋ ಈ ಹಾಡಿನ ಪ್ರಭೆಯಲ್ಲಿಯೇ ಮತ್ತೊಂದು ಹಾಡನ್ನು ಬಿಡುಗಡೆ ಮಾಡಲು ನಿರ್ದೇಶಕ ಎಪಿ ಅರ್ಜುನ್ ಮುಂದಾಗಿದ್ದಾರೆ. ಇಂದು ಸಂಜೆ ಈ ಹಾಡು ಅನಾವರಣಗೊಳ್ಳಲಿದೆ.
ನೀನೇ ಮೊದಲು ನೀನೇ ಕೊನೆ ಎಂಬ ರೊಮ್ಯಾಂಟಿಕ್ ಹಾಡನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆಗೊಳಿಸಲಿದ್ದಾರೆ. ಈ ಹಿಂದೆ ಬಂದಿದ್ದ ಶೀಲ ಸುಶೀಲ ರಾಕಿಂಗ್ ಶೈಲಿಯಲ್ಲಿಯೇ ಗೆಲುವು ಕಂಡಿತ್ತು. ಈಗ ಬಿಡುಗಡೆಯಾಗುತ್ತಿರೋದು ರೊಮ್ಯಾಂಟಿಕ್ ಮೆಲೋಡಿ ಹಾಡು.ಈ ಹಾಡಿಗೆ ವಿ ಹರಿಕೃಷ್ಣ ಪುತ್ರ ಆದಿತ್ಯ ಸಂಗೀತ ಸಂಯೋಜನೆ ಮಾಡಿದ್ದಾನಂತೆ. ಇದಕ್ಕೂ ಸಹ ಎ ಪಿ ಅರ್ಜುನ್ ಅವರೇ ಸಾಹಿತ್ಯ ನೀಡಿದ್ದಾರೆ. ಒಟ್ಟಾರೆಯಾಗಿ ಕಿಸ್ ಚಿತ್ರದ ಎಲ್ಲ ಹಾಡುಗಳಿಗೂ ಅರ್ಜುನ್ ಸಾಹಿತ್ಯ ಒದಗಿಸಿರೋದು ವಿಶೇಷ. ಕಿಸ್ ನಲ್ಲಿ ಐದು ಹಾಡುಗಳಿರಲಿವೆ. ಅವೆಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿರುವಂತೆಯೇ ಹರಿಕೃಷ್ಣ ನೋಡಿಕೊಂಡಿದ್ದಾರೆ. ಇನ್ನು ಸರಣಿಯೋಪಾದಿಯಲ್ಲಿ ವಾರಕ್ಕೊಂದು ಹಾಡುಗಳು ಬಿಡುಗಡೆಯಾಗಲಿವೆ.
#
No Comment! Be the first one.