ಕೊರೋನಾ ಕಾಟಕ್ಕೆ ಹೆದರಿ ಎಲ್ಲರಂತೆ ಮನೆಯಲ್ಲಿರುವ ಕೃತಿಕಾ ತನ್ನ ಗೆಳತಿ ಶಿವಾನಿ ಜೊತೆಗೆ ಚೆಂದದ ಟಿಕ್ಟಾಕ್ ಮಾಡಿ ಪೋಸ್ಟ್ ಮಾಡಿದ್ದಾರೆ. ಕಣ್ಣಿಗೆ ಕುಕ್ಕುವ ಆಕರ್ಷಕ ಕುಣಿತ ಎಲ್ಲರ ಗಮನ ಸೆಳೆಯುತ್ತಿದೆ.
ರಾಧಾ ಕಲ್ಯಾಣ ಧಾರಾವಾಹಿಯ ಮೂಲಕ ರಾಧಿಕೆಯಾಗಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದವರು ಕೃತಿಕಾ ರವೀಂದ್ರ. ಬಿಗ್ಬಾಸ್ ಸೀಜನ್ನಿನ ಸ್ಪರ್ಧಿಯೂ ಆಗಿದ್ದ ಕೃತಿಕಾ ಆ ನಂತರ ನಾಯಕಿಯಾಗಿ ಚಿತ್ರರಂಗದಲ್ಲಿ ಮಿಂಚುತ್ತಾರೆಂಬ ನಿರೀಕ್ಷೆಯೇ ಎಲ್ಲರಲ್ಲಿದ್ದದ್ದು ಸುಳ್ಳಲ್ಲ. ಬಿಗ್ಬಾಸ್ ಶೋನ ನಂತರದಲ್ಲಿ ಕೃತಿಕಾ ಕೆಂಗುಲಾಬಿ ಮತ್ತು ಯಾರಿಗೆ ಯಾರುಂಟು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಹಾಗೆ ನೋಡಿದರೆ ಕೃತಿಕಾ ಹತ್ತಾರು ಚಿತ್ರಗಳಲ್ಲಿ ಪಾತ್ರ ನಿರ್ವಹಿಸಬಹುದಿತ್ತು. ಹಾಗಂದ ಮಾತ್ರಕ್ಕೆ ಅವರಿಗೆ ಅವಕಾಶಗಳ ಕೊರತೆ ಕಾಡಿತ್ತೆಂದು ಅಂದುಕೊಳ್ಳುವಂತಿಲ್ಲ. ಆ ಕ್ಷಣಕ್ಕೆ ಮಿರುಗುವಂಥಾ ಆಕರ್ಷಕ ಪಾತ್ರಗಳಲ್ಲಿ ನಟಿಸಬೇಕೆಂಬುದಕ್ಕಿಂತಲೂ, ಪ್ರೇಕ್ಷಕರ ಮನಸಲ್ಲಿ ಪ್ರತಿಷ್ಠಾಪಿತವಾಗುವ ಪಾತ್ರಕ್ಕೆ ಜೀವ ತುಂಬಬೇಕೆಂಬುದು ಕೃತಿಕಾರ ತುಡಿತ. ಆರಂಭ ಕಾಲದಿಂದಲೂ ಸಾಹಿತ್ಯದ ಸಾಂಗತ್ಯ ಹೊಂದಿರೋ ಅವರಿಗೆ ಪುಸ್ತಕಗಳ ಓದು ಬದುಕಿನ ಭಾಗ. ಅಂಥಾ ಓದಿನ ಫಲವಾಗಿ ಬೆಳೆದುಕೊಂಡ ಪ್ರೌಢಿಮೆಯಿಂದಲೇ ಪಾತ್ರಗಳನ್ನೂ ಆಯ್ಕೆ ಮಾಡಿಕೊಳ್ಳೋ ಕೃತಿಕಾ ಆ ವಿಚಾರದಲ್ಲಿ ಚೂಸಿ. ಬಹುಶಃ ಅಂಥಾ ಮನಸ್ಥಿತಿ ಇಲ್ಲದೇ ಹೋಗಿದ್ದಿದ್ದರೆ ಅವರು ಈಗಾಗಲೇ ಒಂದಷ್ಟು ಚಿತ್ರಗಳಲ್ಲಿ ನಟಿಸಿಯಾಗುತ್ತಿತ್ತೇನೋ…
ಕೊರೋನಾ ಕಾಟಕ್ಕೆ ಹೆದರಿ ಎಲ್ಲರಂತೆ ಮನೆಯಲ್ಲಿರುವ ಕೃತಿಕಾ ತನ್ನ ಗೆಳತಿ ಶಿವಾನಿ ಜೊತೆಗೆ ಚೆಂದದ ಟಿಕ್ಟಾಕ್ ಮಾಡಿ ಪೋಸ್ಟ್ ಮಾಡಿದ್ದಾರೆ. ಕಣ್ಣಿಗೆ ಕುಕ್ಕುವ ಆಕರ್ಷಕ ಕುಣಿತ ಎಲ್ಲರ ಗಮನ ಸೆಳೆಯುತ್ತಿದೆ. ಕೃತಿಕಾ ಎಲ್ಲಿರುತ್ತಾರೋ ಶಿವಾನಿ ಕೂಡಾ ಅಲ್ಲಿರುತ್ತಾರೆ. ಜೋಡಿ ಜೀವದಂತೆ ಬೆಸೆದುಕೊಂಡಿರುವ ಈ ಇಬ್ಬರೂ ಟಿಕ್ ಟಾಕ್ ನಲ್ಲೂ ಅಟ್ರಾಕ್ಟ್ ಮಾಡುತ್ತಿರೋದು ಸದ್ಯದ ಸ್ಪೆಷಲ್ಲು!
No Comment! Be the first one.