ಕೋಳಿ ಕಾಲಿಗ್ ಗೆಜ್ಜೆ ಕಟ್ಟಿದ್ರೆ ತಿಪ್ಪೆ ಕೆದ್ರೋದ್ ಬಿಟ್ಟಿತಾ?

ನಾಯಿ ಕೊರಳಿಗ್ ಲಿಂಗ ಕಟ್ಟಿದ್ರೆ ಮೂಳೆ ಕಡಿಯೋದ್ ಬಿಟ್ಟಿತಾ…

ಕಾವಿ ತೊಟ್ಟಿದ್ ಮಾತ್ರಕ್ಕೆ ಕಾಮ ಸತ್ತು ಹೋಗುತ್ತಾ?

ಖಾದಿ ತೊಟ್ಟ ಮಾತ್ರಕ್ಕೆ ದೇಶ ಆಳಕ್ಕಾಗುತ್ತಾ?

ಇಲ್ಲಿ ಇರುವುದೆ ಹಿಂಗೆ ಬದಲಾದ್ರೆ ಹೆಂಗೆ…

ಜಗವಿರುವುದೆ ಹಿಂಗೆ, ಜರಿದರೆ ಹೆಂಗೆ?

ಎಂಥಾ ಸತ್ಯವಾದ ಸಾಲುಗಳಲ್ವಾ?

ಇದು ಕೊಡೆ ಮುರುಗ ಚಿತ್ರದ ಗೀತೆ. ಸದ್ಯ ಯೂ ಟ್ಯೂಬಿನಲ್ಲಿ ಬಿಡುಗಡೆಯಾಗಿರುವ ಈ ಚಿತ್ರದ ಲಿರಿಕಲ್ ವಿಡಿಯೋ ಸಖತ್ ಸೌಂಡು ಮಾಡುತ್ತಿದೆ. ಕೊಡೆ ಮುರುಗ ಅನ್ನೋ ಸಿನಿಮಾ ಶುರುವಿನಿಂದಲೂ ಸುದ್ದಿ ಮಾಡುತ್ತಲೇ ಇದೆ. ಇಲ್ಲಿ ಯಾವ ದೊಡ್ಡ ಸ್ಟಾರೂ ಇಲ್ಲ. ಮೀಸೆಬಿಟ್ಟ, ಕಪ್ಪನೆಯ ವ್ಯಕ್ತಿಯನ್ನೇ ಹೀರೋ ಮಾಡಿ ಸಿನಿಮಾ ತಯಾರು ಮಾಡಿದ್ದಾರೆ. ಆದರೆ, ಚಿತ್ರೀಕರಣದ ಹಂತದಲ್ಲಿರುವಾಗಲೇ ಈ ತಂಡ ಬಿಡುಗಡೆ ಮಾಡಿದ್ದ ಟೀಸರು ಜನರನ್ನು ಅಪಾರವಾಗಿ ಸೆಳೆದಿತ್ತು. ಈ ಸಿನಿಮಾಗೆ ಜನ ಬಂದೇ ಬರುತ್ತಾರೆ ಅನ್ನೋದಾಗಲೇ ಸಾಬೀತಾಗಿದೆ.

ಈ ಚಿತ್ರದ ಮೂಲಕ   ಈವರೆಗೆ ಕಿರುತೆರೆಯಲ್ಲಿ ಕೆಲಸ ಮಾಡಿದ್ದ ಮುನಿಕೃಷ್ಣ ಮತ್ತು ಸುಬ್ರಮಣ್ಯ ಪ್ರಸಾದ್ ಈಗ ಹಿರಿತೆರೆಗೂ  ಕಾಲಿಡುತ್ತಿzರೆ.  ಕೊಡೆ ಮುರುಗ ಚಿತ್ರದ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಅದರಲ್ಲಿ ಒಬ್ಬರು ಚಿತ್ರದ ನಿರ್ದೇಶಕರಾದರೆ ಮತ್ತೊಬ್ಬರು ಚಿತ್ರದ ನಾಯಕ ನಟರಾಗಿzರೆ.

