ಕಾಮಿಡಿ ಪಾತ್ರಗಳಲ್ಲೆ ತನ್ನನ್ನು ತೊಡಗಿಸಿಕೊಂಡು ಜಮಾನದಲ್ಲಿ ಪ್ರೇಕ್ಷಕರಿಗೆ ಕಚಗುಳಿಯಾಗುವ ಮಟ್ಟಿಗೆ ನಗಿಸುತ್ತಿದ್ದ ನಟ ಕೋಮಲ್ ಚಿತ್ರರಂಗದಿಂಗ ಔಟ್ ಆದ್ರಾ! ಕಾಮಿಡಿ ಅಂದಾಕ್ಷಣ ಕೋಮರ್ ಹೆಸರೇ ಗಾಂಧಿನಗರದ ಸಂದಿಗೊಂದಿಯಲ್ಲಿಯೂ ರಾರಾಜಿಸುತ್ತಿದ್ದ ಕಾಲವೊಂದಿತ್ತು. ಅಷ್ಟರಮಟ್ಟಿಗೆ ತನ್ನ ವರ್ಚಸ್ಸನ್ನು ಉಳಿಸಿಕೊಂಡಿದ್ದ ನಟ ಈಗ ಅಡ್ರೆಸ್ಸಿಗೆ ಸಿಗದ ಹಾಗೆ ಕಣ್ಮರೆಯಾಗಿದ್ದಾರೇಕೆ?
ಸುಮಾರು ನೂರಕ್ಕೂ ಹೆಚ್ಚು ಕಾಮಿಡಿ ರೋಲ್ಗಳಿಂದಲೇ ಜನ ಮನ ಗೆದ್ದಿದ್ದ ಕೋಮಲ್ ಹೀರೋ ಆಗುವ ಹಠಕ್ಕೆ ಬಿದ್ದು ತನ್ನ ನಾಯಕನ ಪಟ್ಟವನ್ನು ಉಳಿಸಿಕೊಳ್ಳಲು ಪಟ್ಟ ಪಾಡು ಕಡಿಮೆಯೇನಲ್ಲ. ಬಹುತೇಕ ನಟಿಸಿದ ಚಿತ್ರಗಳೆಲ್ಲವೂ ರಿಮೇಕ್ ಪಟ್ಟಿಗೆ ಸೇರಿದಲ್ಲದೇ ಎಲ್ಲವೂ ಅಷ್ಟರಮಟ್ಟಿಗೆ ಯಶಸ್ಸು ತಂದುಕೊಡದಿದ್ದದ್ದು ಕೋಮಲ್ ವರ್ಚಸ್ಸನ್ನು ಕುಸಿಯುವಂತೆ ಮಾಡಿಬಿಡ್ತಾ?
ಕೋಮಲ್ ಕಾಣೆಯಾಗಿದ್ದೂ ಇದೇ ಮೊದಲಲ್ಲಾ. ಈ ಹಿಂದೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿದ್ದ ಡೀಲ್ ರಾಜಾ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲೂ ಕೋಮಲ್ ಕಾಣೆಯಾಗಿದ್ದರು. ನಂತರ ಸಿಕ್ಕು ಮಾತನಾಡಿದ್ದ ಅವರು, ನಾನ್ಯಾಕೆ ಕಾಣೆಯಾಗ್ಲಿ.. ಬರೋಬ್ಬರಿ ಒಂದೂವರೆ ವರ್ಷದಿಂದ ಯಾರ ಕಣ್ಣಿಗೂ ಬೀಳದೇ ಸಿನಿಮಾಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದೆ ಅನ್ನೋ ಉತ್ತರ ನೀಡಿ ಎಲ್ಲರ ಬಾಯಿ ಮುಚ್ಚಿಸಿದ್ದರು. ಆದರೆ ಅದು ಎಷ್ಟರ ಮಟ್ಟಿಗೆ ಸತ್ಯ ಅನ್ನೋದೆ ಯಕ್ಷ ಪ್ರಶ್ನೆ.
ಕೆಂಪೇಗೌಡ 2 ನಿಂತೋಯ್ತಾ..!
ಕೆಂಪೇಗೌಡ ಚಿತ್ರದ ಯಶಸ್ಸಿನ ನಂತರ ಅದೇ ತಂಡ ಕೆಂಪೇಗೌಡ 2 ಚಿತ್ರವನ್ನೂ ಮಾಡಲಿದೆ ಎಂಬ ಸುದ್ದಿ ಹರಿದಾಡುವ ಹೊತ್ತಲ್ಲೇ ಕೆಂಪೇಗೌಡ 2 ಚಿತ್ರಕ್ಕೆ ಕೋಮಲ್ ನಾಯಕ ಎಂಬ ಸುದ್ದಿ ಎಲ್ಲರಲ್ಲಿಯೂ ಆಶ್ಚರ್ಯ ಮೂಡಿಸಿತ್ತು. ಅದು ಅಕ್ಷರಶಃ ಸತ್ಯವಾಗಿತ್ತು ಕೂಡ.
