ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮದುವೆ ಇದೇ ತಿಂಗಳ ೨೪ಕ್ಕೆ ನೆರವೇರಲಿದೆ. ಧ್ರುವ ಸರ್ಜಾ ಮದುವೆಯಾಗುತ್ತಿರೋ ಹುಡುಗಿ ಪ್ರೇರಣಾ ಶಂಕರ್. ಪ್ರೀತಿಸಿದ ಹುಡುಗಿಯೊಟ್ಟಿಗೆ ನಿಶ್ಚಿತಾರ್ಥ ಮುಗಿಸಿಕೊಂಡಿದ್ದ ಧ್ರುವ ಈಗ ಬಿಡುವು ಮಾಡಿಕೊಂಡು ಮದುವೆಯಾಗುತ್ತಿದ್ದಾರೆ!

ಅಷ್ಟಕ್ಕೂ ಈ ಪ್ರೀತಿ ಇಂದು ನಿನ್ನೆಯದ್ದೇನಲ್ಲ. ತೀರಾ ಸಣ್ಣ ವಯಸ್ಸಿನಿಂದಲೇ ಕೈ ಕೈ ಹಿಒಡಿದು ಓಡಾಡಿದ್ದವರು ಪ್ರೇರಣಾ ಮತ್ತು ಧ್ರುವಾ. ಆ ಸ್ನೇಹ ಪ್ರೀತಿಯಾಗಿ ಬರೋಬ್ಬರಿ ಹದಿನೈದು ವರ್ಷಗಳೇ ಕಳೆದಿವೆ. ಧ್ರುವ ನಟನಾಗುವ ಮುಂಚೆಯೇ ಅರಳಿಕೊಂಡಿದ್ದ ಪ್ರೀತಿ ಅವರು ಸ್ಟಾರ್ ನಟರಾಗಿ ಹೊರ ಹೊಮ್ಮಿರೋ ಈ ಹೊತ್ತಿನಲ್ಲಿ ಮದುವೆಯ ಮೂಲಕ ನಿರ್ಣಾಯಕ ಘಟ್ಟ ತಲುಪಿಕೊಂಡಿದೆ. ಮೂವತ್ತು ವರ್ಷದ ಧೃವಾ ಹದಿನೈದು ವರ್ಷಗಳ ಹಿಂದೆಯೇ ತನ್ನ ಹುಡುಗಿಯನ್ನು ಸೆಲೆಕ್ಟ್ ಮಾಡಿಕೊಂಡಿದ್ದರು ಅಂದರೆ ಅದು ಯಾವ ಕಾಲದ ಲವ್ವು ಅಂತಾ ನೀವೇ ಡಿಸೈಡು ಮಾಡಿ!

ಪ್ರೇರಣಾ ಬೆಂಗಳೂರಿನ ಬಸವನಗುಡಿಯ ಹುಡುಗಿ. ಇಲ್ಲಿನ ಪ್ರತಿಷ್ಠಿತ ಖಾಸಗೀ ಇಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿಯೂ ಅವರು ಕಾರ್ಯ ನಿರ್ವಹಿಸಿದ್ದರು. ಈಕೆ ಧ್ರುವ ಸರ್ಜಾ ಕುಟುಂಬಕ್ಕೂ ಅಪರಿಚಿತರೇನಲ್ಲ. ಧ್ರುವ ಮತ್ತು ಪ್ರೇರಣಾ ಕುಟುಂಬದ ಮಧ್ಯೆ ಹೆಚ್ಚೂ ಕಡಿಮೆ ಇಪ್ಪತೈದು ವರ್ಷಕ್ಕೂ ಹೆಚ್ಚಿನ ಸ್ನೇಹವಿದೆ. ಇವರಿಬ್ಬರ ಪ್ರೀತಿಗೆ ಎರಡೂ ಮನೆಯವರ ಒಪ್ಪಿಗೆ ಸಿಕ್ಕಿ ಯಾವ ಕಾಲವೋ ಆಗಿ ಹೋಗಿದೆ. ಧ್ರುವಾ ತಾಯಿ ಕೊಂಚ ಅನಾರೋಗ್ಯಕ್ಕೀಡಾಗಿದ್ದರಿಂದ ಮದುವೆ ವಿಳಂಬವಾಯಿತಷ್ಟೇ. ಇದೀಗ ಧ್ರುವ ಅಮ್ಮ ಕೂಡಾ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಎಂಗೇಜ್ಮೆಂಟ್ ಮಡಿಕೊಂಡಿದ್ದ ಧ್ರುವಾಗೆ ಈಗ ತಾಳಿ ಕಟ್ಟುವ ಶುಭ ವೇಳೆ ಹತ್ತಿರವಾಗುತ್ತಿದೆ.

