ಕಳೆದ ಹತ್ತು ವರ್ಷಗಳಿಂದ ಸಿನಿಮಾರಂಗದಲ್ಲಿದ್ದು, ಸಹಾಯಕ ನಿರ್ದೇಶಕನಾಗಿ, ಸಣ್ಣ ಪುಟ್ಟ ಪಾತ್ರ ಮಾಡುತ್ತಾ, ಧಾರಾವಾಹಿಗಳಲ್ಲಿ ಅವಕಾಶ ಪಡೆದು, ಹೀರೋ ಆಗಿ, ಸಣ್ಣ ಸೋಲು, ದೊಡ್ಡ ಗೆಲುವು ಕಂಡಿರುವ ನಟ ಮದರಂಗಿ ಕೃಷ್ಣ.
ಲವ್ ಮಾಕ್ಟೇಲ್ ಸಿನಿಮಾದಿಂದ ಪ್ರೇಕ್ಷಕರ ಪಾಲಿನ ಡಾರ್ಲಿಂಗ್ ಆಗಿರುವ ಕೃಷ್ಣನ ಫೇಸ್ ಬುಕ್ ಪೇಜನ್ನು ಯಾರೋ ಹ್ಯಾಕ್ ಮಾಡಿದ್ದರಂತೆ. ಒದ್ದಾಟ ನಡೆಸಿ, ಮತ್ತೆ ಅದನ್ನು ತಮ್ಮ ಸುಪರ್ದಿಗೆ ಪಡೆಯುವಲ್ಲಿ ಕೃಷ್ಣ ಸಫಲರಾಗಿದ್ದಾರೆ. ಸಿನಿಮಾ ನಟ-ನಟಿಯರ ಫೇಸ್ ಬುಕ್ ಪೇಜುಗಳನ್ನು ಕಬಳಿಸಲು ಕಳ್ಳಗಣ್ಣುಗಳು ಸದಾ ಜಾಗೃತವಾಗಿರುತ್ತವೆ. ಹೀಗೆ ಮಾಡುವುದರಿಂದ ಏನು ಸಿಗುತ್ತದೋ ಗೊತ್ತಿಲ್ಲ. ಈ ಹಿಂದೆ ಕೂಡಾ ಸಾಕಷ್ಟು ಹೀರೋ ಹೀರೋಯಿನ್ನುಗಳು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳನ್ನು ಕಳೆದುಕೊಂಡು ಅವಾಂತರ ಪಟ್ಟಿದ್ದಾರೆ. ಈಗ ಆ ಲಿಸ್ಟಿಗೆ ಡಾರ್ಲಿಂಗ್ ಕೃಷ್ಣ ಸೇರಿದ್ದಾರಷ್ಟೇ..
ಇಲ್ಲೀತನಕ ಬೇರೆ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದ ಕೃಷ್ಣ ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲು ಸಾಧ್ಯವಾಗಿರಲಿಲ್ಲ. ಕೃಷ್ಣನ ನಟನೆಯ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದರೂ ಚಿತ್ರಗಳು ಮಾತ್ರ ಹೇಳಿಕೊಳ್ಳುವಂತಾ ಗೆಲುವು ಕಾಣುತ್ತಿರಲಿಲ್ಲ. ಇವೆಲ್ಲದರಿಂದ ರೋಸೆದ್ದ ಡಾರ್ಲಿಂಗು ಈ ಸಲ ತಾನೇ ಸಿನಿಮಾ ನಿರ್ದೇಶಿಸಿರುವ ಮನಸ್ಸು ಮಾಡಿತ್ತು. ಕಡಿಮೆ ಬೆಲೆಯಲ್ಲಿ ತಯಾರಿಸಿದ ಲವ್ ಮಾಕ್ಟೇಲು ಬ್ಯೂಟಿಫುಲ್ಲಾಗಿ ಮೂಡಿಬಂದಿತ್ತು. ಇದರ ಪ್ರತಿಫಲವಾಗಿ ಕೃಷ್ಣ ಹೂಡಿದ್ದ ಬಂಡವಾಳಕ್ಕಿಂತಾ ಹತ್ತು ಪಟ್ಟು ಹೆಚ್ಚು ಲಾಭವಾಗಿದೆ. ಇಂಥಾ ಸಂದರ್ಭದಲ್ಲಿ ಡಾರ್ಲಿಂಗ್ ಕೃಷ್ಣ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳನ್ನು ಮಾತ್ರವಲ್ಲ, ಬ್ಯಾಂಕ್ ಅಕೌಂಟನ್ನೂ ಜೋಪಾನ ಮಾಡಿಕೊಳ್ಳಬೇಕಿರುವ ಅಗತ್ಯವಿದೆ!!
No Comment! Be the first one.