ತನ್ನ ಮುಖದ ತುಂಬ ಮೀಸೆ ಬಿಟ್ಟುಕೊಂಡಿರುವ ಮುನಿಕೃಷ್ಣ  ಈ ಚಿತ್ರದ ನಾಯಕ ಕೊಡೆ ಮುರುಗನಾಗಿದ್ದು, ಸುಬ್ರಮಣ್ಯ ಪ್ರಸಾದ್ ಈ ಚಿತ್ರದ  ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

  ನೋಡಲು ಕಪ್ಪಗಿರುವ ದಪ್ಪ ಮೀಸೆಯ ನಾಯಕನನ್ನು ಅವಮಾನ ಮಾಡಿಕೊಂಡೇ ಸಿನಿಮಾವೊಂದರ ಹೀರೋ ಆಗಿ  ಮಾಡುವ ಪ್ರಯತ್ನವೇ  ’ಕೊಡೆ ಮುರುಗ’ ಚಿತ್ರದ  ಮುಖ್ಯ ಕಥೆ.  ಅದಕ್ಕೆ ಮುನಿಕೃಷ್ಣ ಒಪ್ಪಿದ ಮೇಲೆ ಚಿತ್ರದ ಕಥೆ ಸಿದ್ದಪಡಿಸಲು ಮುಂದಾದೆವು. ನಮಗೆ ನಿರ್ಮಾಪಕರಾದ ರವಿಕುಮಾರ್ ಮತ್ತು ಅಶೋಕ್ ಶಿರಾಲಿ ಸಾಥ್ ನೀಡಿzರೆ ಎಂದು  ನಿರ್ದೇಶಕ ಸುಬ್ರಮಣ್ಯ ಪ್ರಸಾದ್  ಹೇಳಿಕೊಂಡಿದ್ದಾರೆ.

ಸಿನಿಮಾರಂಗಕ್ಕೆ  ಸಂಭಂದಪಟ್ಟಂತ ಒಂದು ಹಾಸ್ಯ ಭರಿತ  ಕಥೆಯನ್ನು  ಕೊಡೆಮುರುಗ ಚಿತ್ರ ಒಳಗೊಂಡಿದೆ.  ಸದಾ ಅವಮಾನಗಳನ್ನು ಎದುರಿಸುತ್ತಲೇ ನಾಯಕನಾಗುವ  ಕೊಡೆಮುರುಗನ ಕಥೆಯಿದು.. ಮೊದಲು ಮುನಿಕೃಷ್ಣ ಅವರನ್ನು ನಾಯಕನನ್ನಾಗಿ ಮಾಡುತ್ತೇವೆ ಎಂದಾಗ ಅಷ್ಟೊಂದು ಬರಗೆಟ್ಟಿದ್ದೀಯಾ, ನಿನ್ನ ತೆಲೆಯಲ್ಲಿ ಮೆದುಳು ಇದೆಯೇ ಎಂದು ಕೇಳಿದವರು  ಈಗ ನಿನ್ನ ತಲೆಯಲ್ಲಿಯೂ ಕಿಡ್ನಿ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವ್ಯಕ್ತಿಗಿಂತ ಚಿತ್ರದಲ್ಲಿ ಕಥೆ ಮುಖ್ಯ. ಆ ಕೆಲಸವನ್ನು ನಾವು ಮಾಡಿzವೆ ಎಲ್ಲರಿಗೂ ಇಷ್ಟವಾಗುವ ಹಾಸ್ಯಭರಿತ ಕಥೆ ಈ ಚಿತ್ರದಲ್ಲಿದೆ  ಎಂದು ಹೇಳಿಕೊಂಡರು. ನಟ ಮುನಿಕೃಷ್ಣ, ನಾಯಕಿ ಪಲ್ಲವಿ ಗೌಡ ಈ ಚಿತ್ರದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ. ನಿರ್ಮಾಪಕರಾದ ರವಿಕುಮಾರ್ ಅವರಿಗೆ ಇದೊಂದು ಯಶಸ್ವೀ  ಚಿತ್ರವಾಗಲಿದೆ ಅನ್ನೋದರಲ್ಲಿ ಸಂಪೂರ್ಣ ನಂಬಿಕೆ ಇದೆ.  ಸಂಗೀತ ಈ ಚಿತ್ರಕ್ಕೆ ತ್ಯಾಗರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಸದ್ಯ ಬಿಡುಗಡೆಯಾಗಿರುವ ಅರ್ಥಗರ್ಭಿತ ಹಾಡು ಕೇಳಿದ ಪ್ರತಿಯೊಬ್ಬರನ್ನೂ ಮೆಚ್ಚಿಸುತ್ತಿದೆ. ಹಾಡಿನ ಸಾಲು, ಸಂಗೀತ, ಖೈಲಾಶ್ ಖೇರ್ ದನಿ, ಅದರಲ್ಲಿರುವ ಒಳಾರ್ಥಗಳೆಲ್ಲಾ ಅಂಥಾ ಗುಣಮಟ್ಟ ಹೊಂದಿದೆ.

CG ARUN

ಶಿವರಾಜ್ ಕೆ ಆರ್ ಪೇಟೆ ಈ ಸಿನಿಮಾ ಒಪ್ಪಿದ್ದು ಯಾಕೆ ಗೊತ್ತಾ?

Previous article

You may also like

Comments

Leave a reply

Your email address will not be published. Required fields are marked *