ಹೇಳಿಕೇಳಿ ಧ್ರುವ ಸರ್ಜಾ ಸ್ಟಾರ್ ನಟರಾಗಿ ಹೊರ ಹೊಮ್ಮಿದ್ದಾರೆ. ಈ ಜಗತ್ತಿನಲ್ಲಿ ಪ್ರೀತಿಯೂ ಸೇರಿದಂತೆ ಎಲ್ಲ ಬಣ್ಣಗಳೂ ಹೆಚ್ಚು ಕಾಲ ಬಾಳಿಕೆ ಬರೋದಿಲ್ಲ ಎಂಬ ಮಾತಿದೆ. ಇಲ್ಲಿ ಹುಟ್ಟಿಕೊಂಡ ಅದೆಷ್ಟೋ ಪ್ರೇಮ ಪ್ರಕರಣಗಳು ಬ್ರೇಕಪ್ಪಿನ ಉರುಳಿಗೆ ಸಿಕ್ಕು ಉಸಿರುಗಟ್ಟಿದ ಉದಾಹರಣೆಗಳೂ ಸಾಕಷ್ಟಿವೆ. ಹೀಗಿರೋವಾಗ ಹದಿನಾಲಕ್ಕು ವರ್ಷಗಳ ಪ್ರೀತಿಯನ್ನು ಎದೆಯಲ್ಲಿಟ್ಟುಕೊಂಡು ಕಾಪಾಡಿದ, ಪ್ರೀತಿಸಿದ ಹುಡುಗಿಯನ್ನೇ ಮದುವೆಯಾಗಲು ನಿರ್ಧರಿಸಿದ ಧ್ರುವ ವಿಶೇಷವಾಗಿ ಕಾಣಿಸುತ್ತಾರೆ. ಬಹುಶಃ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಲವ್ ಸ್ಟೋರಿಯನ್ನು ಬಿಟ್ಟರೆ, ಧ್ರುವಾ ಮತ್ತು ಪ್ರೇರಣಾ ಪ್ರೇಮಕಥೆ ಕನ್ನಡ ಚಿತ್ರರಂಗದ ಪಾಲಿಗೆ ನಿಜಕ್ಕೂ ಸ್ಪೆಷಲ್.

ಧ್ರುವಾ ಸರ್ಜಾರ ಅಣ್ಣ ಚಿರು ಕೂಡಾ ಕನ್ನಡದ ಪ್ರತಿಭಾವಂತ ನಟಿ ಮೇಘನಾ ರಾಜ್ ರನ್ನು ಪ್ರೀತಿಸಿ ಕೈ ಹಿಡಿದಿದ್ದಾರೆ. ಈಗ ತಮ್ಮನ ಮದುವೆಗೆಂದು ಅಣ್ಣ ಒಂದಿಷ್ಟು ದಿನಗಳ ರಜೆ ಘೋಷಿಸಿದ್ದಾರೆ. ಧ್ರುವಾ ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡಿದರೆ ಚಿರು ವರ್ಷಕ್ಕೆ ಒಂಭತ್ತು ಚಿತ್ರಗಳಲ್ಲಿ ನಟಿಸುತ್ತಾರೆ! ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿರುವ ನಟ ಚಿರಂಜೀವಿ ಸರ್ಜಾ. ಸದ್ಯ ಚಿರು ಅನಿಲ್ ಮಂಡ್ಯ ನಿರ್ದೇಶನದ ಕ್ಷತ್ರಿಯ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಸಹೋದರನ ಮದುವೆಗೆಂದು ಒಂದಿಷ್ಟು ದಿನಗಳ ಕಾಲ ಬಿಡುವು ಪಡೆದಿದ್ದಾರೆ. ಕೆಲಸದ ನೆಪದಲ್ಲಿ ಸಂಬಂಧಗಳನ್ನು ಮರೆಯುವ ಜನರ ನಡುವೆ ಇರೋ ಕೆಲಸವನ್ನೂ ಪಕ್ಕಕ್ಕಿಟ್ಟು ಸಹೋದರನ ಮದುವೆಗಾಗಿ ರಜೆ ತೆಗೆದುಕೊಂಡ ಚಿರು ನಿಜಕ್ಕೂ ಗ್ರೇಟ್!!

CG ARUN

EXCLUSIVE : Video ಒಳಗಿದೆ!

Previous article

ನಾನು ಯಾವತ್ತೂ ಭೂಮಿ ಮೇಲೆ ದುಡ್ಡು ಹಾಕಿಲ್ಲ!

Next article

You may also like

Comments

Leave a reply

Your email address will not be published. Required fields are marked *