ಒಬ್ಬ ಉತ್ತಮ ಕಾಮಿಡಿಯನ್ ಆಗಿ ಕಾಣಿಸಿಕೊಂಡಿದ್ದ ಕೋಮಲ್, ಹೀರೋ ಆಗಿ ನಟಿಸಿದ ಸಿನಿಮಾಗಳಲ್ಲಿಯೂ ಕಾಮಿಡಿ ಕಥೆ ಮತ್ತು ಅದಕ್ಕೆ ಒಪ್ಪುವ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡಿದ್ದರು. ಆದರೆ ಈ ಚಿತ್ರದಲ್ಲಿ ಸಂಪೂರ್ಣ ಮೇಕ್ ಓವರ್ ಮಾಡಿಕೊಂಡು ಒಬ್ಬ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದ ಕಾಂಟ್ರವರ್ಸಿ ಕ್ರಿಕೆಟಿಗ ಶ್ರೀಶಾಂತ್ ಕಾರ್ಯಕ್ರಮವೊಂದರಲ್ಲಿ ಸ್ವತಃ ಕೆಂಪೇಗೌಡ 2 ಚಿತ್ರದ ಕುರಿತು ಮಾಹಿತಿ ನೀಡಿ, ಚಿತ್ರ ಅಕ್ಟೋಬರ್ ನವೆಂಬರ್ಗೆ ರಿಲೀಸ್ ಆಗಲಿದೆ ಎಂದೂ ಹೇಳಿದ್ದರು. ಆದರೆ ಯಾವ ವರ್ಷದ್ದು ಎಂಬುದನ್ನು ಮಾತ್ರ ಸೀಕ್ರೆಟ್ ಮಾಡಿಬಿಟ್ಟರು. ಕೆಂಪೇಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದ ಶಂಕರೇಗೌಡ ಅವರೇ ಈ ಚಿತ್ರಕ್ಕೂ ಸಾರಥಿಯಾಗಿದ್ದು, ಕೋಮಲ್ ಅವರನ್ನ ಚೂಸ್ ಮಾಡೋದಕ್ಕೆ ರೀಜನ್ ಏನಿತ್ತು. ಶಂಕರ್ ಗೌಡರ ಆರ್ಥಿಕ ಸ್ಥಿತಿ ಸುಧಾರಿಸಲು ಕೆಂಪೇಗೌಡ ಚಿತ್ರ ಪ್ಲಸ್ ಆಗಿದ್ರೂ, ಅವರು ದಒಡ್ಡ ನಟರನ್ನು ಸೈಡಿಗೆ ತಳ್ಳಿ ಕೋಮಲ್ಗೆ ಮಣೆ ಹಾಕಿದ್ದೇಕೆ? ಅಲ್ಲದೇ ಆರ ಪ್ರಶ್ನೆಗಳಿಗೂ ಉತ್ತರಿಸದೇ ಶಂಕರೇಗೌಡ ಮೌನ ವಹಿಸಿರುವುದೇಕೆ?
ಗೆಲುವಿಗೆ ಹಲವರು ಅಪ್ಪಾ ಅಮ್ಮ, ಸೋಲು ಅನಾಥ ಎಂದು ಅಮಿತಾಬ್ ಒಮ್ಮೆ ಹೇಳಿದ್ದರು. ಕೆಂಪೇಗವಢ ಗೆಲುವಿಗೆ ಹಲವರು ವಾರಸುದಾರರು ಹುಟ್ಟಿಕೊಂಡರು. ಇದು ಹಲವರ ನಡುವಿನ ಭಿನ್ನಾಭಿಪ್ರಾಯಕ್ಕೂ ಈ ಗೆಲುವು ಕಾರಣವಾಗಿತ್ತು. ಈ ಗೆಲುವು ನನಗೆ ಸೇರಿದ್ದು ಎಂದು ಹೊರಟ ನಿರ್ಮಾಪಕ ತಾನು ಯಾರನ್ನಾದರೂ ಹೀರೋ ಮಾಡಿ ಗೆಲ್ಲುತ್ತೇನೆ ಎಂಬ ಹಠಕ್ಕೆ ಬಿದ್ದು ಕೋಮಲ್ರನ್ನು ಹೀರೋ ಆಗಿ ಆಯ್ಕೆ ಮಾಡಲು ಹೊರಟು ಕೈ ಸುಟ್ಟಿಕೊಂಡ್ರಾ? ಕಾಮಿಡಿಯಿಂದ ಆ್ಯಕ್ಷನ್ ಹೀರೋ ಆಗಲು ಹೊರಟಿದ್ದೇ ಕೋಮಲ್ ಕರಿಯರ್ಗೆ ಮುಳುವಾಯಿತಾ? ಈ ವಿಷಯಗಳಿಗೆ ಉತ್ತರ ಕಾಶಿ ವಿಶ್ವೇಶ್ವರನೇ ಬಲ್ಲ.
No Comment! Be the first one.